ಹಸಿವು ನೀಗಿಸುತ್ತಿರುವ WFP ಸಂಸ್ಥೆಗೆ 2020ರ ನೊಬೆಲ್ ಶಾಂತಿ ಪ್ರಶಸ್ತಿ!

By Suvarna NewsFirst Published Oct 9, 2020, 5:59 PM IST
Highlights

2020ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟಗೊಂಡಿದೆ. ಇಡೀ ವಿಶ್ವವನ್ನೇ ಕಾಡುತ್ತಿರುವ ಹಸಿವನ್ನು ನೀಗಿಸುವ ಪ್ರಯತ್ನ ಮಾಡುತ್ತಿರುವ ವಿಶ್ವ ಸಂಸ್ಥೆಯ ವಿಶ್ವ ಆಹಾರ ಯೋಜನೆಗೆ( (WFP) ಪ್ರಸಕ್ತ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಘೋಷಿಸಲಾಗಿದೆ

ನವದೆಹಲಿ (ಅ.09): ನೊಬೆಲ್ ಪ್ರಶಸ್ತಿ ಕಮಿಟಿ ಪ್ರಸಕ್ತ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವಿಶ್ವ ಸಂಸ್ಥೆಯ ಆಹಾರ ವಿಭಾಗದ ವಿಶ್ವ ಆಹಾರ ಯೋಜನೆಗೆ ನೀಡಿದೆ. ಇಡೀ ವಿಶ್ವದಲ್ಲಿ ಅತೀಯಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಹಸಿವು ಒಂದು. ಸಂಕಷ್ಟದಲ್ಲಿದ್ದವರ ಹಸಿವು ನೀಗಿಸುವ ಕಾರ್ಯ ಮಾಡುತ್ತಿರುವ ವಿಶ್ವ ಆಹಾರ ಯೋಜನೆಗೆ( (WFP) ಇದೀಗ ಶಾಂತಿ ಪ್ರಶಸ್ತಿ ಲಭಿಸಿದೆ.

ಅಮೆ​ರಿಕದ ಲೂಯಿಸ್‌ಗೆ ನೊಬೆಲ್‌ ಸಾಹಿತ್ಯ ಪ್ರಶ​ಸ್ತಿ, 8.08 ಕೋಟಿ ರು. ನಗದು ಬಹು​ಮಾನ

ಹಸಿವನ್ನು ಹೋಗಲಾಡಿಸಲು ವಿಶ್ವ ಆಹಾರ ಯೋಜನೆ ವಿಭಾಗ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಯುದ್ಧ ಪೀಡಿತ, ದಾಳಿಗೊಳಗಾದ ಪ್ರದೇಶಗಳಲ್ಲಿನ ಜನರ ಹಸಿವು ನೀಗಿಸುವ ಕೆಲಸ ಮಾಡೋ ಮೂಲಕ ಮತ್ತೆ ಶಾಂತಿ ಸ್ಥಾಪಿಸುವಲ್ಲಿ ವಿಶ್ವ ಆಹಾರ ಯೋಜನೆ ಅವಿರತ ಪ್ರಯತ್ನ ಮಾಡಿದೆ.   WFP ಮಹತ್ ಕಾರ್ಯಕ್ಕೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಿದ್ದೇವೆ ಎಂದು ನೊಬೆಲ್ ಕಮಿಟಿ ಅಧ್ಯಕ್ಷ ಬೆರಿಟ್ ರೀಸ್ಆ್ಯಂಡರ್ಸನ್ ಹೇಳಿದ್ದಾರೆ.

ವಂಶವಾಹಿ ತಿದ್ದುವ ತಂತ್ರಜ್ಞಾನ ಶೋಧಿಸಿದ ಇಬ್ಬರಿಗೆ ನೊಬೆಲ್!.

ಹಸಿವು ನೀಗಿಸುವ WFP ಕಾರ್ಯಕ್ಕೆ ಮತ್ತಷ್ಟು ವೇಗ ತುಂಬಬೇಕಾದ ಅಗತ್ಯವಿದೆ. ಕೊರೋನಾ ವೈರಸ್, ಲಾಕ್‌ಡೌನ್ ಬಳಿಕ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಆಹಾರಕ್ಕೆ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ WFP ಸಂಸ್ಥೆಯನ್ನು ಬಲಪಡಿಸುವ ಅಗತ್ಯವಿದೆ. ಸಂಸ್ಥೆಗೆ ಹಣಕಾಸು ನೆರವು ಸೇರಿದಂತೆ ಎಲ್ಲಾ ರೀತಿಯ ಸಹಕಾರ ನೀಡುವುದು ಇಂದಿನ ಪರಿಸ್ಥಿತಿಗೆ ಅಗತ್ಯವಾಗಿದೆ ಎಂದು ಆ್ಯಂಡರ್ಸನ್ ಹೇಳಿದ್ದಾರೆ.

 

BREAKING NEWS:
The Norwegian Nobel Committee has decided to award the 2020 Nobel Peace Prize to the World Food Programme (WFP). pic.twitter.com/fjnKfXjE3E

— The Nobel Prize (@NobelPrize)

ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರಕ್ಕೆ WFP ಸೇರಿದಂತೆ 107 ಸಂಘ ಸಂಸ್ಥೆಗಳು, 211 ವ್ಯಕ್ತಿಗಳ ಹೆಸರನ್ನು ನಾಮನಿರ್ದೇಶನ ಮಾಡಲಾಗಿತ್ತು. ಅಂತಿಮವಾಗಿ WFP ಶಾಂತಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿ 8 ಕೋಟಿ ರೂಪಾಯಿ ನಗದು ಹಾಗೂ ಚಿನ್ನ ಲೇಪಿತ ಪ್ರಶಸ್ತಿ ಫಲಕ ಒಳಗೊಂಡಿದೆ.

click me!