ರಷ್ಯಾ ಸೈನಿಕಗೆ ಉಕ್ರೇನ್‌ ಕೋರ್ಟ್‌ ಜೀವಾವಧಿ ಶಿಕ್ಷೆ!

By Suvarna NewsFirst Published May 24, 2022, 9:25 AM IST
Highlights

* ಯುದ್ಧ ಆರಂಭದ ನಂತರ ಮೊದಲ ಬಾರಿ ರಷ್ಯಾ ಯೋಧಗೆ ಸಜೆ

* ರಷ್ಯಾ ಸೈನಿಕಗೆ ಉಕ್ರೇನ್‌ ಕೋರ್ಟ್‌ ಜೀವಾವಧಿ ಶಿಕ್ಷೆ

ಕೀವ್‌(ಮೇ.24): ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣ ಆರಂಭ ಆದ ಬಳಿಕ ತಾನು ಸೆರೆ ಹಿಡಿದಿದ್ದ ರಷ್ಯಾ ಯೋಧನಿಗೆ ಉಕ್ರೇನ್‌ ಮೊದಲ ಬಾರಿ ಶಿಕ್ಷೆ ಘೋಷಿಸಿದೆ. ಯುದ್ಧಾಪರಾಧಗಳ ವಿಚಾರಣೆ ನಡೆಸಿರುವ ಉಕ್ರೇನ್‌ ಕೋರ್ಚ್‌, ರಷ್ಯಾ ಸೈನಿಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಯುದ್ಧದ ಆರಂಭದ ದಿನಗಳಲ್ಲಿ ರಷ್ಯಾ ಸೇನೆಯ ಸಾರ್ಜೆಂಟ್‌ ಶಿಶಿಮಾರಿನ್‌ ಎಂಬಾತ ಈಶಾನ್ಯ ಉಕ್ರೇನ್‌ನ ಸುಮಿ ಪ್ರದೇಶದಲ್ಲಿ ನಾಗರಿಕರೊಬ್ಬರ ಹಣೆಗೆ ಗುಂಡಿಟ್ಟು ಹತ್ಯೆ ಮಾಡಿದ್ದ. ರಷ್ಯಾ ಪಡೆಗಳ ಬಗ್ಗೆ ಉಕ್ರೇನ್‌ ಸೇನೆಗೆ ಮಾಹಿತಿ ನೀಡುತ್ತಿರಬಹುದು ಎಂಬ ಕಾರಣಕ್ಕೆ ಫೋನ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಈ ಕೆಲಸ ಮಾಡಿದ್ದಾಗಿ ಆ ಸೈನಿಕ ಕೋರ್ಚ್‌ ಎದುರು ಒಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಶಿಕ್ಷೆ ಘೋಷಿಸಲಾಗಿದೆ.

Latest Videos

ರಷ್ಯಾ ಯುದ್ಧ ಪರಿಣಾಮ ತಡೆಗೆ 13 ದೇಶಗಳ ಮಹತ್ವದ ಒಪ್ಪಂದ, ಅಗತ್ಯ ವಸ್ತು ಪೂರೈಕೆಗೆ ಒಪ್ಪಂದ!

ಉಕ್ರೇನ್‌ ಕೋರ್ಚ್‌ ಈ ನಿರ್ಧಾರ ರಷ್ಯಾ-ಉಕ್ರೇನ್‌ ಬಿಕ್ಕಟ್ಟಿಗೆ ಮತ್ತಷ್ಟುತುಪ್ಪ ಸುರಿವ ಸಾಧ್ಯತೆ ಇದೆ. ತಿಂಗಳಿನಿಂದಲೂ ನಡೆಯುತ್ತಿರುವ ಈ ಯುದ್ಧದಿಂದಾಗಿ ಲಕ್ಷಾಂತರ ಉಕ್ರೇನಿಗರು ನಲುಗಿದ್ದಾರೆ.

ಉಕ್ರೇನ್‌ಗೆ 3 ಲಕ್ಷ ಕೋಟಿ ರು. ಹೆಚ್ಚುವರಿ ನೆರವು: ಬೈಡೆನ್‌ ಘೋಷಣೆ

ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣ ನಾಲ್ಕನೇ ತಿಂಗಳನ್ನು ತಲುಪಿರುವ ಹಿನ್ನೆಲೆಯಲ್ಲಿ ಉಕ್ರೇನ್‌ ಹೆಚ್ಚುವರಿಯಾಗಿ 3 ಲಕ್ಷ ಕೋಟಿ ರು. ನೆರವು ನೀಡುವ ಕಾನೂನಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸಹಿ ಹಾಕಿದ್ದಾರೆ.

ಈ ಹೊಸ ಶಾಸನದಂತೆ 1.5 ಲಕ್ಷ ಕೋಟಿ ರು. ಮಿಲಿಟರಿ ಸಹಾಯ, 60 ಸಾವಿರ ಕೋಟಿ ರು. ಆರ್ಥಿಕ ಸಹಾಯ, 37.5 ಕೋಟಿ ರು. ಆಹಾರ ಸೌಲಭ್ಯ ಮತ್ತು 7500 ಕೋಟಿ ರು. ನಿರಾಶ್ರಿತರ ಸಹಾಯಕ್ಕಾಗಿ ನೀಡಲಾಗುತ್ತದೆ. ಮುಂದಿನ ಸೆಪ್ಟೆಂಬರ್‌ವರೆಗೆ ಉಕ್ರೇನ್‌ ಸಹಾಯ ಒದಗಿಸಲು ಈ ಶಾಸನ ರೂಪಿಸಲಾಗಿದೆ. ಇದಕ್ಕೂ ಮೊದಲು ಅಮೆರಿಕ 1 ಲಕ್ಷ ರು. ನೆರವನ್ನು ಒದಗಿಸಿತ್ತು.

ಮೂರನೇ ಮಹಾಯುದ್ಧದ ಭೀತಿ ನಡುವೆಯೂ ಉಕ್ರೇನಿಯನ್ನರ ಈ ಖುಷಿಗೇನು ಕಾರಣ?

ಅತ್ಯಾಚಾರ ನಿಲ್ಲಿಸಿ: ಕಾನ್ಸ್‌ನಲ್ಲಿ ರಷ್ಯಾ ವಿರುದ್ಧ ಬೆತ್ತಲಾಗಿ ಮಹಿಳೆ ಆಕ್ರೋಶ

ಕಾನ್ಸ್‌ ಚಲನಚಿತ್ರೋತ್ಸವದಲ್ಲಿ ಮಹಿಳೆಯೊಬ್ಬಳು ಬೆತ್ತಲೆ ದೇಹದ ಮೇಲೆ ಉಕ್ರೇನಿನ ಧ್ವಜವನ್ನು ಬಿಡಿಸಿ ‘ನಮ್ಮ ಮೇಲೆ ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ’ ಎಂಬ ಬರಹವನ್ನು ಪ್ರದರ್ಶಿಸಿದ ಘಟನೆ ಶುಕ್ರವಾರ ವರದಿಯಾಗಿದೆ.

ಮಹಿಳೆಯು ಕೆಂಪು ರಕ್ತದ ಕಲೆಯುಳ್ಳ ಒಳ ಉಡುಪುಗಳನ್ನು ಧರಿಸಿದ್ದು, ಉಕ್ರೇನಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರದ ವಿರುದ್ಧ ಘೋಷಣೆ ಕೂಗಿ ಕ್ಯಾಮೆರಾ ಮುಂದೆ ಪೋಸು ಕೊಟ್ಟಿದ್ದಾಳೆ. ನಂತರ ಕಾರ್ಯಕ್ರಮದ ಭದ್ರತಾ ಸಿಬ್ಬಂದಿ ಮಹಿಳೆಯನ್ನು ಅಲ್ಲಿಂದ ಸ್ಥಳಾಂತರಗೊಳಿಸಿದ್ದಾರೆ.

ಈ ಮೊದಲು ಉಕ್ರೇನಿನ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ರಷ್ಯಾದ ಯೋಧರು ಉಕ್ರೇನಿನ ಮಹಿಳೆಯರು ಹಾಗೂ ಪುಟ್ಟಬಾಲಕಿಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಎಂದು ಹೇಳಿದ್ದರು. ಅವರು ಕಾನ್ಸ್‌ನ ಉದ್ಘಾಟನಾ ಸಮಾರಂಭದಲ್ಲಿಯೂ ಉಕ್ರೇನಿಗಾಗಿ ಸಹಾಯ ಯಾಚಿಸಿ ವಿಡಿಯೋ ಬಿಡುಗಡೆ ಮಾಡಿದ್ದರು.

ಈ ಬಾರಿ ಚಲನ ಚಿತ್ರೋತ್ಸವದಲ್ಲಿ ಯುದ್ಧ ಸಂಬಂಧೀ ಚಿತ್ರಗಳನ್ನು ವಿಶೇಷವಾಗಿ ಪ್ರದರ್ಶಿಸಲಾಗುತ್ತಿದ್ದು, ಉಕ್ರೇನಿನ ‘ಮರಿಯುಪೊಲಿಸ್‌2’ ಹಾಗೂ ‘ನ್ಯಾಚುರಲ್‌ ಹಿಸ್ಟರಿ ಆಫ್‌ ಡಿಸ್ಟ್ರಕ್ಷನ್‌’ ತೆರೆ ಕಾಣುತ್ತಿವೆ.

click me!