ಅಪಘಾತವೆಸಗಿ ಇಬ್ಬರ ಬಲಿ ಪಡೆದು ಉದ್ಯಮಿ ಪತ್ನಿಯ ಉದ್ಧಟತನದ ವರ್ತನೆ

By Suvarna News  |  First Published Aug 28, 2024, 4:43 PM IST

ಉದ್ಯಮಿಯೋರ್ವನ ಪತ್ನಿಯ ಅತೀವೇಗದ ಹಾಗೂ ಅಜಾಗರೂಕ ಚಾಲನೆಗೆ ಅಪ್ಪ ಮಗಳು ಬಲಿಯಾದ ಘಟನೆ ಕಳೆದ ಆಗಸ್ಟ್ 19 ರಂದು ನಡೆದಿತ್ತು. ಅಪಘಾತದ  ನಂತರ ಉದ್ಯಮಿಯ ಪತ್ನಿ ನತಾಶ ದಾನಿಶ್ ಅಲಿ ಉದ್ಧಟತನದಿಂದ ವರ್ತಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ. 


ಕರಾಚಿ: ಪಾಕಿಸ್ತಾನದ ಖ್ಯಾತ ಉದ್ಯಮಿಯೋರ್ವನ ಪತ್ನಿಯ ಅತೀವೇಗದ ಹಾಗೂ ಅಜಾಗರೂಕ ಚಾಲನೆಗೆ ಅಪ್ಪ ಮಗಳು ಬಲಿಯಾದ ಘಟನೆ ಕಳೆದ ಆಗಸ್ಟ್ 19 ರಂದು ನಡೆದಿತ್ತು. ಅಪಘಾತದ  ನಂತರ ಉದ್ಯಮಿಯ ಪತ್ನಿ ನತಾಶ ದಾನಿಶ್ ಅಲಿ ಉದ್ಧಟತನದಿಂದ ವರ್ತಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಪಾಕಿಸ್ತಾನದ ಕರ್ಸಾಜ್‌ ರಸ್ತೆಯಲ್ಲಿ ನತಾಶ ದಾನಿಶ್ ಅಲಿ ವೇಗವಾಗಿ ತನ್ನ ಟೋಯೋಟಾ ಲ್ಯಾಂಡ್ ಕ್ರೂಸರ್ ಎಸ್‌ಯುವಿ ಗಾಡಿಯನ್ನು ಚಲಾಯಿಸಿ ಇತರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾ ಅಪ್ಪ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರು, ಜೊತೆಗೆ ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಇತರ ವಾಹನಗಳಿಗೂ ಹಾನಿಯಾಗಿತ್ತು. ಹೀಗೆ ಎರ್ರಾಬಿರಿಯಾಗಿ ವಾಹನ ಓಡಿಸಿ ಅಪ್ಪ ಮಗಳ ಜೀವ ಬಲಿ ಪಡೆದ ನತಾಶ್ ದಾನಿಶ್ ಅಲಿ ಪಾಕಿಸ್ತಾನದ ಖ್ಯಾತ ಉದ್ಯಮಿ ದಾನಿಶ್ ಇಕ್ಬಾಲ್ ಎಂಬಾತನ ಪತ್ನಿ. 

Latest Videos

ಮೊಬೈಲ್ ಫೋನ್ ಕದ್ದು ಓಡುತ್ತಿದ್ದಾಗ ದುರಂತ: ಕಾರಡಿಗೆ ಬಿದ್ದು ಸತ್ತ ಕಳ್ಳ: ವೀಡಿಯೋ ವೈರಲ್

ಆದರೆ ಅಪಘಾತದ ನಂತರ ಈಕೆಯ ವರ್ತನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ತಾನು ಅಪಘಾತ ವೆಸಗಿ ಇಬ್ಬರ ಪ್ರಾಣ ತೆಗೆದಿದ್ದರೂ ಈ ಬಗ್ಗೆ ಪಶ್ಚಾತಾಪ ಪಡದ ನತಾಶಾ ಅಪಘಾತ ಸಂತ್ರಸ್ತರನ್ನೇ ನಿಂದಿಸಲು ಶುರು ಮಾಡಿದ್ದಾರೆ. ಅಲ್ಲದೇ ಕ್ಯಾಮರಾ ಮುಂದೆ ಆಕೆ ನಗು ಬೀರಿದ್ದಾಳೆ.  ಅಲ್ಲದೇ ಅಲ್ಲಿ ಜನ ಆಕೆಯ ವಿರುದ್ಧ ಆಕ್ರೋಶಗೊಂಡಾಗ ಸಿಟ್ಟಿಗೆದ್ದ ನತಾಶಾ, 'ನನ್ನ ಅಪ್ಪನ ಬಗ್ಗೆ ನಿಮಗೆ ಗೊತ್ತಿಲ್ಲ' ಎಂದು ಬಿಲ್ಡಪ್ ಜೊತೆ ಅಲ್ಲಿದ್ದ ಜನರನ್ನು ಬೆದರಿಸಲು ಮುಂದಾಗಿದ್ದಾಳೆ. 

ಕರಾಚಿಯ ಕರ್ಸಾಜ್ ರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದ ನತಾಶ ತನ್ನ ವಾಹನವನ್ನು ತಿರುವಿನಲ್ಲಿ ತಿರುಗಿಸಲು ಯತ್ನಿಸುತ್ತಿದ್ದಾಗ ಅಲ್ಲಿ ಪಾರ್ಕ್ ಮಾಡಲಾಗಿದ್ದ ಬೈಕ್ ಸೇರಿದಂತೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಳು. ಈ ದುರಂತದಲ್ಲಿ ಅಪ್ಪ ಮಗಳು ಸಾವನ್ನಪ್ಪಿದ್ದರು. ಈಗ ಈಕೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಈಕೆಯನ್ನು ಕೂಡಲೇ ಜೈಲಿಗಟ್ಟುವಂತೆ ಜನ ಆಗ್ರಹಿಸಿದ್ದಾರೆ.

ಬೆಟ್ಟದ ತುದಿಯಲ್ಲಿ ಕಾರ್‌ ರಿವರ್ಸ್‌ ಮಾಡುವ ರೀಲ್‌, 300 ಫೀಟ್‌ ಆಳಕ್ಕೆ ಬಿದ್ದು ಯುವತಿ ಸಾವು ಕಂಡ ವಿಡಿಯೋ ವೈರಲ್‌!

ಆದರೆ ಇಬ್ಬರ ಬಲಿ ಪಡೆದ ನತಾಶಾ ಮಾತ್ರ ಅನಾರೋಗ್ಯದ ನೆಪ ಹೇಳಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ನ್ಯಾಯಾಲಯಕ್ಕೂ ಹಾಜರಾಗಿಲ್ಲ. ಇತ್ತ ಆಕೆಯ ವಕೀಲರು ಆಕೆಯ ಮಾನಸಿಕ ಆರೋಗ್ಯ ಸರಿ ಇಲ್ಲ, ಹೀಗಾಗಿ ಆಕೆ ಜಿನ್ನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಆಕೆಯ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಆಕೆ ಮಾತ್ರ ಆಸ್ಪತ್ರೆಯಿಂದ ಯಾವುದೇ ತೊಂದರೆ ಇಲ್ಲದೇ ಡಿಸ್ಚಾರ್ಜ್ ಆಗಿದ್ದಾಳೆ ಎಂದು ತಿಳಿದು ಬಂದಿದೆ.

 

 

Shameless woman Natasha Iqbal killed a father & his daughter on road, is the wife of Danish Iqbal, current Chairman of Gul Ahmed Energy Limited.

Two killed, four injured in accident at Karachi’s Karsaz Road pic.twitter.com/BJ2DNPK55k

— Sumit (@SumitHansd)
 
 
 
 
 
 
 
 
 
 
 
 
 
 
 

A post shared by @aroob_jattoii

 

click me!