ಒಮಿಕ್ರಾನ್-ಡೆಲ್ಟಾ ಸೇರಿ ಹೊಸ ವೈರಸ್ ಸಾಧ್ಯತೆ, ಆತಂಕ ವ್ಯಕ್ತಪಡಿಸಿದ ಬ್ರಿಟನ್ ತಜ್ಞರು

By Suvarna NewsFirst Published Dec 18, 2021, 9:49 PM IST
Highlights
  • ಆರೋಗ್ಯ ತಜ್ಞರನ್ನು ಕಾಡುತ್ತಿದೆ ಹೊಸ ಆತಂಕ
  • ಡೆಲ್ಟಾ  ಹಾಗೂ ಒಮಿಕ್ರಾನ್‌ಗಳ ಸ್ಟ್ರೇನ್‌ಗಳು ಕೂಡಿಕೊಂಡು ಹೊಸ ವೈರಾಣು ಸಾಧ್ಯತೆ
  • ಯುಕೆ ತಜ್ಞರಿಂದ ಮಾಹಿತಿ ಬಹಿರಂಗ

ಯುಕೆ(ಡಿ.17): ಕೊರೊನಾದ ವಿವಿಧ ತಳಿಗಳು ಈಗಾಗಲೇ ಎಲ್ಲೆಡೆ ಭೀತಿ ಮೂಡಿಸಿದ ಬೆನ್ನಿಗೇ, ಇದೀಗ ಮತ್ತೊಂದು ಸಾಧ್ಯತೆಯ ಆತಂಕ ಆರೋಗ್ಯ ತಜ್ಞರನ್ನು ಕಾಡುತ್ತಿದೆ. ಕೊರೊನಾ ರೂಪಾಂತರಿ ಒಮಿಕ್ರಾನ್ (omicron) ದಕ್ಷಿಣ ಆಫ್ರಿಕಾದಲ್ಲಿ (south africa) ಮೊದಲ ಬಾರಿಗೆ ಪತ್ತೆಯಾಗಿ ಅಮೆರಿಕದಲ್ಲಿ (USA) ಭಾರೀ ಸದ್ದು ಮಾಡುತ್ತಿದೆ. ಅದಾಗಲೇ ಹಾವಳಿ ಎಬ್ಬಿಸಿದ್ದ ಡೆಲ್ಟಾ (delta)  ಹಾಗೂ ಒಮಿಕ್ರಾನ್‌ಗಳ ಸ್ಟ್ರೇನ್‌ಗಳು ಕೂಡಿಕೊಂಡು ಹೊಸದೊಂದು ವೈರಾಣು ಸೃಷ್ಟಿಯಾಗಲಿದೆ ಎಂದು ಮೊಡೆರ್ನಾದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಪೌಲ್ ಬರ್ಟನ್ (Dr Paul Burton) ಆತಂಕಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.  ಒಬ್ಬ ವ್ಯಕ್ತಿಗೆ ಏಕಕಾಲಕ್ಕೆ ಒಮಿಕ್ರಾನ್​ ಮತ್ತು ಡೆಲ್ಟಾ ವೈರಾಣುಗಳು ತಗುಲಿದರೆ, ಆ ವ್ಯಕ್ತಿಯಲ್ಲಿ  ಕೊವಿಡ್​ 19 (Covid 19) ವೈರಸ್​ನ ಇನ್ನೊಂದು ಸೂಪರ್​ ವೇರಿಯಂಟ್​ (ಹೊಸ ತಳಿ)ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು  ಡಾ.ಪಾಲ್ ಬರ್ಟನ್ ಕಳೆದ ವಾರ ಯುಕೆ ಸಂಸತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿ ಎದುರು ಹೇಳಿದ್ದಾರೆ.  

ಈ ಬಗ್ಗೆ ಖಂಡಿತವಾಗಿಯೂ ಮಾಹಿತಿ ಇದೆ, ರೋಗನಿರೋಧಕ ಶಕ್ತಿ ಕಡಿಮೆಯಾಗಿರುವವರಲ್ಲಿ ಎರಡೂ ಬಗೆಯ ವೈರಾಣುಗಳು ಕಾಣುವ ಸಾಧ್ಯತೆ ಇದೆ. ಹಾಗೇ, ಅಲ್ಲಿನ ಆರೋಗ್ಯ ತಜ್ಞರು ಹೀಗೊಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ದಕ್ಷಿಣ ಆಫ್ರಿಕಾದಲ್ಲಿ ಪ್ರಕಟಗೊಂಡ ಕೆಲ ಪತ್ರಿಕೆಗಳು ತಿಳಿಸುತ್ತಿವೆ ಎಂದು ಡಾ. ಬರ್ಟನ್ ಉಲ್ಲೇಖಿಸಿದ್ದಾರೆ ಎಂದು ವರದಿ ತಿಳಿಸಿದೆ.

ಸದ್ಯ ಬ್ರಿಟನ್​​ನಲ್ಲಿ ಡೆಲ್ಟಾ ಮತ್ತು ಒಮಿಕ್ರಾನ್​  ಎರಡೂ ವೈರಸ್​ಗಳು ಹೆಚ್ಚಿನ ಪ್ರಮಾಣದಲ್ಲಿಯೇ ಹಬ್ಬುತ್ತಿವೆ. ಎರಡೂ ವೈರಾಣುಗಳು ತಮ್ಮಲ್ಲಿರುವ ಸ್ಟ್ರೇನ್‌ಗಳನ್ನು ಅದಲು ಬದಲು ಮಾಡಿಕೊಂಡು ಇನ್ನಷ್ಟು ಅಪಾಯಕಾರಿ ವೈರಾಣು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಬರ್ಟನ್‌ನ ಸಂಸದರಿಗೆ ತಿಳಿಸಿದ್ದಾರೆ. ಹೀಗೆ ಆಗುವ ಸಾಧ್ಯತೆ ತೀರಾ ವಿರಳವಾಗಿದ್ದರೂ, ಒಂದೊಮ್ಮೆ ಹಾಗೇನಾದರೂ ಆಗಿಬಿಟ್ಟರೆ. ಆಗ ಅತ್ಯಂತ ಹೆಚ್ಚು ಅಪಾಯಕಾರಿಯಾದ ರೂಪಾಂತರ ಸೃಷ್ಟಿಯಾಗಬಹುದು.  ನಿಯಂತ್ರಣ ಮೀರಿದ ಘಟನಾವಳಿಗಳು ಜರುಗಿ ಹೋಗಲಿದೆ.  ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

Mangaluru Omicron Cases: ದಕ್ಷಿಣ ಕನ್ನಡದಲ್ಲಿ ಏಕಾಏಕಿ 5 ಒಮಿಕ್ರಾನ್ ದೃಢ! ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊರೊನಾ

ಬ್ರಿಟನ್‌ನಲ್ಲಿ ಒಮಿಕ್ರಾನ್ ಮತ್ತು ಡೆಲ್ಟಾ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನಡುವೆ ಈ ಸಾಧ್ಯತೆ ದಟ್ಟವೆನಿಸುತ್ತಿದೆ ಎನ್ನುತ್ತಾರೆ ಬರ್ಟನ್. ನ್ಯೂ ಸೌತ್​ ವೇಲ್ಸ್​ನ ಯೂನಿವರ್ಸಿಟಿಯ ವೈರಾಣುಶಾಸ್ತ್ರಜ್ಞ ಪೀಟರ್ ವೈಟ್ ಕೂಡ ಇದೇ ಎಚ್ಚರಿಕೆ ನೀಡಿದ್ದಾರೆ. ಬ್ಲೂಮ್​ಬರ್ಗ್​ನೊಂದಿಗೆ ಸಂದರ್ಶನದಲ್ಲಿ ಮಾತನಾಡಿದ್ದ ಅವರು, ವಿವಿಧ ತಳಿಗಳ ಮರುಸಂಯೋಜನೆ ಆಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಬ್ರಿಟನ್‌ನಲ್ಲಿ(UK) ಶನಿವಾರ ಹೊಸ ಅವತಾರಿ ಕೋವಿಡ್‌ನ 10,000ಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 

Pandemic End 2022: ಮುಂದಿನ ವರ್ಷ ಕೊರೊನಾ ಕೊನೆಗೊಳ್ಳಲಿದೆಯೆಂದು ಭವಿ

ಭಾರತದಲ್ಲಿ ಶುಕ್ರವಾರ ಒಮಿಕ್ರಾನ್ ಗಳ ಸಂಖ್ಯೆ ಏರಿಕೆ!
ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳದಿಂದ ಒಮಿಕ್ರಾನ್ ಸಂಬಂಧಿಸಿದ ಹೊಸ 18 ಹೊಸ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ಭಾರತದ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 129 ಕ್ಕೆ ಏರಿದೆ ಎಂದು ವರದಿ ತಿಳಿಸಿದೆ. ಹೊಸ ಒಮಿಕ್ರಾನ್ ರೂಪಾಂತರದ 24 ಪ್ರಕರಣಗಳಿಂದ ಶುಕ್ರವಾರ ದೇಶವು ಅತಿ ಹೆಚ್ಚು ಏಕದಿನ ಏರಿಕೆ ದಾಖಲಿಸಿದೆ. 

 ಕರ್ನಾಟಕ ಆರು ಹೊಸ ಒಮಿಕ್ರಾನ್ ಪ್ರಕರಣಗಳನ್ನು ವರದಿಯಾಗಿದೆ. ಅವುಗಳಲ್ಲಿ 5 ದಕ್ಷಿಣ ಕನ್ನಡದ ಶಿಕ್ಷಣ ಸಂಸ್ಥೆಗಳಲ್ಲಿ ಕಂಡುಬಂದಿವೆ ಮತ್ತು ಒಬ್ಬರು ಯುಕೆ ಯಿಂದ ಬೆಂಗಳೂರಿಗೆ ಬಂದ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕುಗಳ ಸಂಖ್ಯೆ 14 ಕ್ಕೆ ಏರಿದೆ. ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳ ಪ್ರಕಾರ, ಇದುವರೆಗೆ ಮಹಾರಾಷ್ಟ್ರ 48, ದೆಹಲಿ 22, ರಾಜಸ್ಥಾನ 17, ಕರ್ನಾಟಕ 14, ಕೇರಳ 11, ತೆಲಂಗಾಣ 8, ಗುಜರಾತ್ 5, ಆಂಧ್ರಪ್ರದೇಶ 1, ಚಂಡೀಗಢ 1, ತಮಿಳುನಾಡು 1 ಮತ್ತು ಪಶ್ಚಿಮ ಬಂಗಾಳ 1 ಪ್ರಕರಣಗಳು ವರದಿಯಾಗಿವೆ.

click me!