
ಪಿಟಿಐ(ಅ.09): ಅಮೆರಿಕ ಕವಯಿತ್ರಿ ಲೂಯಿಸ್ ಗ್ಲುಕ್ ಅವರಿಗೆ ಪ್ರತಿಷ್ಠಿತ ನೊಬೆಲ್ ಪುರಸ್ಕಾರ ಲಭಿಸಿದೆ. ನೇರ, ನಿಷ್ಪಕ್ಷಪಾತ ಹಾಗೂ ರಾಜಿಯಾಗದ ನಿಲುವುಗಳನ್ನು ಹೊಂದಿದ ಕೃತಿಗಳನ್ನು ಬರೆದ ಕಾರಣಕ್ಕೆ ಅವರಿಗೆ ಈ ಗೌರವ ದೊರೆತಿದೆ.
ಗುರುವಾರ ಪ್ರಶಸ್ತಿ ಘೋಷಣೆ ಮಾಡಿದ ಸ್ಟಾಕ್‌ಹೋಂನ ಸ್ವೀಡಿಷ್ ಅಕಾಡೆಮಿ, ‘ವೈಯಕ್ತಿಕ ಅಸ್ತಿತ್ವವನ್ನು ಸಾರ್ವತ್ರೀಕರಣಗೊಳಿಸುವ ನಿಷ್ಠುರ ಸೌಂದರ್ಯದ ನಿಸ್ಸಂದಿಗ್ಧ ಕಾವ್ಯಾತ್ಮಕ ಧ್ವನಿ ಅವರಲ್ಲಿದೆ’ ಎಂದು ಬಣ್ಣಿಸಿದೆ. ಪ್ರಶಸ್ತಿಯು 8.08 ಕೋಟಿ ರು. ನಗದು ಬಹುಮಾನ ಒಳಗೊಂಡಿದೆ.
ವೈದೇಹಿ ಕಂಡಂತೆ ಮಹಿಳಾ ಸಾಹಿತ್ಯ ಜಗತ್ತು ಬದಲಾಗಿದೆಯಾ?
77 ವರ್ಷದ ಲೂಯಿಸ್ ಗ್ಲುಕ್ ಅವರು ಯೇಲ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. 1068ರಲ್ಲಿ ‘ಫಸ್ಟ್ಬಾರ್ನ್’ ಕೃತಿ ಮೂಲಕ ಅವರು ಸಾಹಿತ್ಯ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. 1992ರಲ್ಲಿ ವೈಲ್ಡ್ ಐರಿಸ್ ಕವನ ಸಂಕಲನಕ್ಕೆ ಅವರಿಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯೂ ಬಂದಿತ್ತು.
‘ಅಮೆರಿಕ ಸಮಕಾಲೀನ ಸಾಹಿತ್ಯದ ಅತ್ಯಂತ ಪ್ರಮುಖ ಕವಿಗಳಲ್ಲಿ ಅವರು ಒಬ್ಬರು. ಅವರ ಕವಿತೆಗಳಲ್ಲಿ ಕಟು ವಿನೋದಗಳು ಇರುತ್ತವೆ’ ಎಂದು ಸಮಿತಿ ಬಣ್ಣಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ