
ಇಸ್ಲಾಮಾಬಾದ್: ಐಎಂಎಫ್‌ನಿಂದ ಸಾಲ ಪಡೆಯುವ ಷರತ್ತಿನ ಸಲುವಾಗಿ, ದಿವಾಳಿಯಾಗಿರುವ ಸರ್ಕಾರಿ ಒಡೆತನದ ವಿಮಾನಯಾನ ಸಂಸ್ಥೆ ಪಿಐಎನ ಖಾಸಗೀಕರಣಕ್ಕೆ ಮುಂದಾಗಿರುವ ಪಾಕಿಸ್ತಾನ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ಕಾರಣ, ಖರೀದಿಗೆ ಬಿಡ್ ಸಲ್ಲಿಸಿದ್ದೇ ನಾಲ್ವರು. ಈ ಪೈಕಿ ಅತಿದೊಡ್ಡ ಬಿಡ್ ಸಲ್ಲಿಸಿದ್ದ ಪಾಕಿಸ್ತಾನ ಸೇನೆ ಒಡೆತನದ ‘ಫೌಜಿ ಫರ್ಟಿಲೈಸರ್ ಕಂಪನಿ ಲಿ.’ ಕೂಡಾ ಇದೀಗ ಖರೀದಿ ಪ್ರಕ್ರಿಯೆಯಿಂದ ಹೊರಬಂದಿದೆ.
ಏರ್‌ಲೈನ್ಸ್‌ನ ಶೇ.75ರಷ್ಟು ಒಡೆತನವನ್ನು ಖಾಸಗಿಯವರಿಗೆ ಮಾರಲು ಸರ್ಕಾರ ಮುಂದಾಗಿತ್ತು. ಆದರೆ ನಿಗದಿತ ಸಮಯದೊಳಗೆ(ಡಿ.21) ಫೌಜಿ ಕಂಪನಿ ಹಣವನ್ನು ಠೇವಣಿ ಇಡದ ಕಾರಣ ಖರೀದಿಗೆ ಅನರ್ಹವಾಗಿದೆ. ಈಗ 3 ಸಣ್ಣ ಖರೀದಿದಾರರು ಉಳಿದಿರುವುದರಿಂದ, ಸಂಸ್ಥೆ ಅತಿ ಕಡಿಮೆ ದರದಲ್ಲಿ ಮಾರಾಟವಾಗಲಿದೆ. ಹರಾಜು ಪ್ರಕ್ರಿಯೆ ಡಿ.23ರಂದು ನಡೆಯಲಿದೆ. ಪ್ರಸ್ತುತ ಪಿಐಎ 41 ಸಾವಿರ ಕೋಟಿ ರು. ನಷ್ಟದಲ್ಲಿದೆ.
ನವದೆಹಲಿ: ಕಾಲಕ್ಕೆ ತಕ್ಕಂತೆ ಕಳ್ಳ-ಕಾಕರೂ ಇದೀಗ ಅಪ್ಡೇಟ್ ಆಗುತ್ತಿದ್ದಾರೆ. ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರ ರಾಜ್ಯಗಳಲ್ಲಿ ಗೂಗಲ್ ಮ್ಯಾಪ್‌ನ ನೆರವು ಪಡೆದು ಮನೆ ಕಳ್ಳತನ ಮಾಡುತ್ತಿದ್ದ ತಂಡವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಕಳ್ಳರು ಗೂಗಲ್ ಮ್ಯಾಪ್ ಬಳಸಿಕೊಂಡು ಕಳ್ಳತನಕ್ಕೆ ಸೂಕ್ತವಾದ ಮನೆಗಳನ್ನು ಗುರುತಿಸುತ್ತಿದ್ದರು. ಆ ಬಳಿಕ ಅಲ್ಲಿಗೆ ತೆರಳಿ ತಮ್ಮ ಕೈಚಳಕ ತೋರಿಸುತ್ತಿದ್ದರು. ಸೆ.19ರಂದು ಈ ಕಳ್ಳರು ಜಮ್‌ಶೆಡ್‌ಪುರದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದರು. ಈ ವೇಳೆ ಸಿ.ಸಿ.ಟೀವಿ ಸೇರಿ ವಿವಿಧ ಮಾಹಿತಿಗಳನ್ನು ಆಧರಿಸಿ ಆರೋಪಿಗಳ ಬಂಧಿಸಿ ವಿಚಾರಣೆ ನಡೆಸಿದಾಗ ಉಳಿದ ಕಳ್ಳತನ ವಿಚಾರ ಬಯಲಾಗಿದೆ.
ಏರ್‌ಲೈನ್ಸ್‌ನ ಶೇ.75ರಷ್ಟು ಒಡೆತನವನ್ನು ಖಾಸಗಿಯವರಿಗೆ ಮಾರಲು ಸರ್ಕಾರ ಮುಂದಾಗಿತ್ತು. ಆದರೆ ನಿಗದಿತ ಸಮಯದೊಳಗೆ(ಡಿ.21) ಫೌಜಿ ಕಂಪನಿ ಹಣವನ್ನು ಠೇವಣಿ ಇಡದ ಕಾರಣ ಖರೀದಿಗೆ ಅನರ್ಹವಾಗಿದೆ. ಈಗ 3 ಸಣ್ಣ ಖರೀದಿದಾರರು ಉಳಿದಿರುವುದರಿಂದ, ಸಂಸ್ಥೆ ಅತಿ ಕಡಿಮೆ ದರದಲ್ಲಿ ಮಾರಾಟವಾಗಲಿದೆ. ಹರಾಜು ಪ್ರಕ್ರಿಯೆ ಡಿ.23ರಂದು ನಡೆಯಲಿದೆ. ಪ್ರಸ್ತುತ ಪಿಐಎ 41 ಸಾವಿರ ಕೋಟಿ ರು. ನಷ್ಟದಲ್ಲಿದೆ.
ಇಸ್ಲಾಮಾಬಾದ್: ಸೌದಿ ಅರೇಬಿಯಾ ಮೊದಲಾದ ದೇಶಗಳು ತಮ್ಮಲ್ಲಿದ್ದ ಪಾಕ್ ಭಿಕ್ಷುಕರನ್ನು ದೇಶದಿಂದ ಹೊರದಬ್ಬಿದ ಬೆನ್ನಲ್ಲೇ, ತನ್ನ ದೇಶದ ಭಿಕ್ಷುಕರು ಮತ್ತು ಅಪೂರ್ಣ ದಾಖಲೆಯನ್ನು ಹೊಂದಿರುವವರು ವಿದೇಶಕ್ಕೆ ಪ್ರಯಾಣ ಮಾಡುವಂತಿಲ್ಲ ಎಂದು ಪಾಕಿಸ್ತಾನ ಸರ್ಕಾರ ಆದೇಶಿಸಿದೆ.ಗಲ್ಫ್ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳಲ್ಲಿ ಪಾಕಿಸ್ತಾನಿ ಪ್ರಜೆಗಳು ಭಿಕ್ಷಾಟನೆಯಲ್ಲಿ ತೊಡಗಿಕೊಂಡಿದ್ದಾರೆ. ಇದು ಪಾಕ್‌ಗೆ ಜಾಗತಿಕ ಮಟ್ಟದಲ್ಲಿ ಮುಜುಗರ ತಂದೊಡ್ಡಿದೆ. ಈ ಹಿನ್ನೆಲೆಯಲ್ಲಿ ಇಂಥ ಕ್ರಮ ಜಾರಿಗೊಳಿಸಲಾಗಿದೆ.
ಪಾಕಿಸ್ತಾನದಲ್ಲಿ ಈ ವರ್ಷವೊಂದರಲ್ಲೇ 66 ಸಾವಿರಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಂಶಯ, ಅಪೂರ್ಣ ದಾಖಲೆಗಳನ್ನು ಹೊಂದಿರುವ ಆರೋಪದಲ್ಲಿ ವಿದೇಶಿ ಪ್ರಯಾಣ ನಿರಾಕರಿಸಲಾಗಿತ್ತು, ಮಾತ್ರವಲ್ಲದೇ ಅಕ್ರಮವಾಗಿ ಪಾಕ್‌ನಿಂದ ವಲಸೆ ಹೋಗಿದ್ದ ಸಾವಿರಾರು ಪಾಕಿಗಳನ್ನು ಸೌದಿ ಅರೇಬಿಯಾ, ಯುಎಇ, ಅಜರ್‌ಬೈಜಾನ್ ರಾಷ್ಟ್ರಗಳು ಗಡೀಪಾರು ಮಾಡಿದ್ದವು.
ನವದೆಹಲಿ: ರಾಜಸ್ಥಾನದ ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಅವರ ಅಜ್ಮೇರ್ ಶರೀಫ್ ದರ್ಗಾಕ್ಕೆ ವಾರ್ಷಿಕ ಉರುಸ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾದರ್ ಸಮರ್ಪಿಸುವ ಕ್ರಮಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಭಾರತದ ಮೇಲೆ ದಾಳಿ ಮಾಡಿದ ವಿದೇಶಿ ಆಕ್ರಮಣಕಾರರ ಜೊತೆ ಚಿಶ್ತಿ ಕೈಜೋಡಿಸಿದ್ದರು. ಹೀಗಾಗಿ ಅಲ್ಲಿಗೆ ಚಾದರ್ ಸಮರ್ಪಣೆ ಭಾರತದ ಸಾರ್ವಭೌಮತ್ವ, ಘನತೆ ಮತ್ತು ನಾಗರಿಕತೆಯ ನೀತಿಗೆ ವಿರುದ್ಧವಾಗಿದೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 1947ರಲ್ಲಿ ಪ್ರಧಾನಿ ಜವಾಹರಲಾಲ್ ನೆಹರು ದರ್ಗಾಕ್ಕೆ ಚಾದರ್ ಅರ್ಪಿಸುವ ಕ್ರಮ ಆಚರಣೆಗೆ ತಂದರು. ಅಲ್ಲಿಂದ ಪ್ರತಿ ವರ್ಷ ಪ್ರಧಾನಿಗಳು ಚಾದರ್ ಅರ್ಪಿಸುತ್ತಾ ಬಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ