Operation Sindhu: ಇರಾನ್​ಗೂ- ಚಿಕ್ಕಬಳ್ಳಾಪುರಕ್ಕೂ ಅಬ್ಬಾ ಇದೆಂಥ ನಂಟು? ಅಂದು ಬಂದಿದ್ದ ನಾಯಕ ಖಮೇನಿ: ರೋಚಕ ಸ್ಟೋರಿ ಇಲ್ಲಿದೆ

Published : Jun 26, 2025, 01:26 PM ISTUpdated : Jun 26, 2025, 02:10 PM IST
iran and Chikkaballapura relation

ಸಾರಾಂಶ

ಆಪರೇಷನ್​ ಸಿಂಧು ಮೂಲಕ ಭಾರತಕ್ಕೆ ಮರಳಿದವರ ಪೈಕಿ ಚಿಕ್ಕಬಳ್ಳಾಪುರದವರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿಯ ಅಲಿಪುರಕ್ಕೂ, ಇರಾನ್​ಗೂ ಭಾರಿ ನಂಟಿದೆ. ಏನದು? ರೋಚಕ ಸ್ಟೋರಿ ಇಲ್ಲಿದೆ... 

ಸದ್ಯ ಇರಾನ್​ ಮತ್ತು ಇಸ್ರೇಲ್​ ನಡುವಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಲೇ ಇದೆ. ಇವೆಲ್ಲವುಗಳ ನಡುವೆಯೇ, ಈ ಎರಡೂ ದೇಶಗಳಲ್ಲಿ ಸಿಲುಕಿದ್ದ ತನ್ನ ನಾಗರಿಕರನ್ನು ಆಪರೇಷನ್​ ಸಿಂಧು ಮೂಲಕ ಭಾರತ ಕರೆತರುತ್ತಲೇ ಇದೆ. ಇದಾಗಲೇ ಸಹಸ್ರಾರು ಮಂದು ಭಾರತಕ್ಕೆ ವಾಪಸಾಗಿದ್ದಾರೆ. ಇದರಲ್ಲಿ ಹಲವರು ಕರ್ನಾಟಕದವರೂ ಸೇರಿದ್ದು, ಅವರ ಪೈಕಿ ನೂರಾರು ಮಂದಿ ಚಿಕ್ಕಬಳ್ಳಾಪುರದವರಾಗಿದ್ದಾರೆ. ಅವರು ಕೂಡ ಇದಾಗಲೇ ಈ ಆಪರೇಷನ್​ ಮೂಲಕ ವಾಪಸ್​ ಆಗಿದ್ದಾರೆ. ಹಾಗಿದ್ದರೆ ಚಿಕ್ಕಬಳ್ಳಾಪುರಕ್ಕೂ, ಇರಾನ್​ಗೂ ಎತ್ತಣೆತ್ತ ಸಂಬಂಧವಯ್ಯಾ ಎಂದು ಹಲವರು ಅಚ್ಚರಿಪಟ್ಟುಕೊಳ್ಳಬಹುದು. ಆದರೆ ಇಲ್ಲೊಂದು ಹಲವು ದಶಕಗಳ ಇಂಟರೆಸ್ಟಿಂಗ್​ ಸ್ಟೋರಿ ಇದೆ. ಸದ್ಯ ತಲೆಮರೆಸಿಕೊಂಡಿರೋ ಇರಾನ್​ಗೆ ಸುಪ್ರೀಂ ಲೀಡರ್​  ಆಯುತ್ತಲ್ಲಾ ಅಲಿ ಖಮೇನಿ ಕೂಡ 80ರ ದಶಕದಲ್ಲಿ ಚಿಕ್ಕಬಳ್ಳಾಪುರದ ಅಲಿಪುರಕ್ಕೆ ಭೇಟಿಕೊಟ್ಟಿದ್ದರು. ಅವರ ಹೆಸರಿನಲ್ಲಿಯೇ ಇಂದಿಗೂ ಅಲಿಪುರದಲ್ಲಿ ಆಸ್ಪತ್ರೆ ಕೂಡ ಇದೆ!

ಚಿಕ್ಕಬಳ್ಳಾಪುರದ ಅಲಿಪುರಕ್ಕೂ, ಇರಾನ್​ಗೂ ಏನಪ್ಪಾ ನಂಟು ಎಂದು ನೋಡುವ ಮುನ್ನ ಅಲಿಪುರವನ್ನು ಇರಾನ್​ನ ಮಗು ಅರ್ಥಾತ್​ ಬೇಬಿ ಆಫ್​ ಇರಾನ್​ ಎಂದೂ ಕರೆಯುವುದು ಉಂಟು. ಈ ಊರಿನಲ್ಲಿ ಬಹುತೇಕ ಮಂದಿ ಶಿಯಾ ಮುಸ್ಲಿಮರು ಇದ್ದಾರೆ. ಇಲ್ಲಿರುವ ಮುಸ್ಲಿಮರು ಇದೇ ಊರಿನಲ್ಲಿಯೇ ಇರುವವರ ಜೊತೆ ಮದುವೆಯಾಗುವ ಕಾರಣದಿಂದ ಅವರ ಕುಟುಂಬವೇ ಅಲ್ಲಿ ಹೆಚ್ಚಾಗಿದೆ. ಇನ್ನು ಖಮೇಲಿ ವಿಷಯಕ್ಕೆ ಬರುವುದಾದರೆ, ಇರಾನ್ ಸರ್ಕಾರದ ಸಹಯೋಗದೊಂದಿಗೆ ಇಲ್ಲೊಂದು ಆಸ್ಪತ್ರೆ ನಿರ್ಮಿಸಲಾಗಿದೆ. ಆ ಆಸ್ಪತ್ರೆಯನ್ನು ಉದ್ಘಾಟಿಸಲು ಇರಾನ್‌ನ ಪ್ರಸ್ತುತ ಸರ್ವೋಚ್ಚ ನಾಯಕ ಅಲಿ ಖಮೇನಿ 1981-82 ರಲ್ಲಿ ಅಲಿಪುರಕ್ಕೆ ಭೇಟಿ ನೀಡಿದ್ದರು. ಇದು ಪಶ್ಚಿಮ ಏಷ್ಯಾದ ದೇಶದೊಂದಿಗೆ ಈ ಗ್ರಾಮವು ಹೊಂದಿರುವ ಸಂಬಂಧದ ಉತ್ತುಂಗವನ್ನು ಸೂಚಿಸುತ್ತದೆ. ಗ್ರಾಮಸ್ಥರ ಪ್ರಕಾರ, ಅಲಿಪುರದ ಯುವಕರು ಟೆಹ್ರಾನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರೆ, ಹೆಚ್ಚಿನವರು ಇಸ್ಲಾಮಿಕ್ ಧರ್ಮಗುರುಗಳಾಗಲು ಪ್ರತಿಷ್ಠಿತ ಶಿಯಾ ಸೆಮಿನರಿಗಳು ಮತ್ತು ಇಸ್ಲಾಮಿಕ್ ಸಂಶೋಧನಾ ಸಂಸ್ಥೆಗಳಲ್ಲಿ ದಾಖಲಾಗಿದ್ದಾರೆ. ಆದರೆ ಇದೀಗ ಯುದ್ಧದಿಂದಾಗಿ ಭಾರತ ಸರ್ಕಾರ ಅವರ ಪ್ರಾಣವನ್ನು ಕಾಪಾಡಲು ವಾಪಸ್​ ಕರೆತಂದಿದೆ.

ಇನ್ನು ಈ ಅಲಿಪುರದ ಕುರಿತು ಹೇಳುವುದಾದರೆ, ಇದು ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿದೆ. ಟೈಮ್ಸ್​ ಆಫ್​ ಇಂಡಿಯಾದ ವರದಿಯ ಪ್ರಕಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿರುವ ಅಲಿಪುರದಲ್ಲಿ ಶಿಯಾ ಸಮುದಾಯದವರು ಶೇಕಡಾ 99ರಷ್ಟು ಇದ್ದಾರೆ. ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ-ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಬಂಧಗಳಿಂದ ಸಂಪರ್ಕ ಹೊಂದಿದ ಅಲಿಪುರವು ದಶಕಗಳಿಂದ ಇರಾನ್‌ನೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದೆ ಮತ್ತು ಇರಾನ್ ಸರ್ಕಾರದ ಸಹಯೋಗದೊಂದಿಗೆ ಗ್ರಾಮದಲ್ಲಿ ಹಲವಾರು ಸೇವೆಗಳನ್ನು ಪ್ರಾರಂಭಿಸಲಾಗಿದೆ. ಕುತೂಹಲದ ವಿಷಯ ಏನೆಂದರೆ, ಈ ಗ್ರಾಮದಲ್ಲಿ ಯಾವುದೇ ಸಮಸ್ಯೆ ಬಂದರೂ, ಅದು ಚಿಕ್ಕದ್ದೇ ಆಗಿರಲಿ, ಕೌಟುಂಬಿಕ ದೌರ್ಜನ್ಯಗಳಂಥ ಮಹಾ ಸಮಸ್ಯೆಗಳೇ ಆಗಲಿ ಕೋರ್ಟ್​, ಕಚೇರಿ ಎಂದು ಅಲೆಯುವ ಬದಲು ಅಂಜುಮನ್​- ಎ- ಜಾಫರಿಯಾ ಸಮಿತಿ ಇದರ ವಿಚಾರಣೆ ನಡೆಸಿ ಸಮಸ್ಯೆ ಬಗೆರಿಸುತ್ತದೆ.

ಇನ್ನು ಅಲಿಪುರದ ಇನ್ನೊಂದು ವಿಶೇಷತೆ ಬಗ್ಗೆ ಹೇಳುವುದಾದರೆ, ಇದು ರತ್ನಗಳು ಮತ್ತು ಆಭರಣ ವ್ಯಾಪಾರದ ಕೇಂದ್ರವಾಗಿದೆ. ಆದ್ದರಿಂದ ಇದರ ವ್ಯಾಪಾರಕ್ಕಾಗಿ ಇರಾನ್​ಗೆ ಹೋಗಿ ಸಿಕ್ಕಿಬಿದ್ದವರೂ ಇದ್ದು, ಅವರನ್ನೂ ಆಪರೇಷನ್​ ಸಿಂಧು ಮೂಲಕ ಕರೆತರಲಾಗಿದೆ, ಇನ್ನುಳಿದವರನ್ನು ಕರೆತರುವ ಕಾರ್ಯ ನಡೆದಿದೆ. ಇಂಡೋನೇಷಿಯಾ ಮತ್ತು ಥಾಯ್ಲೆಂಡ್​ಗಳಿಂದ ಹರಲಿನ ಕಲ್ಲು ಖರೀದಿಸಿ ಅಲಿಪುರಕ್ಕೆ ತರಲಾಗುತ್ತದೆ. ಅದಕ್ಕೆ ಪಾಲಿಶ್​ ಮಾಡಿ, ವಿವಿಧ ವಿನ್ಯಾಸಗಳನ್ನು ಮಾಡಲಾಗುತ್ತದೆ. ಈ ಹರಳುಗಳನ್ನು ಚಿನ್ನಾಭರಣ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. 2-3 ದಶಕಗಳ ಇಂದೆ ಅಲಿಪುರದಲ್ಲಿಯೇ ಪಾಲಿಶಿಂಗ್ ಯಂತ್ರಗಳೂ ಇದ್ದವು. ಆದರೆ ಈಗ ಪಾಲಿಶಿಂಗ್​ಗೆ ಸಂಬಂಧಿಸಿದಂತೆ ಆಧುನಿಕ ತಂತ್ರಜ್ಞಾನ ಬಂದಿರುವ ಹಿನ್ನೆಲೆಯಲ್ಲಿ ಯಂತ್ರಗಳ ಬಳಕೆ ತಗ್ಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!