ಒಬ್ಬನಿಗೆ 28, ಇನ್ನೊಬ್ಬನಿಗೆ 13 ಮಕ್ಕಳು, ಮತ್ತೊಂದು ಕಡೆ ಮದ್ವೆ ವಯಸ್ಸಿಗೆ ಬಂದ ಮಕ್ಕಳಿಂದ ಅಪ್ಪನಿಗೆ ನಾಲ್ಕನೆಯ ಮದುವೆ... ವೈರಲ್ ಆಗ್ತಿರೋ ವಿಡಿಯೋ ಇಲ್ಲಿವೆ ನೋಡಿ...
ಹಿಂದಿನ ಕಾಲದಲ್ಲಿ ಡಜನ್ಗಟ್ಟಲೆ ಮಕ್ಕಳು ಇರುತ್ತಿದ್ದರು ನಿಜವೇ. ಜಾತಿ-ಧರ್ಮದ ಭೇದವಿಲ್ಲದೇ ಬಹುತೇಕರ ಮನೆಯಲ್ಲಿ ಹೆಣ್ಣು ಹೆರುವ ಸಾಧನವಾಗಿಯೇ ಇದ್ದಳು. ಇದೇ ಕಾರಣಕ್ಕೆ ವರ್ಷಕ್ಕೊಂದರಂತೆ ಮಕ್ಕಳು ಹುಟ್ಟುತ್ತಿದ್ದರು. ಒಬ್ಬ ಪತಿಗೆ ಓರ್ವ ಪತ್ನಿ ಇದ್ದರೂ, ಆ ಪತ್ನಿ ಹೆರುತ್ತಲೇ ಇರಬೇಕಿತ್ತು. ಮಕ್ಕಳು ಮದುವೆಯಾಗಿ ಅವರಿಗೆ ಹೆರಿಗೆಯ ಸಮಯ ಬಂದರೂ ಅಮ್ಮಂದಿರೂ ಮಕ್ಕಳ ಜೊತೆ ಹೆರುತ್ತಿದ್ದುದು ಉಂಟು. ಇದೇನೂ ವಿಶೇಷವಲ್ಲ. ಆದರೆ ಇದೀಗ ಕಾಲ ಬದಲಾಗಿದೆ. ಹಿಂದೂಗಳ ಮನಯೆಲ್ಲಿ ಒಂದೋ- ಎರಡೋ ಮಕ್ಕಳು ಇದ್ದರೆ ಹೆಚ್ಚು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ಹೆಣ್ಣುಮಕ್ಕಳು ತಮ್ಮ ಕರಿಯರ್, ಭವಿಷ್ಯ, ದುಡಿಮೆ ಎಂದೆಲ್ಲಾ ಹೇಳಿಕೊಂಡು ಮಕ್ಕಳನ್ನು ಹೆರುವುದಕ್ಕೂ ಹಿಂಜರಿಯುವುದು ಉಂಟು.
ಆದರೆ ಪಾಕಿಸ್ತಾನ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಇಂದಿಗೂ ಪರಿಸ್ಥಿತಿಯೇನೂ ಬದಲಾಗಿಲ್ಲ. ಒಂದೇ ಒಂದು ವ್ಯತ್ಯಾಸ ಎಂದರೆ, ಮೇಲೆ ತಿಳಿಸಿರುವ ಉದಾಹರಣೆಯಲ್ಲಿ ಒಬ್ಬಳೇ ಪತ್ನಿ ಇಷ್ಟೆಲ್ಲಾ ಮಕ್ಕಳನ್ನು ಹೆರುತ್ತಿದ್ದರೆ, ಕೆಲವು ಕಡೆಗಳಲ್ಲಿ ಮಕ್ಕಳ ಜೊತೆ ಪತ್ನಿಯರ ಸಂಖ್ಯೆಯೂ ಹೆಚ್ಚಾಗುತ್ತಲೇ ಸಾಗುವ ಕಾರಣ, ಒಂದೊಂದು ಮನೆಯಲ್ಲಿ ಕನಿಷ್ಠ ಡಜನ್ ಮಕ್ಕಳು ಇದ್ದರೂ ಅಚ್ಚರಿಯೇನಲ್ಲ. ಈಗ ಅಂಥದ್ದೇ ಕೆಲವು ವಿಡಿಯೋಗಳು ಪಾಕಿಸ್ತಾನದಿಂದ ಇದೀಗ ವೈರಲ್ ಆಗಿವೆ. ಒಂದು ವಿಡಿಯೋದಲ್ಲಿ, 28 ಮಕ್ಕಳ ಅಪ್ಪನನ್ನು ಆ್ಯಂಕರ್ ಒಬ್ಬರು ಸಂದರ್ಶನ ಮಾಡಿದ್ದಾರೆ. ಇಷ್ಟೆಲ್ಲಾ ಮಕ್ಕಳು, ಇಷ್ಟೊಂದು ಪತ್ನಿಯರು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆ ವ್ಯಕ್ತಿ ಎಲ್ಲಾ ಅಲ್ಲಾಹ್ನ ಕೃಪೆ ಎಂದಿದ್ದಾರೆ. 50 ಮೀರಿಸುವ ಗುರಿಯೇನಾದ್ರೂ ಇದೆಯಾ ಎನ್ನುವ ಪ್ರಶ್ನೆಗೆ, ಹೌದು ಎಂಬಂತೆ ಪ್ರತಿಕ್ರಿಯೆ ನೀಡಿದ್ದು, ಅಲ್ಲಾಹ್ ಇಚ್ಛೆ ಪಟ್ಟರೆ ಅದು ಕೂಡ ಸಾಧ್ಯ ಎನ್ನುವಂತೆ ಹೇಳಿದ್ದಾರೆ.
ಇನ್ನೊಂದು ವಿಡಿಯೋದಲ್ಲಿ ಆ್ಯಂಕರ್ ಯುವಕನೊಬ್ಬನಿಗೆ ಮನೆಯಲ್ಲಿ ಎಷ್ಟು ಮಕ್ಕಳು ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಯುವಕ ತುಂಬಾ ಖುಷಿಯಿಂದ 13 ಮಕ್ಕಳು ಎಂದಿದ್ದಾನೆ. ನಾವು ಏಳು ಸಹೋದರರು ಮತ್ತು ಆರು ಸಹೋದರಿಯರು ಎಂದಿದ್ದಾನೆ. ಇದನ್ನು ಕೇಳಿ ಆ್ಯಂಕರ್ ಪುನಃ ಪುನಃ ಪ್ರಶ್ನಿಸಿದ್ದಾಳೆ. ನಿಮ್ಮ ಅಪ್ಪ-ಅಮ್ಮನಿಗೆ ಬೇರೆ ಕೆಲ್ಸ ಇರಲಿಲ್ಲವೆ ಎಂದು ಅವಳು ಕೇಳಿದಾಗ, ಆತ ಅಷ್ಟೇ ಖುಷಿಯಿಂದ ಇಲ್ಲ, ಇದೊಂದೇ ಕೆಲಸ ಎಂದಿದ್ದಾನೆ. ಅಪ್ಪ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದಾಗ ಆ ಯುವಕ, ಅವರಿಗೆ ಕೆಲಸ ಇಲ್ಲ. ಮನೆಯಲ್ಲಿಯೇ ಇರುತ್ತಾರೆ. ನಾವು ಗಂಡು ಮಕ್ಕಳು ಹೊರಗೆ ಹೋಗಿ ದುಡಿಯುತ್ತೇವೆ ಎಂದಾಗ, ಮಕ್ಕಳು ಯಾಕೆ ಆ ಪರಿಯಲ್ಲಿ ಹುಟ್ಟುತ್ತಿದ್ದಾರೆ ಎಂದು ತಿಳಿದ ಆ್ಯಂಕರ್ ತಲೆ ತಿರುಗಿದಂತೆ ಮಾಡಿದ್ದಾಳೆ! ಇದರ ವಿಡಿಯೋ ವೈರಲ್ ಆಗಿದೆ.
ಅದೇ ರೀತಿ ಇನ್ನೊಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಮದುವೆ ವಯಸ್ಸಿಗೆ ಬಂದ ಗಂಡು ಮಕ್ಕಳು ಅಪ್ಪನ ನಾಲ್ಕನೆಯ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಮದುವೆಯಿಂದ ನಮಗೆ ತುಂಬಾ ಖುಷಿ ಇದೆ. ಮೂರು ಅಮ್ಮಂದಿರ ಜೊತೆಗೆ ನಾಲ್ಕನೆಯ ಅಮ್ಮ ಬರುತ್ತಾರೆ ಎಂದಿದ್ದಾರೆ. ಅಪ್ಪ ಇನ್ನೊಂದು ಮದುವೆಯಾದರೆ ನಮಗೆ ಏನೂ ಬೇಸರವಿಲ್ಲ ಎಂದೂ ಹೇಳಿದ್ದಾರೆ.