ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಫೋಟೋ ಮೂಲಕ ಭಾರಿ ಖ್ಯಾತಿ ಗಳಿಸಿದ ಪಾಕಿಸ್ತಾನದ ಚಾಯ್‌ವಾಲ ದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ. ಲಂಡನ್‌ನಲ್ಲೂ ಚಾಯ್‌ವಾಲ ಶಾಪ್ ಶಾಖೆ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಆದರೆ ಶ್ರೀಮಂತ ಉದ್ಯಮಿಯಾಗಿರುವ ಈ ಚಾಯ್‌ವಾಲಾನ ಗಡೀಪಾರು ಮಾಡಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.
ಲಾಹೋರ್(ಏ.14) ನೀಲಿ ಕಣ್ಣು, ಮುಗ್ದತೆ, ಹ್ಯಾಂಡ್ಸಮ್ ಲುಕ್‌ನಿಂದ ಪಾಕಿಸ್ತಾನದ ಚಾಯ್‌ವಾಲ ಅರ್ಶದ್ ರಾತ್ರೋ ರಾತ್ರಿ ಸ್ಟಾರ್ ಆಗಿದ್ದ. ಪಾಕಿಸ್ತಾನದಲ್ಲಿ ಸಣ್ಣ ಚಹಾ ಅಂಗಡಿ ಇಟ್ಟುಕೊಂಡಿದ್ದ ಇದೇ ಅರ್ಶದ್ ಸೆಲೆಬ್ರೆಟಿಯಾಗಿದ್ದ. ಪಾಕಿಸ್ತಾನ ಮಾಧ್ಯಮಗಳು ಈತನ ಸಂದರ್ಶನ ಮಾಡಿತ್ತು. ಹಲವರು ನೆರವು ನೀಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಲು ಆರಂಭಿಸಿದ್ದರು. ಪರಿಣಾಮ ದೊಡ್ಡ ರೆಸ್ಟೋರೆಂಟ್ ಆರಂಭಗೊಂಡಿತು, ಈತನ ಶಾಖೆ ಲಂಡನ್‌ನಲ್ಲಿ ತೆರೆಯಿತು. ಪಾಕಿಸ್ತಾನದ 10 ಮಿಲಿಯನ್ ಹಣವನ್ನು ಹೂಡಿಕೆ ಮಾಡಿ ಉದ್ಯಮ ವಿಸ್ತರಿಸಿದ್ದ. ಇದೀಗ ಪಾಕಿಸ್ತಾನದ ಯಶಸ್ವಿ ಉದ್ಯಮಿಯಾಗಿ ಅರ್ಶದ್ ಬೆಳೆದಿದ್ದಾನೆ. ಆದರೆ ಇದೀಗ ಅರ್ಶದ್ ಮೇಲೆ ಪಾಕಿಸ್ತಾನ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಅರ್ಶದ್ ಗಡೀಪಾರು ಮಾಡಲು ಮುಂದಾಗಿದೆ.
ಪಾಕಿಸ್ತಾನ ಪ್ರಜೆ ಅಲ್ಲ
2106ರಲ್ಲಿ ಜವೆರಿಯಾ ಅಲಿ ಅನ್ನೋ ಪೋಟೋಗ್ರಾಫರ್ ಈ ನೀಲಿ ಕಣ್ಣಿನ ಚಾಯ್‌ವಾಲ್ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ. ಅರ್ಶದ್ ನೀಲಿ ಕಣ್ಣು ಎಲ್ಲರನ್ನು ಆಕರ್ಷಿಸಿತ್ತು. ಹೀಗಾಗಿ ಅರ್ಶದ್ ಸ್ಟಾರ್ ಆಗಿ ಬದಲಾಗಿದ್ದ. ಇದೀಗ ಪಾಕಿಸ್ತಾನ ಸರ್ಕಾರ ಅರ್ಶದ್ ಮೇಲೆ ಕ್ರಮಕ್ಕೆ ಮುಂದಾಗಿದೆ.ಇದಕ್ಕೆ ಮುಖ್ಯ ಕಾರಣ ಈತ ಪಾಕಿಸ್ತಾನಿ ಪ್ರಜೆ ಅಲ್ಲ ಅನ್ನೋದು ಪಾಕಿಸ್ತಾನ ಸರ್ಕಾರದ ವಾದ.
ಬಿಲ್‌ಗೇಟ್ಸ್‌ಗೆ ಟೀ ಮಾಡಿಕೊಟ್ಟ ಡಾಲಿ ಚಾಯ್‌ವಾಲಾ ಕಾರ್ಯಕ್ರಮಕ್ಕೆ ಬರಲು ಪಡೆಯುವ ಫೀ ಎಷ್ಟು?
ಕೋರ್ಟ್‌ನಲ್ಲಿದೆ ಪ್ರಕರಣ
ಅರ್ಶದ್ ಹುಟ್ಟಿ ಬೆಳೆದಿದ್ದು ಪಾಕಿಸ್ತಾನದಲ್ಲಿ. ಆದರೆ ಪಾಕಿಸ್ತಾನ ಸರ್ಕಾರ ಕೆಲ ದಾಖಲೆ ಮುಂದಿಟ್ಟು ಗಡೀಪಾರಿಗೆ ಮುಂದಾಗಿದೆ. ಅರ್ಶದ್ ತಾಯಿ ಪಾಕಿಸ್ತಾನದ ಮೂಲದವರು. ಆದರೆ ತಂದೆ ಆಫ್ಘಾನಿಸ್ತಾನದ ಪಶ್ತೂನ್. ಆಪ್ಘಾನ್‌ನಿಂದ ಹಲವು ದಶಕಗಳ ಮೊದಲು ವಲಸೆ ಬಂದ ಕುಟುಂಬ. ಮೂಲ ಪಾಕಿಸ್ತಾನಿಯಾಗಲು ತಂದೆ ಪಾಕಿಸ್ತಾನದವರಾಗಿರಬೇಕು. 1999ರಲ್ಲಿ ಪಾಕಿಸ್ತಾದನ ಖೈಬರ್ ಪಂಖ್ತುಕ್ವಾ ಪ್ರಾಂತ್ಯದಲ್ಲಿ ಹುಟ್ಟಿದ ಅರ್ಶದ್ ಪಾಕಿಸ್ತಾನಿ ಅಲ್ಲ ಅನ್ನೋದು ಪಾಕ್ ಸರ್ಕಾರದ ವಾದ.
ಸಮಸ್ಯೆ ಏನು?
ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ನಡುವೆ ಭಾರಿ ತಿಕ್ಕಾಟ ನಡೆಯುತ್ತಿದೆ. ದಾಳಿ, ಹೋರಾಟ ನಡೆಯುತ್ತಲೇ ಇದೆ. ಇತ್ತ ಪಾಕಿಸ್ತಾನ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಪಾಕಿಸ್ತಾನದಲ್ಲಿ ನೆಲೆಸಿರುವ ಅಫ್ಘಾನಿಸ್ತಾನಿಗಳನ್ನು ಹೊರಹಾಕುವ ಕಾರ್ಯದಲ್ಲಿ ಪಾಕಿಸ್ತಾನ ಸರ್ಕಾರ ನಿರತವಾಗಿದೆ. ಇದರ ಅಡಿಯಲ್ಲಿ ಅರ್ಶದ್‌ನ ಗಡೀಪಾರು ಮಾಡಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.
ಕೋರ್ಟ್ ಮೆಟ್ಟಿಲೇರಿದ ಪ್ರಕರಣ
ಪಾಕಿಸ್ತಾನ ಸರ್ಕಾರದ ನಿರ್ಧಾರದ ವಿರುದ್ದ ಅರ್ಶದ್ ಕೋರ್ಟ್ ಮೆಟ್ಟಿಲೇರಿದ್ದಾರೆ. ತಾನೂ ಪಾಕಿಸ್ತಾನ ಪ್ರಜೆ ಎಂದು ಹಲವು ದಾಖಲೆ ನೀಡಿದ್ದಾರೆ. ತಂದೆ, ತಾಯಿ ಇಬ್ಬರು ಪಾಕಿಸ್ತಾನದಲ್ಲೇ ನೆಲೆಸಿದ್ದಾರೆ. ತಾನು ಹುಟ್ಟಿದ್ದು ಪಾಕಿಸ್ತಾನದಲ್ಲಿ. ಹೀಗಾಗಿ ತಾನು ಪಾಕಿಸ್ತಾನಿ ಪ್ರಜೆ ಎಂದು ಅರ್ಶದ್ ವಾದ ಮಂಡಿಸಿದ್ದಾರೆ.
'ಚಹಾ ಮಾರೋರಿಗೆ ರೋಲ್ಸ್ ರಾಯ್ಸ್ ಕೊಳ್ಳೋಕಾಗಲ್ಲ ಅಂತ ಯಾರು ಹೇಳಿದ್ದು?' ಡಾಲಿ ಚಾಯ್‌ವಾಲಾನ ಹೊಸ ವಿಡಿಯೋ ವೈರಲ್