ಕ್ಯಾನ್ಸರ್ ಗೆ ತುತ್ತಾದ ಬಾಲಕಿಯ ಎದುರು ನೃತ್ಯ ಮಾಡಿದ ನರ್ಸ್/ ಸೋಶಿಯಲ್ ಮೀಡಿಯಾದಲ್ಲಿ ನರ್ಸ್ ಮಾನವೀಯ ಮುಖ ವೈರಲ್/ ಮೂರು ವರ್ಷದ ಕಂದಮ್ಮನ ಎದುರು ನೃತ್ಯ ಮಾಡಿದ ನರ್ಸ್
ಕೆರೋಲಿನಾ(ನ. 29) ಕ್ಯಾನ್ಸರ್ ಗೆ ತುತ್ತಾದ ಬಾಲಕಿಯ ಮೊಗದಲ್ಲಿ ನಗು ಮೂಡಿಸಲು ಈ ನರ್ಸ್ ಪಡುತ್ತಿರುವ ಸಾಹಸಕ್ಕೆ ಸೋಶಿಯಲ್ ಮೀಡಿಯಾ ಅಪಾರ ಮೆಚ್ಚುಗೆ ಸೂಚಿಸಿದೆ.
ಕ್ಯಾನ್ಸರ್ ಗೆ ತುತ್ತಾಗಿ ಹಾಸಿಗೆ ಮೇಲೆ ಮಲಗಿರುವ ಮೂರು ವರ್ಷದ ಕಂದಮ್ಮನ ಮುಂದೆ ಈ ನರ್ಸ್ ಕ್ರಿಸ್ ಮಸ್ ಹಾಡಿಗೆ ನೃತ್ಯ ಮಾಡಿದ್ದಾರೆ.ನಾರ್ತ್ ಕೆರೋಲಿನಾದ ಬ್ರೆನರ್ ಯಂಗಸ್ಟರ್ ಹಾಸ್ಪಿಟಲ್ ನ ಮಾರಿಕಾ ಲವ್ ಬೊವೇನ್ಸ್ ಎನ್ನುವ ನರ್ಸ್ ನಡೆದುಕೊಂಡ ರೀತಿಗೆ ಮೆಚ್ಚುಗೆ ಸಿಕ್ಕಿದೆ.
ದಂತಪಂಕ್ತಿ ಮೂಗಿನಲ್ಲಿ 20 ವರ್ಷದಿಂದ ಗೊತ್ತೇ ಆಗ್ಲಿಲ್ಲ!
ಪಿಯಾರ್ಲ ಮೊನ್ರೋ ಎನ್ನುವ ಬಾಲಕಿ ಕ್ಯಾನ್ಸರ್ ನಿಂದ ನರಳುತ್ತಿದ್ದಾರೆ. ಈ ಬಾಲಕಿ ಎದುರು ನರ್ಸ್ ಡ್ಯಾನ್ಸ್ ಮಾಡಿದ್ದಾರೆ. ಬಾಲಕಿಯ ತಂದೆ ವಿಡಿಯೋ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.
ಮಾಧ್ಯಮವೊಂದು ವರದಿ ಮಾಡಿದಂತೆ ನರ್ಸ್ ಆಸ್ಪತ್ರೆಯ ಆಂಕಾಲಜಿ ವಿಭಾಗಕ್ಕೆ ಸೇರಿದವರು. ಕಾಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡ ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದಳು. ಪರೀಕ್ಷೆ ನಡೆಸಿದಾಗ ಬಾಲಕಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ.