
ವಾಷಿಂಗ್ಟನ್: ಗ್ಯಾರಂಟಿ ಘೋಷಿಸಿ ಭಾರತೀಯ ಮೂಲದ ಮಮ್ದಾನಿ ಅಮೆರಿಕದ ನ್ಯೂಯಾರ್ಕ್‌ನ ಮೇಯರ್ ಹುದ್ದೆ ಗೆದ್ದ ಬೆನ್ನಲ್ಲೇ, ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಗ್ಯಾರಂಟಿ ಭಾಗ್ಯ ಘೋಷಿಸಿದ್ದಾರೆ. ಅಮೆರಿಕದ ಹಿತ ರಕ್ಷಣೆಗಾಗಿ ಭಾರತ ಸೇರಿದಂತೆ ಅನ್ಯ ವ್ಯಾಪಾರಿ ಪಾಲುದಾರ ದೇಶಗಳ ಮೇಲೆ ಭಾರೀ ತೆರಿಗೆ ಹೇರಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅದರಿಂದ ಸಂಗ್ರಹವಾಗುವ ಹಣವನ್ನು ಅಮೆರಿಕನ್ನರಿಗೆ ಹಂಚುವ ಭರವಸೆ ನೀಡಿದ್ದಾರೆ. ಶ್ರೀಮಂತರನ್ನು ಹೊರತುಪಡಿಸಿ ಎಲ್ಲರಿಗೂ 1.77 ಲಕ್ಷ ರು. ಹಂಚಲಾಗುವುದು ಎಂದು ಅವರು ಹೇಳಿದ್ದಾರೆ.
ಟ್ರುಥ್ ಸೋಷಿಯಲ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ತೆರಿಗೆ ವಿರೋಧಿಗಳನ್ನು ಮೂರ್ಖರು ಎಂದು ಕರೆದಿರುವ ಟ್ರಂಪ್, ‘ಆ ಕ್ರಮದಿಂದಾಗಿಯೇ ನಾವೀಗ ವಿಶ್ವದಲ್ಲಿ ಅತಿ ಸಿರಿವಂತ ಮತ್ತು ಗೌರವಾನ್ವಿತ ದೇಶವಾಗಿದ್ದೇವೆ. ದೇಶದಲ್ಲೀಗ ಹಣದುಬ್ಬರವಿಲ್ಲ ಹಾಗೂ ಷೇರುಮಾರುಕಟ್ಟೆ ಕೂಡ ದಾಖಲೆಯ ಮಟ್ಟಕ್ಕೆ ತಲುಪಿದೆ. ದೇಶೀಯ ಹೂಡಿಕೆಯಲ್ಲಿ ಏರಿಕೆಯಾಗಿ ಉದ್ಯಮಗಳು ಇತ್ತ ಮುಖ ಮಾಡುತ್ತಿವೆ’ ಎಂದು ತಮ್ಮ ನೀತಿಯನ್ನು ಹಾಗೂ ಅದರ ಪರಿಣಾಮವನ್ನು ಕೊಂಡಾಡಿದ್ದಾರೆ.
ಮುಂದುವರೆದು, ‘ಅನ್ಯ ದೇಶಗಳಿಂದ ಸಂಗ್ರಹವಾಗುವ ಹಣದಲ್ಲಿ ನಮ್ಮ 3250 ಲಕ್ಷ ಕೋಟಿ ರು. ಸಾಲವನ್ನು ತೀರಿಸುತ್ತೇವೆ. ಬಳಿಕ ಉಳಿದ ಹಣದಿಂದ ಅಮೆರಿಕನ್ನರಿಗೆ 1.77 ಲಕ್ಷ ರು. ಲಾಭಾಂಶವನ್ನು ಹಂಚುತ್ತೇವೆ’ ಎಂದು ಘೋಷಿಸಿದ್ದಾರೆ. ಆದರೆ ಈ ಲಾಭಾಂಶದಿಂದ ಅಧಿಕ ಆದಾಯವಿರುವ ಜನರನ್ನು ಹೊರಗಿಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ