ಭಾರತ ಮಾಲಿನ್ಯ ತಡೆಯುತ್ತಿಲ್ಲ, ಡೊನಾಲ್ಡ್‌ ಟ್ರಂಪ್‌ ಆರೋಪ!

By Suvarna NewsFirst Published Oct 24, 2020, 2:20 PM IST
Highlights

ಭಾರತ, ರಷ್ಯಾ ಹಾಗೂ ಚೀನಾ ದೇಶಗಳಲ್ಲಿ ಅತಿ ಹೆಚ್ಚಿನ ವಾಯು ಮಾಲಿನ್ಯ ಇದೆ| ಈ ದೇಶಗಳು ವಾಯು ಮಾಲಿನ್ಯ ತಡೆಗಟ್ಟಲು ಪ್ರಯತ್ನ ಮಾಡಿಲ್ಲ

 

ವಾಷಿಂಗ್ಟನ್‌(ಅ.24): ಭಾರತ, ರಷ್ಯಾ ಹಾಗೂ ಚೀನಾ ದೇಶಗಳಲ್ಲಿ ಅತಿ ಹೆಚ್ಚಿನ ವಾಯು ಮಾಲಿನ್ಯ ಇದೆ. ಆದರೂ ಈ ದೇಶಗಳು ವಾಯು ಮಾಲಿನ್ಯ ತಡೆಗಟ್ಟಲು ಪ್ರಯತ್ನ ಮಾಡಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದಾರೆ.

ಅಲ್ಲದೇ ಅಸಮಂಜಸ ಪ್ಯಾರಿಸ್‌ ಹವಾಮಾನ ಒಪ್ಪಂದಿಂದ ಅಮೆರಿಕ ಹೊರಬಂದ ನಿರ್ಧಾರವನ್ನು ಟ್ರಂಪ್‌ ಸಮರ್ಥಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್‌, ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಅಮೆರಿಕದ ವಾಯು ಗುಣಮಟ್ಟ ಉತ್ತಮವಾಗಿದೆ. ಅದೇ ಭಾರತವನ್ನು ನೋಡಿ, ವಾಯು ಗುಣಮಟ್ಟಅತ್ಯಂತ ಕಳಪೆ ಆಗಿದೆ.

ರಷ್ಯಾ ಮತ್ತು ಚೀನಾದಲ್ಲೂ ವಾಯು ಗುಣಮಟ್ಟತೀರಾ ಕಳಪೆ ಆಗಿದೆ. ಈ ದೇಶಗಳು ವಾಯು ಮಾಲಿನ್ಯ ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದಿದ್ದಾರೆ.

. ಆದರೆ, ನಾವು ಕೈಗಾರಿಕೆಗಳನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದೇವೆ. ಒಂದು ವೇಳೆ ನಾವು ಪ್ಯಾರಿಸ್‌ ಒಪ್ಪಂದವನ್ನು ಒಪ್ಪಿಕೊಂಡಿದ್ದರೆ ವಾಯು ಮಾಲಿನ್ಯದ ಹೆಸರಿನಲ್ಲಿ ಕೋಟ್ಯಂತರ ಡಾಲರ್‌ಗನ್ನು ಖರ್ಚು ಮಾಡಬೇಕಾಗುತ್ತಿತ್ತು ಎಂದು ಹೇಳಿದ್ದಾರೆ.

click me!