
ವೆಲ್ಲಿಂಗ್ಟನ್(ಆ.10): ಭಾರತವೂ ಸೇರಿದಂತೆ ಇತರ ದೇಶಗಳು ಕೊರೋನಾ ವೈರಸ್ ಅನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದರೆ, ಇತ್ತ ನ್ಯೂಜಿಲೆಂಡ್‌ನಲ್ಲಿ ವೈರಸ್‌ನಿಂದ ಮುಕ್ತವಾಗಿ 100 ದಿನಗಳನ್ನು ಪೂರ್ಣಗೊಳಿಸಿದೆ. ಮೇ 1ರ ಬಳಿಕ ಕೊರೋನಾ ವೈರಸ್‌ನ ಹೊಸ ಪ್ರಕರಣಗಳು ಪತ್ತೆ ಆಗಿಲ್ಲ. ಹೀಗಾಗಿ ನ್ಯೂಜಿಲೆಂಡ್‌ನ ಸಹಜ ಸ್ಥಿತಿಯತ್ತ ಮರಳಿದ್ದು, ರಗ್ಬಿ ಕ್ರೀಡಾಂಗಣಗಳು ಪ್ರೇಕ್ಷಕರಿಂದ ತುಂಬಿ ತುಳುಕುತ್ತಿವೆ. ಕೊರೋನಾ ಭಯ ಇಲ್ಲದೇ ಜನರು ಬಾರ್‌ಗಳಲ್ಲಿ ಸೇರುತ್ತಿದ್ದಾರೆ. ಆದರೆ, ಭವಿಷ್ಯದಲ್ಲಿ ನ್ಯೂಜಿಲೆಂಡ್ ಮತ್ತೊಮ್ಮೆ ಕೊರೋನಾ ವೈರಸ್‌ಗೆ ತುತ್ತಾಗಬಹುದು ಎಂಬ ಭಯ ಇನ್ನೂ ನಿವಾರಣೆ ಆಗಿಲ್ಲ.
ಹಿಂದೂ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನ್ಯೂಜಿಲೆಂಡ್ ಪ್ರಧಾನಿ!
ಇದೇ ವೇಳೆ ಕೊರೋನಾ ವೈರಸ್‌ಅನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕೆ ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಅಡ್ರೇನ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನ್ಯೂಜಿಲೆಂಡ್ ಒಟ್ಟು ಸೋಂಕಿತರ ಸಂಖ್ಯೆಯನ್ನು 1500ಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಕೇವಲ 22 ಮಂದಿ ಸಾವಿಗೀಡಾಗಿದ್ದಾರೆ.
ನೇಪಾಳದಲ್ಲೂ ರಾಮಮಂದಿರ, ಶೀಘ್ರ ಭೂಮಿಪೂಜೆ!
ನ್ಯೂಜಿಲೆಂಡ್ ಕೊರೋನಾ ಗೆದ್ದಿದ್ದು ಹೇಗೆ?
ವ್ಯಾಪಕ ಕೊರೋನಾ ಪರೀಕ್ಷೆ, ಕಟ್ಟುನಿಟ್ಟಿನ ಲಾಕ್‌ಡೌನ್ ಹಾಗೂ ಹೊರ ದೇಶದಿಂದ ಸೋಂಕು ಬರದಂತೆ ತಡೆದಿದ್ದರಿಂದ ನ್ಯೂಜಿಲೆಂಡ್ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಜಯಗಳಿಸಲು ಸಾಧ್ಯವಾಗಿದೆ. ನ್ಯೂಜಿಲೆಂಡ್‌ನಲ್ಲಿ ಸುಮಾರು 50 ಲಕ್ಷದಷ್ಟುಜನಸಂಖ್ಯೆ ಇದ್ದು, ಪ್ರತಿ 1 ಕೋವಿಡ್ ಪ್ರಕರಣಕ್ಕೆ 7000ಕ್ಕೂ ಹೆಚ್ಚು ಪರೀಕ್ಷೆಯನ್ನು ನಡೆಸಲಾಗಿದೆ. ಮಾಚ್‌ರ್‍ನಲ್ಲಿ ಕೊರೋನಾ ಕೇಸ್‌ಗಳು 100 ಗಡಿ ದಾಟುತ್ತಿದ್ದಂತೆ ಕಟ್ಟುನಿಟ್ಟಿನ ಲಾಕ್‌ಡೌನ್ ವಿಧಿಸಲಾಗಿತ್ತು. ಇದೀಗ ವಿದೇಶದಿಂದ ಸೋಂಕು ಬರದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ