ವಿಶ್ವದ ಅತಿದೊಡ್ಡ ಮ್ಯೂಸಿಯಂ ಸದಸ್ಯೆಯಾಗಿ ನೀತಾ ಆಯ್ಕೆ!

By Web DeskFirst Published Nov 14, 2019, 1:15 PM IST
Highlights

 ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಮತ್ತು ಅದನ್ನು ಕಾಪಾಡುವ ಕೆಲಸದಲ್ಲಿ ಮಾಡಿದ ಅತ್ಯಮೂಲ್ಯ ಸಾಧನೆ| ವಿಶ್ವದ ಅತಿದೊಡ್ಡ ಮ್ಯೂಸಿಯಂಗೆ ನೀತಾ ಅಂಬಾನಿ ಆಯ್ಕೆ| 
 

ನ್ಯೂಯಾರ್ಕ್[ಅ.14]: ರಿಲಯನ್ಸ್‌ ಫೌಂಡೇಶನ್‌ನ ಮುಖ್ಯಸ್ಥೆ, ಸಾಮಾಜಿಕ ಕಾರ್ಯಕರ್ತೆ ಹಾಗೂ ಏಷ್ಯಾದ ಅತಿ ದೊಡ್ಡ ಶ್ರೀಮಂತ ವ್ಯಕ್ತಿಯ ಪತ್ನಿ ನೀತಾ ಅಂಬಾನಿ ಅವರು ವಿಶ್ವದ ಪ್ರತಿಷ್ಠಿತ ಕಲಾ ಸಂಸ್ಥೆಗಳಲ್ಲಿ ಒಂದಾದ ಅಮೆರಿಕದ ಮೆಟ್ರೋಪಾಲಿಟನ್‌ ಕಲಾ ಸಂಗ್ರಹಾಲಯದ ನಿರ್ದೇಶಕ ಮಂಡಳಿಗೆ ಆಯ್ಕೆ ಮಾಡಲಾಗಿದೆ.

ಅಂಬಾನಿ ಕಾರ್ ಡ್ರೈವರ್ ಸಂಬಳ ಎಷ್ಟು ಕೇಳಿದ್ರೆ ಹೌಹಾರ್ತೀರಿ!

ಕ್ರೀಡೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಮುಕೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ, ರಿಲಯನ್ಸ್‌ ಫೌಂಡೇಶನ್‌ನ ಮುಖ್ಯಸ್ಥೆ ಭಾರತೀಯ ಕಲೆ ಹಾಗೂ ಸಂಸ್ಕೃತಿಯನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುತ್ತಿದ್ದಾರೆ. ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಮತ್ತು ಅದನ್ನು ಕಾಪಾಡುವ ಕೆಲಸದಲ್ಲಿ ಮಾಡಿದ ಅತ್ಯಮೂಲ್ಯ ಸಾಧನೆಯನ್ನು ಪರಿಗಣಿಸಿ ನೀತಾ ಅವರಿಗೆ ಈ ಮನ್ನಣೆ ನೀಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ನೀತಾ ಅಂಬಾನಿಗೆ ಮಕ್ಕಳೇ ಆಗಲ್ಲ ಎಂದಿದ್ದರಂತೆ ಡಾಕ್ಟರ್!

ನ್ಯೂಯಾರ್ಕ್ನಲ್ಲಿರುವ ಮೆಟ್ರೋಪಾಲಿಟನ್‌ ಮ್ಯೂಸಿಯಂ ಆಫ್‌ ಆರ್ಟ್‌, ವಿಶ್ವದ ಅತಿದೊಡ್ಡ ಮತ್ತು ಅತಿ ಹೆಚ್ಚು ಜನ ಭೇಟಿ ನೀಡುವ ಮ್ಯೂಸಿಯಂ ಎಂಬ ಹಿರಿಮೆಯನ್ನು ಹೊಂದಿದೆ.

 

ನೀತಾ ಅಂಬಾನಿ ಅವರು 2016 ರಿಂದ ದಿ ಮೆಟ್ ಅನ್ನು ಬೆಂಬಲಿಸಿದ ಭಾರತೀಯ ಲೋಕೋಪಕಾರಿ ಸಂಸ್ಥೆಯಾದ ರಿಲಯನ್ಸ್ ಫೌಂಡೇಶನ್‌ನ ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. ಶ್ರೀಮತಿ ಅಂಬಾನಿ ವಿಶೇಷವಾಗಿ ಭಾರತದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಬದ್ಧರಾಗಿದ್ದಾರೆ. ಭಾರತದ ಸಾಂಸ್ಕೃತಿಕ ದಂತಕಥೆಗಳನ್ನು ಗುರುತಿಸಲು ಮತ್ತು ಯುವ ಪೀಳಿಗೆಗೆ ಅವುಗಳ ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಅನೇಕ ಪ್ರಯತ್ನಗಳಲ್ಲಿ ರಿಲಯನ್ಸ್ ಫೌಂಡೇಶನ್ ಮೂಲಕ ಮಾಡುತ್ತಿದ್ದಾರೆ.

click me!