
ಇಸ್ಲಾಮಾಬಾದ್ (ಡಿ.09) ವೃತ್ತಿಪರತೆಯ ಅಂತ್ಯಸಂಸ್ಕಾರ ಎಂದರೆ ಏನು? ಇದಕ್ಕೆ ಉದಾಹರಣೆ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿ ನಡೆ ಎಂದಿದ್ದಾರೆ. ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಜನರಲ್ ಅಹಮ್ಮದ್ ಶರೀಫ್ ಚೌಧರಿಯ ನಡೆಗೆ ಪಾಕಿಸ್ತಾನದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಪತ್ರಕರ್ತೆ ಕೇಳಿದ ಪ್ರಶ್ನಗೆ ನೆಟ್ಟಗೆ ಉತ್ತರ ಹೇಳುವ ಬದಲು, ಕಣ್ಣು ಹೊಡೆದು ಹಾರಿಕೆ ಉತ್ತರ ನೀಡಿದ ಘಟನೆ ನಡೆದಿದೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿದ್ದಾರೆ. ಅವರ ಹತ್ಯೆಗೆ ಪಾಕಿಸ್ತಾನ ಸೇನೆ ಪ್ರಯತ್ನಿಸಿದೆ ಅನ್ನೋ ಆರೋಪ ಇದೆ. ಇದಕ್ಕೆ ಭಾರತ ಫಂಡಿಂಗ್ ಮಾಡಿದೆ ಎಂದು ನೀವು ಹೇಳುತ್ತಿದ್ದೀರಿ ಎಂದು ಪತ್ರಕರ್ತೆ ಪ್ರಶ್ನಿಸಿದ್ದಾರೆ. ಇದಕ್ಕೆ ಉರ್ದುವಿನಲ್ಲಿ ಉತ್ತರ ಹೇಳಿದ ಅಹಮ್ಮದ್ ಶರೀಫ್ ಚೌದರಿ, ನೀವು ಹೇಳಿದ ನಾಲ್ಕನೇ ಪಾಯಿಂಟ್, ಅಂದರೆ ಆತ ಮಾನಸಿಕ ಅಸ್ವಸ್ಥ ಎಂದಿದ್ದಾರೆ. ಇಷ್ಟು ಉತ್ತರ ಹೇಳಿದ ಚೌಧರಿ, ಪಾಕಸ್ತಾನ ಮಹಿಳಾ ಪತ್ರಕರ್ತೆಗೆ ಕಣ್ಣು ಹೊಡೆದು ನಕ್ಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ವಾಸ ಭಾರಿ ವಿವಾದಕ್ಕೆ ಕಾರಣವಾಗಿದೆ. ಇಮ್ರಾನ್ ಖಾನ್ ಹತ್ಯೆಗೆ ಪಾಕಿಸ್ತಾನ ಸೇನೆ ಪ್ರಯತ್ನಿಸಿತ್ತು ಅನ್ನೋ ಆರೋಪ ಭುಗಿಲೇಳುತ್ತಿದ್ದಂತೆ ಕೋಲಾಹಲ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ನಡೆದ ಘಟನೆಗಳು ಇಮ್ರಾನ್ ಖಾನ್ ಹತ್ಯೆ ಪ್ರಯತ್ನಕ್ಕೆ ಪುಷ್ಠಿ ನೀಡಿತ್ತು. ಇದೇ ಕುರಿತು ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಜನರಲ್ ಅಹಮ್ಮದ್ ಶರೀಫ್ ಚೌಧರಿ ಪ್ರತಿಕ್ರಿಯೆ ನೀಡಿದ್ದರು. ಇಮ್ರಾನ್ ಖಾನ್ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾರೆ. ಜೈಲಿನಲ್ಲಿರುವ ಇಮ್ರಾನ್ ಖಾನ್‌ಗೆ ಭಾರತ ಆರ್ಥಿಕ ನೆರವು ನೀಡುತ್ತಿದೆ. ಭಾರತದ ನೆರವಿನಿಂದ ಇಮ್ರಾನ್ ಖಾನ್ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಕುರಿತಂತೆ ಅಹಮ್ಮದ್ ಶರೀಫ್ ಚೌಧರಿಗೆ ಪತ್ರಕರ್ತೆ ಪ್ರಶ್ನಿಸಿದ್ದರು.
ಸೇನೆ ಎಂದರೆ ಶಿಸ್ತು, ವೃತ್ತಿಪರತೆ. ಆದರೆ ವೃತ್ತಿಪರತೆಯ ಅಂತ್ಯಂಸ್ಕಾರ ಎಂದರೆ ಇದು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಪಾಕಿಸ್ತಾನ ಸೇನೆಯ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯಿಂದ ಈ ರೀತಿಯ ಉತ್ತರ ನಡೆ ನಿರೀಕ್ಷಿಸುವುದರಲ್ಲಿ ಅಚ್ಚರಿಯಿಲ್ಲ ಎಂದು ಹಲವರು ಹೇಳಿದ್ದಾರೆ. ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಜನರಲ್ ಮಹಿಳಾ ಪತ್ರಕರ್ತೆಗೆ ಸರಿಯಾದ ಉತ್ತರ ನೀಡದೆ ಕಣ್ಣು ಸನ್ನೆ ಮಾಡಿ ಅಗೌರವ ತೋರಿದ್ದಾರೆ. ಇಷ್ಟೇ ಅಲ್ಲ ಮಾಜಿ ಪ್ರಧಾನಿ, ಜನರಿಂದ ಚುನಾಯಿತ ಪ್ರತಿನಿಧಿಯನ್ನು ಅವಮಾನಿಸಿದ್ದಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಸೇನೆ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲೀಗಿಡಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ