Sniper Wali ದಿನಕ್ಕೆ 40 ಜನರ ಕೊಲ್ಲುವ ಜಗತ್ಪ್ರಸಿದ್ಧ ಸ್ನೈಪರ್‌ ಉಕ್ರೇನ್‌ ಸೇನೆ ಸೇರ್ಪಡೆ!

By Kannadaprabha News  |  First Published Mar 13, 2022, 3:55 AM IST

- 40 ವರ್ಷದ ಕೆನಡಾದ ಸ್ನೈಪರ್‌ ವಾಲಿ ಬಗ್ಗೆ ಹಲವು ದಂತಕತೆ

- ಈಗಾಗಲೇ ರಷ್ಯಾದ 6-7 ಸೈನಿಕರನ್ನು ಕೊಂದಿದ್ದಾನೆ ಎಂಂದು ವರದಿ

- ಮಾ.4 ರಂದು ಉಕ್ರೇನ್ ಸೇನೆಗೆ ಸೇರಿರುವ ವಾಲಿ


ಕೀವ್‌ (ಮಾ.13): ಗುಂಡು ಹಾರಿಸಿ ದಿನಕ್ಕೆ 40 ಜನರನ್ನು ಕೊಲ್ಲುವ ಖ್ಯಾತಿಯ ಕೆನಡಾ ಮೂಲದ ಜಗತ್ಪ್ರಸಿದ್ಧ (Canadian sniper) ‘ಸ್ನೈಪರ್‌ ವಾಲಿ’  (Sniper Wali) ಉಕ್ರೇನ್‌ ಸೇನೆ (Ukraine Army) ಸೇರ್ಪಡೆಯಾಗಿದ್ದಾನೆ ಎಂದು ಹೇಳಲಾಗಿದೆ. ಈಗಾಗಲೇ ಈತ ಆರೇಳು ರಷ್ಯನ್‌ ಯೋಧರನ್ನು ಕೊಂದಿದ್ದಾನೆ ಎಂದೂ ಕೆಲ ಮಾಧ್ಯಮ ವರದಿಗಳು ಹೇಳಿವೆ.

ಉಕ್ರೇನ್‌ ಅಧ್ಯಕ್ಷ ವೋಲೋದಿಮಿರ್‌ ಜೆಲೆನ್‌ಸ್ಕಿ (Volodymyr Zelenskyy) ಯಾರು ಬೇಕಾದರೂ ತಮ್ಮ ದೇಶದ ಸೇನೆಗೆ ಸೇರಬಹುದು ಎಂದು ಪ್ರಕಟಿಸಿದ ನಂತರ ಮಾ.4ರಂದು ವಾಲಿ ಉಕ್ರೇನ್‌ ಸೇನೆಗೆ ಸೇರ್ಪಡೆಯಾಗಿದ್ದಾನೆ. 40 ವರ್ಷದ ವಾಲಿ ಈ ಹಿಂದೆ ಇರಾಕ್‌ ಯುದ್ಧದಲ್ಲಿ 3.5 ಕಿ.ಮೀ. ದೂರದಿಂದ ಮೆಕ್‌ಮಿಲನ್‌ ಟ್ಯಾಕ್‌-50 ರೈಫಲ್‌ ಬಳಸಿ ಐಸಿಸ್‌ ಉಗ್ರನೊಬ್ಬನನ್ನು ಕೊಂದ ದಾಖಲೆ ಹೊಂದಿದ್ದಾನೆ.

Tap to resize

Latest Videos

undefined

ಜಗತ್ತಿನ ಅನೇಕ ಯುದ್ಧದಲ್ಲಿ ಭಾಗಿ: ಕೆನಡಾದ ಪ್ರಜೆ ವಾಲಿ ಮೂಲತಃ ಕಂಪ್ಯೂಟರ್‌ ವಿಜ್ಞಾನಿ. ಯೋಧನ ಕೆಲಸ ಈತನ ಹವ್ಯಾಸ. ಪತ್ನಿ ಹಾಗೂ ಒಂದು ವರ್ಷದ ಮಗುವನ್ನು ಹೊಂದಿರುವ ಈತ ಈಗಾಗಲೇ ಜಗತ್ತಿನ ಅನೇಕ ಕಡೆ ಯುದ್ಧದಲ್ಲಿ ಪಾಲ್ಗೊಂಡಿದ್ದಾನೆ. ಈತನ ಮೂಲ ಹೆಸರು ಬೇರೆಯೇ ಇದೆ ಎನ್ನಲಾಗಿದೆ. ರಾಯಲ್‌ ಕೆನಡಿಯನ್‌ (Royal Canadian) ಸೇನೆಯ 22ನೇ ರೆಜಿಮೆಂಟ್‌ನಲ್ಲಿ ಈತ ಸೇವೆ ಸಲ್ಲಿಸಿದ್ದಾನೆ. ಇರಾಕ್‌ ಹಾಗೂ ಅಷ್ಘಾನಿಸ್ತಾನ ಯುದ್ಧದಲ್ಲಿ ಪಾಲ್ಗೊಂಡಿದ್ದಾನೆ.

ಆಫ್ಘನ್ನರು ನೀಡಿದ ಹೆಸರು ವಾಲಿ: ನುರಿತ ಸ್ನೈಪರ್‌ ಒಬ್ಬ ದಿನಕ್ಕೆ 5ರಿಂದ 6 ಜನರನ್ನು ಕೊಲ್ಲಬಲ್ಲ. ಅತ್ಯುತ್ತಮ ಸ್ನೈಪರ್‌ 7ರಿಂದ 10 ಜನರನ್ನು ಕೊಲ್ಲುತ್ತಾನೆ. ಆದರೆ, ವಾಲಿ 40 ಜನರವರೆಗೂ ಕೊಂದ ದಾಖಲೆ ಹೊಂದಿದ್ದಾನೆ. 2009-2011ರ ನಡುವೆ ಈತ ಕಂದಹಾರ್‌ ಯುದ್ಧದಲ್ಲಿ ಪಾಲ್ಗೊಂಡಿದ್ದಾಗ ಆಫ್ಘನ್ನರು ಅವನಿಗೆ ವಾಲಿ ಎಂಬ ಹೆಸರು ನೀಡಿದ್ದಾರೆ. ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಪಾಲ್ಗೊಂಡ ಈತನನ್ನು ಅನೇಕ ಮಾಧ್ಯಮಗಳು ಸಂದರ್ಶನ ಮಾಡಿವೆ ಎಂದು ಹೇಳಲಾಗಿದೆ. ಆದರೂ ಕೆಲವರು ವಾಲಿ ಎಂಬ ವ್ಯಕ್ತಿಯೇ ಇಲ್ಲ ಎಂದೂ ಹೇಳುತ್ತಾರೆ.

ನಾವು ಉಕ್ರೇನ್ ನೆಲದಲ್ಲಿ ನಿಂತು ಹೋರಾಡಲ್ಲ, ರಷ್ಯಾ ಮೇಲೆ ನಿರ್ಬಂಧ ಹೆಚ್ಚಿಸುತ್ತೇವೆ: ಅಮೆರಿಕಾ
ಉಕ್ರೇನ್‌ ಪಡೆ ಸೇರಿದ್ದ ಸೈನಿಕೇಶ್‌ಗೆ ಮತ್ತೆ ದೇಶಕ್ಕೆ ಮರಳುವಾಸೆ
ಕೊಯಮತ್ತೂರು:
ಉಕ್ರೇನಿನ ಅರೆ ಸೇನಾ ಪಡೆಯನ್ನು ಸೇರಿದ ತಮಿಳ್ನಾಡು ಮೂಲದ 21 ವರ್ಷದ ಯುವಕ ಮತ್ತೆ ದೇಶಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾನೆ ಎಂದು ಆತನ ಕುಟುಂಬದವರು ತಿಳಿಸಿದ್ದಾರೆ. ಕೊಯಮತ್ತೂರಿನ ಆರ್‌. ಸೈನಿಕೇಶ್‌ ರಷ್ಯಾ ಯುದ್ಧ ಘೋಷಿಸಿದ ನಂತರ ವಿದೇಶಿ ನಾಗರಿಕರಿಗೂ ಸೇನೆ ಸೇರಲು ನೀಡಿದ ಅವಕಾಶವನ್ನು ಬಳಸಿ ಉಕ್ರೇನಿನ ಜಾರ್ಜಿಯನ್‌ ನ್ಯಾಷನಲ್‌ ಸೇನೆ ಸೇರಿದ್ದರು. ಈ ಬಗ್ಗೆ ಕೇಂದ್ರೀಯ ಗುಪ್ತಚರ ಇಲಾಖೆ ಅಧಿಕಾರಿಗಳೇ ಈ ವಿಷಯವನ್ನು ಸೈನಿಕೇಶ್‌ ಪಾಲಕರಿಗೆ ತಿಳಿಸಿದ್ದರು. ಯೋಧನಾಗುವ ಕನಸು ಕಂಡ ಈತನು ಭಾರತೀಯ ಸೇನೆಗೆ ಸೇರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಉಕ್ರೇನಿನ ಪಡೆಯನ್ನು ಸೇರಿದ್ದನು. ಆದರೆ 3 ದಿನಗಳ ಹಿಂದೆ ಸೈನಿಕೇಶ್‌ ಜೊತೆಗೆ ಮಾತನಾಡಿದಾಗ ಆತ ಮತ್ತೆ ದೇಶಕ್ಕೆ ಮರಳಲು ಬಯಸಿದ್ದು, ಭಾರತದ ಅಧಿಕಾರಿಗಳು ಸಹಾಯದಿಂದ ಶೀಘ್ರವೇ ಮಗನು ಮನೆಗೆ ಮರಳಬಹುದು ಎಂದು ಸೈನಿಕೇಶ್‌ ತಂದೆ ರವಿಚಂದ್ರನ್‌ ತಿಳಿಸಿದ್ದಾರೆ.

Russia Ukraine War:ಮರಿಯೋಪೋಲ್ ಮೇಯರ್‌ ಕಿಡ್ನ್ಯಾಪ್ ಮಾಡಿದ ರಷ್ಯಾ
4335 ಕೋಟಿಯ ರಷ್ಯಾ ಹಡಗು ಇಟಲಿ ಪೊಲೀಸರ ವಶಕ್ಕೆ
ಮಿಲಾನ್‌:
ಉಕ್ರೇನಿನ ಮೇಲೆ ರಷ್ಯಾ ಯುದ್ಧವನ್ನು ನಿಲ್ಲಿಸುವಂತೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮೇಲೆ ಒತ್ತಡವನ್ನು ಹೇರಲು ಇಟಲಿಯ ಪೊಲೀಸರು ರಷ್ಯಾ ಉದ್ಯಮಿಗೆ ಸೇರಿದ 4,335 ಕೋಟಿ ರು ಮೌಲ್ಯದ ಐಶಾರಾಮಿ ಹಡಗನ್ನು ವಶಪಡಿಸಿಕೊಂಡಿದ್ದಾರೆ. ರಷ್ಯಾದ ಉದ್ಯಮಿ ಆ್ಯಂಡ್ರೆ ಇಗೊರೆವಿಚ್‌ ಮೆಲ್ನಿಚೆಂಕೊ ಅವರಿಗೆ ಸೇರಿದ ಹಡಗನ್ನು ಇಟಲಿತ ಟ್ರಿಸ್ಟೆಬಂದರಿನಲ್ಲಿ ವಶ ಪಡಿಸಿಕೊಳ್ಳಲಾಗಿದೆ. ಕಳೆದ ವಾರ ಇಟಲಿಯ ಪೊಲೀಸರು ರಷ್ಯಾದವರಿಗೆ ಸೇರಿದ 117 ಕೋಟಿ ರು ಮೌಲ್ಯದ ಐಶಾರಾಮಿ ಹಡಗು ಹಾಗೂ ನಿವಾಸಗಳನ್ನು ಸಾರ್ದಾನಿಯಾ, ಲಿಗುರಿಯನ್‌ ಕೋಸ್ಟ್‌ ಹಾಗೂ ಲೇಕ್‌ ಕೊಮೊನಲ್ಲಿ ವಶಪಡಿಸಿಕೊಂಡಿದ್ದರು.

click me!