
- 41 ವರ್ಷಗಳ ಬಳಿಕ ಬಾಹ್ಯಾಕಾಶಕ್ಕೆ 2ನೇ ಭಾರತೀಯ
- ಅಂತರಿಕ್ಷ ನಿಲ್ದಾಣಕ್ಕಿಂದು ಪ್ರಥಮ ಭಾರತೀಯನ ಪ್ರವೇಶ
ಐತಿಹಾಸಿಕ ಜಿಗಿತ
- ಶುಭಾಂಶು ಹೊತ್ತ ರಾಕೆಟ್ ಯಶಸ್ವಿ ಉಡಾವಣೆ
- ಇಂದು ಸಂಜೆ 4.30ಕ್ಕೆ ಅಂತರಿಕ್ಷದಲ್ಲಿ ಭಾರತ ಚರಿತ್ರೆ--
14 ದಿನ: ಬಾಹ್ಯಾಕಾಶ ನಿಲ್ದಾಣದಲ್ಲಿ ಶುಭಾಂಶು ವಾಸ್ತವ್ಯ
60 ಟೆಸ್ಟ್: ಅಂತರಿಕ್ಷ ಕೇಂದ್ರದಲ್ಲಿ ನಡೆಸಲಿರುವ ಪ್ರಯೋಗ
7 ಪರೀಕ್ಷೆ: ಶುಭಾಂಶುರಿಂದ ಭಾರತದ 7 ಟೆಸ್ಟ್‌ಗೆ ತಯಾರಿ
6 ಸಲ: ವಿವಿಧ ಕಾರಣಕ್ಕೆ 6 ಸಲ ಮುಂದೂಡಿಕೆ ಆಗಿದ್ದ ಯಾನ
4 ಜನ: ಶುಭಾಂಶು ಜತೆ ಇದ್ದಾರೆ ಇನ್ನೂ 3 ಗಗನಯಾತ್ರಿಗಳು--
ಶತಕೋಟಿ ಕನಸು
- 1984ರಲ್ಲಿ ಭಾರತದ ಪೈಲಟ್ ರಾಕೇಶ್ ಶರ್ಮಾ ರಷ್ಯಾ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದರು
- ಅದಾದ ಬಳಿಕ ಯಾವೊಬ್ಬ ಭಾರತೀಯನಿಗೂ ಅಂತರಿಕ್ಷಕ್ಕೆ ಹೋಗುವ ಅವಕಾಶ ದೊರೆತಿರಲಿಲ್ಲ
- ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವುದು ಭಾರತೀಯರಿಗೆ ಕನಸೇ ಆಗಿತ್ತು. ಈಗ ನನಸಾಗುವ ಟೈಂ
- 1985ರಲ್ಲಿ ಜನಿಸಿದ, ವಾಯುಪಡೆ ಪೈಲಟ್ ಆಗಿರುವ ಶುಭಾಂಶು ಶುಕ್ಲಾ ಈಗ ಬಾಹ್ಯಾಕಾಶಕ್ಕೆ
- ಇಂದು ಸಂಜೆ 4.30ಕ್ಕೆ ಅಂತರಿಕ್ಷ ನಿಲ್ದಾಣಕ್ಕೆ. ಅಲ್ಲಿಗೆ ಹೋದ ಮೊದಲ ಭಾರತೀಯ ಎಂಬ ಕೀರ್ತಿ
- ಭಾರತದ ಸ್ವದೇಶಿ ಗಗನಯಾನಗೆ ಶುಭಾಂಶು ಯಾತ್ರೆಯಿಂದ ಭಾರಿ ಅನುಭವ ದೊರೆವ ನಿರೀಕ್ಷೆ
ಮೈಸೂರು ಆಹಾರ
ಮೈಸೂರಿನ ಸಿಎಫ್‌ಟಿಆರ್‌ಐ ಸಿದ್ಧಪಡಿಸಿರುವ ಹಲ್ವಾ ಮೊಸರನ್ನ, ಮಾವಿನ ರಸ, ಮಸಾಲೆಯುಕ್ತ ಹಂಗೇರಿಯನ್ ಕೆಂಪುಮೆಣಸಿನ ಚಟ್ನಿಯನ್ನು ಯಾತ್ರೆಯ ವೇಳೆ ಶುಭಾಂಶು ಹಾಗೂ ಇತರೆ ಮೂವರು ಯಾತ್ರಿಕರು ಸೇವಿಸಲಿದ್ದಾರೆ.
ಅಂತರಿಕ್ಷದಿಂದ ಮೋದಿ ಜತೆ ಶುಭಾಂಶು ಮಾತು?
ಶುಭಾಂಶು ಶುಕ್ಲಾ ಅಂತರಿಕ್ಷ ಕೇಂದ್ರಕ್ಕೆ ತಲುಪಿದ ನಂತರ ಭಾರತದ ಪ್ರಮುಖ ವ್ಯಕ್ತಿಯೊಬ್ಬರ ಜತೆ ವಿಡಿಯೋ ಸಂವಾದ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.
--ಹೊಸ ಮೈಲುಗಲ್ಲುಶುಭಾಂಶು ಶುಕ್ಲಾ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಅವರ ಪ್ರಯಾಣದ ಬಗ್ಗೆ ಇಡೀ ರಾಷ್ಟ್ರ ಉತ್ಸುಕವಾಗಿದೆ ಮತ್ತು ಹೆಮ್ಮೆಪಡುತ್ತಿದೆ. -ದ್ರೌಪದಿ ಮುರ್ಮು, ರಾಷ್ಟ್ರಪತಿ
140 ಕೋಟಿ ಶುಭಾಶಯ
ಶುಭಾಂಶು ಅವರು 140 ಕೋಟಿ ಭಾರತೀಯರ ಶುಭಾಶಯ, ಭರವಸೆ ಮತ್ತು ಆಕಾಂಕ್ಷೆಗಳನ್ನು ತಮ್ಮೊಂದಿಗೆ ಹೊತ್ತೊಯ್ದಿದ್ದಾರೆ.-ನರೇಂದ್ರ ಮೋದಿ, ಪ್ರಧಾನಿ
ಅದ್ಭುತವಾಗಿದೆನಮಸ್ಕಾರ ದೇಶವಾಸಿಗಳೇ. ಜೈ ಹಿಂದ್. ನಾವು 41 ವರ್ಷಗಳ ಬಳಿಕ ಬಾಹ್ಯಾಕಾಶಕ್ಕೆ ಬಂದಿದ್ದೇವೆ. ಇದು ಅದ್ಭುತ ಯಾನವಾಗಿದೆ.
- ಶುಭಾಂಶು ಶುಕ್ಲಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ