15 ವರ್ಷ ಬಳಿಕ ಜಪಾನ್‌ನಲ್ಲಿ ವಿಶ್ವದ ದೊಡ್ಡ ಅಣುವಿದ್ಯುತ್‌ ಸ್ಥಾವರಕ್ಕೆ ಮತ್ತೆ ಚಾಲನೆ

Kannadaprabha News   | Kannada Prabha
Published : Dec 23, 2025, 05:16 AM IST
nuclear plant

ಸಾರಾಂಶ

2011ರ ಫುಕುಶಿಮಾ ದುರಂತದ ಬಳಿಕ ಸ್ಥಗಿತವಾಗಿದ್ದ ಜಗತ್ತಿನ ಅತಿ ದೊಡ್ಡ ಅಣುವಿದ್ಯುತ್‌ ಸ್ಥಾವರವನ್ನು15 ವರ್ಷಗಳ ನಂತರ ಮತ್ತೆ ಆರಂಭಿಸಲು ಜಪಾನ್‌ ಮುಂದಾಗಿದೆ. -ವಿದೇಶಿ ಇಂಧನ ಅವಲಂಬನೆ ಕಡಿತಗೊಳಿಸಲು ಹೊಸ ಕ್ರಮ

ಟೋಕಿಯೊ: 2011ರ ಫುಕುಶಿಮಾ ದುರಂತದ ಬಳಿಕ ಸ್ಥಗಿತವಾಗಿದ್ದ ಜಗತ್ತಿನ ಅತಿ ದೊಡ್ಡ ಅಣುವಿದ್ಯುತ್‌ ಸ್ಥಾವರವನ್ನು15 ವರ್ಷಗಳ ನಂತರ ಮತ್ತೆ ಆರಂಭಿಸಲು ಜಪಾನ್‌ ಮುಂದಾಗಿದೆ.

ರಾಜಧಾನಿ ಟೋಕಿಯೊದಿಂದ 220 ಕಿ.ಮೀ. ದೂರ

ರಾಜಧಾನಿ ಟೋಕಿಯೊದಿಂದ 220 ಕಿ.ಮೀ. ದೂರದ ನಿಯಾಗಟಾ ಪ್ರದೇಶದಲ್ಲಿರುವ ಕಶಿವಾಜಾಕಿ-ಕರಿವಾ ಸ್ಥಾವರಕ್ಕೆ ಮರುಚಾಲನೆ ನೀಡುವ ನಿರ್ಣಯವನ್ನು ಸಂಸತ್ತಿನಲ್ಲಿ ವಿಶ್ವಾಸಮತದ ಮೂಲಕ ಅಂಗೀಕರಿಸಲಾಗಿದೆ.

7 ರಿಯಾಕ್ಟರ್‌

ಈ ಸ್ಥಾವರದಲ್ಲಿ 7 ರಿಯಾಕ್ಟರ್‌ಗಳಿವೆ. ಹೀಗಾಗಿ ಇದು ವಿಶ್ವದಲ್ಲೇ ಅತಿ ದೊಡ್ಡ ಅಣುವಿದ್ಯುತ್‌ ಸ್ಥಾವರ ಎಂಬ ಹೆಗ್ಗಳಿಕೆ ಪಡೆದಿದೆ. ಮೊದಲ ರಿಯಾಕ್ಟರ್ 2026ರ ಜ.20ರಂದು ಆರಂಭವಾಗುವ ಸಾಧ್ಯತೆಯಿದೆ. 2011ರಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿಯಿಂದ ಫುಕುಶಿಮಾ ಅಣುವಿದ್ಯುತ್‌ ಸ್ಥಾವರ ನಾಶವಾಯಿತು. ಆ ಬಳಿಕ ಜಪಾನ್‌ನಲ್ಲಿನ ಎಲ್ಲ 54 ಅಣು ರಿಯಾಕ್ಟರ್‌ಗಳನ್ನು ಸ್ಥಗಿತಗೊಳಿಸಲಾಯಿತು. ಜಪಾನ್‌ ವಿದೇಶಿ ಇಂಧನದ (ಹೆಚ್ಚಾಗಿ ಗ್ಯಾಸ್ ಮತ್ತು ಕಲ್ಲಿದ್ದಲು) ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದೀಗ ಅಣುಶಕ್ತಿಯನ್ನು ಮತ್ತೆ ಬಳಸಿ, ಈ ಅವಲಂಬನೆಯನ್ನು ಕಡಿಮೆ ಮಾಡಲು ಸರ್ಕಾರ ಉದ್ದೇಶಿಸಿದೆ. ಆದರೆ ಸ್ಥಳೀಯರು ಈ ಯೋಜನೆಯನ್ನು ವಿರೋಧಿಸುತ್ತಿದ್ದು, ಫುಕುಶಿಮಾ ದುರಂತ ಮರುಕಳಿಸುವುದು ಬೇಡ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೋಂಡಿ ಬೀಚಲ್ಲಿ ಗುಂಡಿಗೂ ಮುನ್ನ ಬಾಂಬ್‌ ಎಸೆದಿದ್ದ ಉಗ್ರ ಅಪ್ಪ-ಮಗ
ಮಸ್ಕ್‌ರ ಸ್ಟಾರ್‌ಲಿಂಕ್‌ ಉಪಗ್ರಹಗಳ ಧ್ವಂಸಕ್ಕೆ ರಷ್ಯಾ ಶಸ್ತ್ರ ತಯಾರಿ?