ಬ್ರಿಟನ್‌ ಲೇಬರ್‌ ಪಕ್ಷದ ಅಧ್ಯಕ್ಷ ಹುದ್ದೆ ರೇಸಲ್ಲಿ ಭಾರತೀಯ ಲಿಸಾ ನಂದಿ!

By Suvarna NewsFirst Published Dec 16, 2019, 11:59 AM IST
Highlights

 ಬ್ರಿಟನ್‌ ಸಂಸತ್‌ ಚುನಾವಣೆಯಲ್ಲಿ ಜೆರೆಮಿ ಕಾರ್ಬಿನ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದ ಲೇಬರ್‌ ಪಕ್ಷ | ಬ್ರಿಟನ್‌ ಲೇಬರ್‌ ಪಕ್ಷದ ಅಧ್ಯಕ್ಷ ಹುದ್ದೆ ರೇಸಲ್ಲಿ ಭಾರತೀಯ ಲಿಸಾ ನಂದಿ| 

ಲಂಡನ್‌[ಡಿ.16]: ಇತ್ತಿಚೆಗೆ ನಡೆದ ಬ್ರಿಟನ್‌ ಸಂಸತ್‌ ಚುನಾವಣೆಯಲ್ಲಿ ಜೆರೆಮಿ ಕಾರ್ಬಿನ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದ ಲೇಬರ್‌ ಪಕ್ಷ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ, ಭಾರತೀಯ ಮೂಲದ ಸಂಸದೆಯೊಬ್ಬರು ಲೇಬರ್‌ ಪಕ್ಷದ ಮುಖ್ಯಸ್ಥರ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಕೆಲಸ ಹೋದರೆ 2 ವರ್ಷ ವೇತನ: ಕೇಂದ್ರದ ನಿರ್ಧಾರ ನೀಡಿದೆ ಚೇತನ!

40 ವರ್ಷದ ಲಿಸಾ ನಂದಿ ವಿಗಾನ್‌ ಕ್ಷೇತ್ರದಿಂದ ಮರು ಆಯ್ಕೆ ಆಗಿದ್ದು, ತಾವು ಪಕ್ಷದ ಅಧ್ಯಕ್ಷ ಹುದ್ದೆ ಆಕಾಂಕ್ಷಿ ಎನ್ನುವುದನ್ನು ಖಚಿತಪಡಿಸಿದ್ದಾರೆ. ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ತಾವು ಮುಂದಿನ ಚುನಾವಣೆಯಲ್ಲಿ ನೇತೃತ್ವ ವಹಿಸುವುದಿಲ್ಲ ಎಂದು ಜೆರೆಮಿ ಘೋಷಿಸಿದ್ದು, ಶೀಘ್ರದಲ್ಲೇ ರಾಜೀನಾಮೆ ಪ್ರಕಟಿಸುವ ಸಾಧ್ಯತೆ ಇದೆ.

ಸ್ಫೋಟಗೊಂಡು ಇಬ್ಬರನ್ನು ಬಲಿ ಪಡೆದ ಬಾಯ್ಲರ್‌ಗೆ ಲೈಸನ್ಸ್‌ ಇರಲಿಲ್ಲ!

ಲಿಸಾ ನಂದಿ ಅವರ ತಂದೆ ದೀಪಕ್‌ ನಂದಿ ಮತ್ತು ಲೂಯಿಸ್‌ ನಂದಿ ಭಾರತೀಯ ಮೂಲದವರಾಗಿದ್ದಾರೆ.

click me!