* 57 ದೇಶಗಳಿಗೆ ಹಬ್ಬಿದ ಒಮಿಕ್ರೋನ್
* ಭವಿಷ್ಯದಲ್ಲಿ ಸೋಂಕಿತರ ಏರಿಕೆ ಸಾಧ್ಯತೆ: ಡಬ್ಲ್ಯುಎಚ್‌ಒ ಎಚ್ಚರಿಕೆ
* 9,416 ಹೊಸ ಕೋವಿಡ್ ಕೇಸ್: ಸಕ್ರಿಯ ಕೇಸ್ 94,742ಕ್ಕೆ ಏರಿಕೆ
* ಯಾವ ಕಾರಣಕ್ಕೂ ಕೊರೋನಾ ನಿಯಮಗಳನ್ನು ಮೀರಬೇಡಿ
ಜಿನೇವಾ(ಡಿ. 10) ಲಸಿಕೆಗೂ (Vaccine) ಬಗ್ಗದ ಭಯಾನಕ ಕೊರೋನಾ ವೈರಸ್ಸಿನ ರೂಪಾಂತರಿ ಒಮಿಕ್ರೋನ್ (Omicron) ಪ್ರಭೇದವು ಈ ಹಿಂದಿನ ತಳಿಗಳಿಗಿಂತಲೂ ಅತೀ ವೇಗವಾಗಿ ಹಬ್ಬಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧೋನಾಮ್ ಗೆಬ್ರಿಯೆಸಸ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ವೈರಸ್ ಈಗಾಗಲೇ 57 ದೇಶಗಳಲ್ಲಿ ಕಾಣಿಸಿಕೊಂಡಿದ್ದು, ಈ ಸೋಂಕು ನಿವಾರಣೆಗಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಭಾರತದಲ್ಲಿ 2ನೇ ಅಲೆಯ ಸೋಂಕಿಗೆ ಕಾರಣವಾದ ಡೆಲ್ಟಾಪ್ರಭೇದಕ್ಕಿಂತಲೂ ಒಮಿಕ್ರೋನ್ ಹೆಚ್ಚು ಅಪಾಯಕಾರಿಯಲ್ಲ. ಆದಾಗ್ಯೂ, ಈಗಾಗಲೇ ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೇಗವನ್ನು ಹೆಚ್ಚಿಸಿಕೊಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕ್ರಮೇಣವಾಗಿ ಆಸ್ಪತ್ರೆಗೆ ದಾಖಲಾಗುವವರ ಮತ್ತು ಸಾವಿಗೀಡಾಗುವವರ ಸಂಖ್ಯೆ ಏರಿಕೆಯಾಗಬಹುದು’ ಎಂದು ಹೇಳಿದರು.
undefined
ಪ್ರಾಥಮಿಕ ವಿಶ್ಲೇಷಣೆಗಳ ಪ್ರಕಾರ ಈ ವೈರಸ್ ಮನುಷ್ಯನ ಪ್ರತಿಕಾಯ ಸಾಮರ್ಥ್ಯದ ಮೇಲೆ ದಾಳಿ ಮಾಡಲಿದ್ದು, ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಆದರೆ ಲಸಿಕೆಗೆ ಈ ವೈರಸ್ ಬಗ್ಗುವುದಿಲ್ಲವೇ ಎಂಬ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ತಿಳಿಸಿದರು.
9,416 ಹೊಸ ಕೋವಿಡ್ ಕೇಸ್: ಸಕ್ರಿಯ ಕೇಸ್ 94,742ಕ್ಕೆ ಏರಿಕೆ: ಭಾರತದಲ್ಲಿ ಗುರುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 9,416 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ ಕೇರಳದ ಹಳೆಯ 112 ಸಾವುಗಳೂ ಸೇರಿ 159 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3.46 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 4,74,111ಕ್ಕೆ ತಲುಪಿದೆ. ಹೊಸ ಪ್ರಕರಣಗಳೂ ಸೇರಿ ಸಕ್ರಿಯ ಕೇಸುಗಳ ಸಂಖ್ಯೆ 94,742ಕ್ಕೆ ತಲುಪಿದೆ. ಚೇತರಿಕೆ ಪ್ರಮಾಣ ಶೇ.98.36ರಷ್ಟಿದೆ. ದೈನಂದಿನ ಸೋಂಕಿನ ಪ್ರಮಾಣ ಶೇ.0.73ರಷ್ಟಿದೆ. ಒಟ್ಟು ಸೋಂಕಿತರ ಪೈಕಿ 3.40 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ 130.39 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.
ಇನ್ನು ಆರಂಭದಲ್ಲಿಯೇ ಹೊಸ ತಳಿ ಒಮಿಕ್ರಾನ್ ನಿಯಂತ್ರಣಕ್ಕೆ ಸರ್ಕಾರಕ್ಕೆ ತಜ್ಞರು ಹಲವು ಶಿಫಾರಸ್ಸು (Experts Suggestions) ಮಾಡಿದ್ದಾರೆ. ಅವು ಈ ಕೆಳಗಿನಂತಿವೆ.
ತಜ್ಞರ ಶಿಫಾರಸ್ಸುಗಳು ಇಂತಿವೆ
* ಹೊಸ ತಳಿ ರಾಜ್ಯಕ್ಕೆ ಎಂಟ್ರಿಯಾಗದಂತೆ ಕಟ್ಟೆಚ್ಚರ
* ರಾಜ್ಯದ ಗಡಿಭಾಗದ ಮೇಲೆ ಹೈ ಅಲರ್ಟ್ ನೀಡಬೇಕು
* ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯ ಕೋವಿಡ್ ಟೆಸ್ಟ್
* ನೆಗಟಿವ್ ಬಂದ ಪ್ರಯಾಣಿಕರಿಗೆ ಸ್ಥಳದಲ್ಲಿಯೇ ಮೊತ್ತೊಮ್ಮೆ ಟೆಸ್ಟ್ ಮಾಡುವುದು
* ಕಡ್ಡಾಯವಾಗಿ ವಿದೇಶದಿಂದ ಬರುವ ಪ್ರಯಾಣಿಕರಿಗೆ ಸ್ರ್ಕಿನಿಂಗ್ ಟೆಸ್ಟ್ ಮಾಡಬೇಕು
* ದಿನಕ್ಕೆ ರಾಜ್ಯದಲ್ಲಿ 60,000 ರಿಂದ 80,000 ಕ್ಕೆ ಟೆಸ್ಟಿಂಗ್ ಹೆಚ್ಚಿಸಬೇಕು
* ಸಾರ್ವಜನಿಕ ಸಭೆ ಹಾಗೂ ಸಮಾರಂಭಕ್ಕೆ ಕಡ್ಡಾಯ ಕೊವಿಡ್ ರೂಲ್ಸ್ ಪಾಲನೆಯಾಗಬೇಕು
* ವಿದೇಶಗಳಿಂದ ಬಂದವರಲ್ಲಿ ಪಾಸಿಟಿವ್ ಕಾಣಿಸಿಕೊಂಡ್ರೆ ನೆಗಟಿವ್ ವರದಿ ಬರುವರೆಗೂ ಕ್ವಾರಟೈಂನ್ ಮಾಡಬೇಕು
* ದಕ್ಷಿಣ ಆಫ್ರಿಕಾ, ಹಾಂಕಾಂಗ್, ಬೋಟ್ಸ್ವಾನ ದೇಶದಿಂದ 15 ದಿನಗಳ ಕೆಳಗೆ ರಾಜ್ಯಕ್ಕೆ ಎಂಟ್ರಿ ಕೊಟ್ಟವರನ್ನ ಪತ್ತೆ ಮಾಡಿ ಕೋವಿಡ್ ಟೆಸ್ಟ್ ಮಾಡಿಸಬೇಕು
* ರಾಜ್ಯದಲ್ಲಿ ಸದ್ಯ ಇರುವ ಸಕ್ರಿಯ ಪ್ರಕರಣಗಳ ಕಂಟ್ರೋಲ್ ಮಾಡಬೇಕು
* ವಿಶೇಷ ಗುಂಪುಗಳನ್ನ ಮಾಡಿ ಮಾರ್ಕೆಟ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ
ಕೋವಿಡ್ ಟೆಸ್ಟ್ ಮಾಡಬೇಕು
* ಟೆಸ್ಟಿಂಗ್ ಸಂಖ್ಯೆ ಹೆಚ್ಚಿಸಿ ರ್ಯಾಂಡಮ್ ಚೆಕ್ ಮಾಡಬೇಕು
* ಮನೆ ಮನೆಗೆ ಲಸಿಕೆ ನೀಡುವಕಾರ್ಯಕ್ರಮ ಮಾಡಬೇಕು
* ಎರಡನೇ ಡೋಸ್ ಪಡೆಯದವರನ್ನು ಪತ್ತೆ ಮಾಡಿ ವ್ಯಾಕ್ಸಿನ್ ಹಾಕಬೇಕು
* ಕೋವಿಡ್ ರೂಲ್ಸ್ ಪಾಲನೇಯನ್ನು ಮತ್ತೆ ಕಠಿಣವಾಗಿ ಅನುಷ್ಠಾನ ಮಾಡಬೇಕು
* ಕೇರಳ ಹಾಗೂ ಮಹಾರಾಷ್ಟ್ರದಿಂದ ಬರೊ ಪ್ರಯಾಣಿಕರ ಮೇಲೆ ಹಚ್ಚು ಗಮನ ವಹಿಸಬೇಕು.