
ನವದೆಹಲಿ(ಅ.02): ಲಡಾಖ್(Ladakh), ಸಿಕ್ಕಿಂ(Sikkim), ಅರುಣಾಚಲಪ್ರದೇಶ(Arunachal Pradesh) ಗಡಿಯಲ್ಲಿ ಭಾರತದ ಜೊತೆಗೆ ಸದಾ ಕ್ಯಾತೆ ತೆಗೆಯುವ ಚೀನಾ(China) ಸೇನೆ, ಭಾರತದ ಜೊತೆಗಿನ ಗಡಿ ನಿರ್ವಹಣೆಯ ತನ್ನ ಸೇನಾ ಕೇಂದ್ರಕ್ಕೆ ಇದೀಗ ಪಾಕಿಸ್ತಾನದ(Pakistan) ಹಲವು ಅಧಿಕಾರಿಗಳನ್ನು ನೇಮಿಸಿಕೊಂಡಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಗುಪ್ತಚರ ಮಾಹಿತಿ ಹಂಚಿಕೆಗಾಗಿ ಉಭಯ ದೇಶಗಳು ಮಾಡಿಕೊಂಡ ಒಪ್ಪಂದದ ಅನ್ವಯ ಈ ನೇಮಕಾತಿ ನಡೆದಿದೆ ಎಂದು ವರದಿಗಳು ಹೇಳಿವೆಯಾದರೂ, ತನ್ನ ಗಡಿ ಪ್ರದೇಶದಲ್ಲಿ ಎರಡೂ ವೈರಿ ದೇಶಗಳ ಸೇನಾ ಪಡೆಗಳ ಸಮ್ಮಿಲನ, ಸಹಜವಾಗಿಯೇ ಭಾರತದ ಕಳವಳಕ್ಕೆ ಕಾರಣವಾಗಿದೆ.
ಗುಪ್ತಚರ ಇಲಾಖೆ ಬೆಳಕು ಚೆಲ್ಲಿರುವ ಈ ಬೆಳವಣಿಗೆ ಮೇಲೆ ಭಾರತೀಯ ಸೇನೆ(Indian Army), ವಿದೇಶಾಂಗ ಇಲಾಖೆ ಮತ್ತು ಗೃಹ ಸಚಿವಾಲಯಗಳು ನಿಗಾ ಇಟ್ಟಿವೆ ಎಂದು ಮೂಲಗಳು ತಿಳಿಸಿವೆ.
ನೇಮಕ:
ಭಾರತ(India), ಟಿಬೆಟ್(Tibet) ಜೊತೆ ಹೊಂದಿರುವ ಗಡಿ ನಿರ್ವಹಣೆಗಾಗಿ ಚೀನಾ ಸೇನೆಯಲ್ಲಿ ವೆಸ್ಟರ್ನ್ ಥಿಯೇಟರ್ ಕಮಾಂಡ್ ಎಂಬ ವಿಭಾಗವಿದೆ. ಇನ್ನು ಹಾಂಕಾಂಗ್, ಮಕಾವ್ ಮತ್ತಿತರೆ ಪ್ರದೇಶಗಳ ಗಡಿ ನಿರ್ವಹಣೆಗೆ ಸದರ್ನ್ ಥಿಯೇಟರ್ ಕಮಾಂಡ್ ಎಂಬ ವಿಭಾಗವಿದೆ. ಈ ಎರಡು ವಿಭಾಗಗಳಿಗೆ ಇತ್ತೀಚೆಗೆ ಪಾಕಿಸ್ತಾನ ಸೇನೆಯ ಕೆಲ ಸಂಪರ್ಕ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಇದಲ್ಲದೆ ಚೀನಾದ ಸೇನೆಗೆ ಯುದ್ಧ ತರಬೇತಿ, ಯುದ್ಧ ಸಿದ್ಧತೆ ಮತ್ತು ಕಾಯತಂತ್ರ ರೂಪಿಸುವ ಸೆಂಟ್ರಲ್ ಮಿಲಿಟರಿ ಕಮೀಷನ್‌ನ ಜಾಯಿಂಟ್ ಸ್ಟಾಫ್ ಡಿಪಾರ್ಟ್‌ಮೆಂಟ್‌ಗೆ ಪಾಕ್ ಸೇನೆಯ ಕರ್ನಲ್ ದರ್ಜೆಯ ಅಧಿಕಾರಿಗಳನ್ನು ಕೂಡಾ ನಿಯೋಜಿಸಲಾಗಿದೆ.
ಪೂರ್ವ ಲಡಾಖ್‌ನಲ್ಲಿ ಸೇನಾ ಹಿಂಪಡೆತದ ಬಗ್ಗೆ ಭಾರತ ಮತ್ತು ಚೀನಾ ನಡುವೆ ಹಲವು ಸುತ್ತಿನ ಮಾತುಕತೆ ನಡೆದು ಒಪ್ಪಂದ ಮಾಡಿಕೊಂಡಿದ್ದರೂ, ಚೀನಾ ಇನ್ನೂ ಪೂರ್ಣ ಪ್ರಮಾಣದಲ್ಲಿ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿಲ್ಲ. ಜೊತೆಗೆ ಅಲ್ಲಲ್ಲಿ ಕಾಯಂ ಸ್ವರೂಪದ ಮುಂಚೂಣಿ ನೆಲೆಗಳನ್ನು ನಿರ್ಮಿಸುತ್ತಿದೆ ಎಂದು ಇತ್ತೀಚಿನ ಗುಪ್ತಚರ ವರದಿಗಳು ಎಚ್ಚರಿಸಿದ್ದವು. ಅದರ ಬೆನ್ನಲ್ಲೇ ಭಾರತದ ಗಡಿಯಲ್ಲಿನ ಚೀನಾ ಸೇನಾ ಕೇಂದ್ರದಲ್ಲಿ ಪಾಕಿಸ್ತಾನದ ಚಲನವಲನ ಕಳವಳಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ