* ಭಾರತದಲ್ಲಿ ಪತ್ತೆ ಆದ ಮೂರು ರೂಪಾಂತರಿ ಕೊರೋನಾ ವೈರಸ್ ಪ್ರಭೇದದ ಪೈಕಿ ಒಂದು ಮಾತ್ರ ಕಳವಳಕಾರಿ
* ಒಂದನ್ನು ಮಾತ್ರವೇ ‘ವೆರಿಯಂಟ್ ಆಫ್ ಕನ್ಸರ್ನ್’ ಎಂದು ಗುರುತಿಸಿದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)
* ಬಿ.1.617.2 ಪ್ರಭೇದ ಮಾತ್ರವೇ ಕಳವಳಕಾರಿ ಎಂದ WHO
ವಿಶ್ವಸಂಸ್ಥೆ(ಜೂ.03): ಭಾರತದಲ್ಲಿ ಪತ್ತೆ ಆದ ಮೂರು ರೂಪಾಂತರಿ ಕೊರೋನಾ ವೈರಸ್ ಪ್ರಭೇದದ ಪೈಕಿ ಒಂದನ್ನು ಮಾತ್ರವೇ ‘ವೆರಿಯಂಟ್ ಆಫ್ ಕನ್ಸರ್ನ್’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಗುರುತಿಸಿದೆ.
ಭಾರತದಲ್ಲಿ ಪತ್ತೆ ಆದ ಬಿ.1.617 ರೂಪಾಂತರಿ ಕೊರೋನಾ ವೈರಸ್ ಪ್ರಭೇದದಲ್ಲಿ ಬಿ.1.617.1, ಬಿ.1.617.2 ಹಾಗೂ ಬಿ.1.617.3 ಎಂಬ ಮೂರು ವಿಧಗಳನ್ನು ಗುರುತಿಸಲಾಗಿದೆ. ಇವುಗಳ ಪೈಕಿ ಬಿ.1.617.2 ಪ್ರಭೇದ ಮಾತ್ರವೇ ಕಳವಳಕಾರಿಯಾಗಿದೆ. ಉಳಿದ ಎರಡು ಪ್ರಭೇದಗಳು ಅಷ್ಟೇನೂ ಅಪಾಯಕಾರಿ ಅಲ್ಲ ಹಾಗೂ ಅವು ಸೋಂಕು ಹರಡುವ ಪ್ರಮಾಣ ತೀರಾ ಕಡಿಮೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಮೊದಲನೇ ಡೋಸ್ ಲಸಿಕೆ ಮಹತ್ವ ತೆರೆದಿಟ್ಟ ಹಿರಿಯ ಅಧಿಕಾರಿ, ಹೊಸ ಗುರಿ
ಇತ್ತೀಚೆಗಷ್ಟೇ ಭಾರತದಲ್ಲಿನ ರೂಪಾಂತರಿಯೊಂದಕ್ಕೆ ಡೆಲ್ಟಾಎಂದು ಡಬ್ಲ್ಯುಎಚ್‌ಒ ಹೆಸರಿಟ್ಟಿತ್ತು.
ನಿರಾಶ್ರಿತರನ್ನು ಬಾಧಿಸುವ ಅಪಾಯ:
ಇದೇ ವೇಳೆ ಭಾರತದಲ್ಲಿ ಮೊದಲು ಪತ್ತೆ ಆದ ರೂಪಾಂತರಿ ವೈರಸ್ ನಿರಾಶ್ರಿತರನ್ನು ಹಾಗೂ ಭಾರತದ ಅಕ್ಕಪಕ್ಕದ ದೇಶಗಳನ್ನು ಕೂಡ ಬಾಧಿಸುವ ಅಪಾಯ ಇದೆ ಎಂದು ನಿರಾಶ್ರಿತರಿಗಾಗಿನ ವಿಶ್ವ ಸಂಸ್ಥೆಯ ಹೈಕಮಿಷನರ್ (ಯುಎನ್‌ಎಚ್‌ಸಿಆರ್) ವಕ್ತಾರರು ತಿಳಿಸಿದ್ದಾರೆ. ಭಾರತದಲ್ಲಿ ರೋಹಿಂಗ್ಯ ಮುಸ್ಲಿಮರು ಸೇರಿದಂತೆ ಅನೇಕ ನಿರಾಶ್ರಿತರಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona