ಲಂಡನ್ ನಲ್ಲಿ ವಜ್ರ ಉದ್ಯಮಿ ನೀರವ್ ಮೋದಿಗೆ ಸಂಕಷ್ಟ

By Web DeskFirst Published Mar 18, 2019, 9:22 PM IST
Highlights

ಮೋದಿ ಸರ್ಕಾರಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು | ಉದ್ಯಮಿ ವಿಜಯ್ ಮಲ್ಯ ಬಳಿಕ ಈಗ ವಜ್ರ ಉದ್ಯಮಿ ನೀರವ್ ಮೋದಿ ಸರದಿ.

ಲಂಡನ್, [ಮಾ.18]: ಪಂಜಾಬ್ ಬ್ಯಾಂಕ್ ಗೆ 13 ಸಾವಿರ ಕೋಟಿ ರೂ. ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಉದ್ಯಮಿ ನೀರವ್ ಮೋದಿಗೆ ಬಂಧನ ಭೀತಿ ಎದುರಾಗಿದೆ.

ವಂಚನೆ ಪ್ರಕರಣ ಸಂಬಂಧ ನೀರವ್ ಮೋದಿಗೆ ಲಂಡನ್ ವೆಸ್ಟ್‌ಮಿನಿಸ್ಟರ್ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಆದೇಶಿಸಿ, ಮುಂದಿನ ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಿದೆ.
 
ಲಂಡನ್ ಬೀದಿಗಳಲ್ಲಿ ರಾಜಾರೋಷವಾಗಿ ತಿರುಗಾಡುತ್ತಿರುವ ನೀರವ್ ಮೋದಿ!

ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಶೀಘ್ರವೇ ನೀರವ್ ಮೋದಿಯನ್ನು ಲಂಡನ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಇತ್ತೀಚೆಗೆ ಲಂಡನ್ ನ ಬೀದಿಗಳಲ್ಲಿ ಕಾಣಿಸಿಕೊಂಡಿದ್ದ ನೀರವ್ ಮೋದಿಗೆ ಇದೀಗ ಬಂಧನ ಭೀತಿ ಎದುರಾಗಿದೆ.

ED Sources: London's Westminster Court has issued arrest warrant against Nirav Modi. India had requested his extradition from the UK pic.twitter.com/DeQZ2B5DpY

— ANI (@ANI)

ವಂಚನೆ ಪ್ರಕರಣ ಸಂಬಂಧ ನೀರವ್ ಮೋದಿಯನ್ನು ಹಸ್ತಾಂತರ ಮಾಡುವಂತೆ ಇಂಗ್ಲೆಂಡ್ ಸರ್ಕಾರಕ್ಕೆ ಭಾರತ ಮನವಿ ಮಾಡಿತ್ತು. ಈ ಮೂಲಕ ಮಲ್ಯ ಬಳಿಕ ನೀರವ್ ಮೋದಿ ಹಸ್ತಾಂತರ ಪ್ರಕ್ರಿಯೆ ವಿಚಾರದಲ್ಲೂ ಭಾರತ ಮತ್ತೊಂದು ರಾಜತಾಂತ್ರಿಕ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.

click me!