
ಇಸ್ಲಾಮಾಬಾದ್ (ಮೇ.09): ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ, ಪಾಕಿಸ್ತಾನದ ಶೆಹಬಾಜ್ ಷರೀಫ್ ಸರ್ಕಾರವು ತನ್ನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಬದಲಿಸಲು ನಿರ್ಧರಿಸಿದೆ ಹಾಗೂ ಅವರನ್ನು ಬಂಧನದಲ್ಲಿ ಇರಿಸಿದೆ ಎಂದು ತಿಳಿದುಬಂದಿದೆ ಹಾಗೂ ಅವರ ಬದಲಿಗೆ ಸಾಹಿರ್ ಶಂಶಾದ್ ಮಿರ್ಜಾ ಅವರನ್ನು ನೇಮಿಸುವ ಸಾಧ್ಯತೆಯಿದೆ.
ಪಾಕಿಸ್ತಾನ ಸೇನಾ ಮುಖ್ಯಸ್ಥರು ಇತ್ತೀಚೆಗೆ ಕಾಶ್ಮೀರವು ಪಾಕ್‌ನ ಕಂಠನಾಳ ಎಂದಿದ್ದರು. ಅವರ ಈ ಹೇಳಿಕೆಯೇ ಪಾಕಿಸ್ತಾನಿ ಉಗ್ರರು ಪಹಲ್ಗಾಂ ಮೇಲೆ ದಾಳಿ ನಡೆಸಲು ಕಾರಣವಾಯಿತು ಎಂದು ಹೇಳಲಾಗಿತ್ತು. ಆದರೆ ಇತ್ತೀಚಿನ ಭಾರತದ ಆಪರೇಶನ್ ಸಿಂದೂರ ದಾಳಿಯನ್ನು ಹಿಮ್ಮೆಟ್ಟಿಸಲು ಅವರು ವಿಫಲರಾದರು ಎಂಬ ಆಕ್ರೋಶ ಪಾಕಿಸ್ತಾನದಲ್ಲಿ ನೆಲೆಸಿದೆ. ಹೀಗಾಗಿ ಅವರನ್ನು ಬಂಧಿಸಿ ಪದಚ್ಯುತಿ ಮಾಡಲಾಗಿದೆ ಎನ್ನಲಾಗಿದೆ.
ಉಗ್ರರು, ಯೋಧರು ಭಾಗಿ: ಭಾರತದ ದಾಳಿಯಲ್ಲಿ ಹತರಾದ 80 ಜನರ ಅಂತ್ಯಕ್ರಿಯೆ ಬುಧವಾರ ಸಂಜೆ ಪಾಕಿಸ್ತಾನದ ವಿವಿಧೆಡೆ ನಡೆದಿದೆ. ಈ ಪೈಕಿ ಲಾಹೋರ್ ಬಳಿಯ ಮುರೀದ್ಕೆಯಲ್ಲಿ ಸಾವನ್ನಪ್ಪಿದ 3 ಪುರುಷರ ಅಂತ್ಯಕ್ರಿಯೆಯ ಪ್ರಾರ್ಥನೆಯ ನೇತೃತ್ವವನ್ನು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಹಫೀಜ್ ಅಬ್ದುಲ್ ರೌಫ್ ವಹಿಸಿದ್ದ. ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನಾ ಸಿಬ್ಬಂದಿ, ಪೊಲೀಸರು, ನಾಗರಿಕ ಅಧಿಕಾರಿಗಳು ಮತ್ತು ಹಫೀಜ್ ಸಯೀದ್ ಸ್ಥಾಪಿಸಿದ ನಿಷೇಧಿತ ಜಮಾತ್-ಉದ್-ದವಾ (ಜೆಯುಡಿ) ಸದಸ್ಯರು ಭಾಗವಹಿಸಿದ್ದರು.
ಈಡನ್ ಗಾರ್ಡನ್ಸ್ ಬಳಿಕ ಜೈಪುರದ ಸ್ಟೇಡಿಯಂಗೆ ಬಾಂಬ್ ಬೆದರಿಕೆ
ಭಾರತದ 16 ಯೂಟ್ಯೂಬ್, 32 ವೆಬ್‌ಸೈಟ್‌ಗಳಿಗೆ ಪಾಕ್ ನಿರ್ಬಂಧ: ಪಾಕಿಸ್ತಾನದ ವಿರುದ್ಧ ಭಾರತದ ಆಪರೇಷನ್ ಸಿಂದೂರ ಕಾರ್ಯಾಚರಣೆ ಬೆನ್ನಲ್ಲೇ ಪಾಕಿಸ್ತಾನವು ಭಾರತದ 16 ಯೂಟ್ಯೂಬ್ ಚಾನೆಲ್‌ಗಳು, 31 ಯೂಟ್ಯೂಬ್ ಲಿಂಕ್ಸ್, 32 ಜಾಲತಾಣಗಳನ್ನು ನಿರ್ಬಂಧಿಸಿದೆ. ಪಾಕಿಸ್ತಾನದ ದೂರ ಸಂಪರ್ಕ ಪ್ರಾಧಿಕಾರ(ಪಿಟಿಎ) ಈ ಕ್ರಮ ಕೈಗೊಂಡಿದ್ದು, ‘ರಾಷ್ಟ್ರೀಯ ಭದ್ರತೆ ಮತ್ತು ಪಾಕಿಸ್ತಾನದ ಡಿಜಿಟಲ್ ವ್ಯವಸ್ಥೆಯನ್ನು ರಕ್ಷಿಸಲು ಪ್ರಾದೇಶಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 16 ಭಾರತೀಯ ಯೂಟ್ಯೂಬ್ ಸುದ್ದಿ ಚಾನೆಲ್‌ಗಳು, 31 ಯೂಟ್ಯೂಬ್ ಲಿಂಕ್‌ಗಳು ಮತ್ತು 32 ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವ ಕ್ರಮ ಕೈಗೊಳ್ಳಲಾಗಿದೆ’ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ