
ನವದೆಹಲಿ( ಜ. 01) ಜನವರಿ ಒಂದು ಹಲವರ ಪಾಲಿಗೆ ವಿಶೇಷ ದಿನ.. ಇದೇ ತಾರೀಕಿನಂದು ಜನ್ಮ ತಾಳಿದರೆ.. ಭಾರತದಲ್ಲಿ 60,000 ಶಿಶುಗಳ ಜನನವಾಗಲಿದೆ. ಪ್ರಂಪಂಚದಲ್ಲಿ ಒಟ್ಟು 3.7 ಕೋಟಿ ಮಕ್ಕಳು ಜನಿಸಲಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ.
ಫಿಜಿಯಲ್ಲಿ ವರ್ಷದ ಮೊದಲ ಮಗು ಜನಿಸಿದರೆ ಅಮೆರಿಕದಲ್ಲಿ ಕೊನೆಯ ಮಗು ಜನಿಸಲಿದೆ. (ಜ.1) 2020ರ ಹೊಸ ವರ್ಷಕ್ಕೆ ಹೋಲಿಸಿದರೆ, 7,390 ಕಡಿಮೆ ಶಿಶುಗಳು ಜನಿಸಲಿವೆ.
ಜಾಗತಿಕವಾಗಿ, ಈ ಅರ್ಧದಷ್ಟು ಶಿಶುಗಳು ಕೇವಲ ಹತ್ತು ರಾಷ್ಟ್ರಗಳ್ಲಿ ಜನಿಸಲಿವೆ. ಭಾರತ (59,995), ಚೀನಾ (35,615), ನೈಜೀರಿಯಾ (21,439), ಪಾಕಿಸ್ತಾನ (14,161), ಇಂಡೋನೇಷ್ಯಾ (12,336), ಇಥಿಯೋಪಿಯಾ (12,006), ಯುನೈಟೆಡ್ ಸ್ಟೇಟ್ಸ್ (10,312), ಈಜಿಪ್ಟ್ (9,455), ಬಾಂಗ್ಲಾದೇಶ (9,236) ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (8,640) ದಲ್ಲಿ ಜನಿಸಲಿವೆ.
ಈ ಮಕ್ಕಳ ಸರಾಸರಿ ವಯಸ್ಸು 84 ವರ್ಷ ಎಂಬುದನ್ನು ಯುನಿಸೆಫ್ ತಿಳಿಸಿದೆ. ಈ ಮಕ್ಕಳ ಆರೋಗ್ಯ ಕಾಪಾಡುವುದು ಸಮಾಜದ ಹೊಣೆಗಾರಿಕೆ ಎಂದು ಹೇಳಲು ಮರೆತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ