ನೇಪಾಳದಲ್ಲಿ ಮತ್ತೊಂದು ಹೆಲಿಕಾಪ್ಟರ್ ದುರಂತ, 5 ಮಂದಿ ಸಜೀವ ದಹನ!

By Gowthami K  |  First Published Aug 7, 2024, 6:43 PM IST

ನೇಪಾಳದ ನುವಾಕೋಟ್ ಜಿಲ್ಲೆಯ ಶಿವಪುರಿ ಪ್ರದೇಶದಲ್ಲಿ ವಾಯುಸೇನಾ ಹೆಲಿಕಾಪ್ಟರ್ ಪತನಗೊಂಡು ಐವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.


ನೇಪಾಳ (ಆ.7): ಕಳೆದ ತಿಂಗಳು ನಡೆದ ವಿಮಾನ ದುರ್ಘಟನೆ ಬೆನ್ನಲ್ಲೇ ಬುಧವಾರ ಮಧ್ಯಾಹ್ನ ನೇಪಾಳದ ನುವಾಕೋಟ್ ಜಿಲ್ಲೆಯ ಶಿವಪುರಿ ಪ್ರದೇಶದಲ್ಲಿ ವಾಯುಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಹೆಲಿಕಾಪ್ಟರ್ ಕಠ್ಮಂಡುವಿನಿಂದ ಹೊರಟು ಸೈಫ್ರುಬೆನ್ಸಿಗೆ ಹೊರಟಿತ್ತು.  ಹೆಲಿಕಾಪ್ಟರ್ ಟೇಕ್ ಆಫ್ ಆಗುವಾಗ ಅದರಲ್ಲಿ ಪೈಲಟ್ ಮತ್ತು ನಾಲ್ವರು ಚೀನಾದ ಪ್ರಜೆಗಳು ಸೇರಿದಂತೆ ಐವರು ಇದ್ದರು ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ನಾಲ್ಕು ಪುರುಷರು ಮತ್ತು ಮಹಿಳೆಯ ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ ಎಂದು ಸ್ಥಳೀಯ ಆಡಳಿತಾಧಿಕಾರಿ ಕೃಷ್ಣ ಪ್ರಸಾದ್ ಎಂಬವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

Tap to resize

Latest Videos

undefined

ನೇಪಾಳದ ವಿಮಾನ ಪತನಕ್ಕೆ ಕಾರಣವಾಯ್ತಾ ಟೇಬಲ್‌ಟಾಪ್ ರನ್‌ವೇ; ಭಾರತದಲ್ಲಿಯೂ ಇವೆ ಇಂತಹ ಏರ್‌ಪೋರ್ಟ್‌ಗಳು!

ಹೆಲಿಕಾಪ್ಟರ್‌ನ ಪೈಲಟ್ ಆಗಿ ಹಿರಿಯ ಕ್ಯಾಪ್ಟನ್ ಅರುಣ್ ಮಲ್ಲಾ ಅವರು ಇದ್ದರು. ಹೆಲಿಕಾಪ್ಟರ್ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ  ಸಂಪರ್ಕ  ಕಳೆದುಕೊಂಡು ದುರಂತ ಸಂಭವಿಸಿದೆ. ಅಪಘಾತದ ಸ್ಥಳವು ಕಠ್ಮಂಡುವಿನ ವಾಯುವ್ಯದಲ್ಲಿರುವ ಸೂರ್ಯಚೌರ್ ಪ್ರದೇಶದ ಪರ್ವತ ಅರಣ್ಯದಲ್ಲಿದೆ. 

ಹೆಲಿಕಾಪ್ಟರ್ ಬುಧವಾರ ಮಧ್ಯಾಹ್ನ 1:54 ಕ್ಕೆ ಕಠ್ಮಂಡುವಿನ  ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಟಿಐಎ)  ಹೊರಟು ಸುಮಾರು 1:57 ಕ್ಕೆ ಸೂರ್ಯ ಚೌರ್‌ಗೆ  ತಲುಪಿದ ನಂತರ   ಸಂಪರ್ಕವನ್ನು ಕಳೆದುಕೊಂಡಿತು. ನೇಪಾಳದ ವಾಯು ಸೇನೆಗೆ ಸೇರಿದ ಯೂರೋಕಾಪ್ಟರ್ ಎಎಸ್ 350 ಹೆಲಿಕಾಪ್ಟರ್ ಟೇಕ್ ಆಫ್ ಆದ ಮೂರು ನಿಮಿಷಗಳ ನಂತರ  ಸಂಪರ್ಕ ಕಳೆದುಕೊಂಡಿತು ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರದ ಹೇಳಿಕೆ ತಿಳಿಸಿದೆ.

ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ, ಹತ್ಯೆಗೆ ಸಿಕ್ತು ಬಿಗ್ ಟ್ವಿಸ್ಟ್!

ಪೈಲಟ್ ಅರುಣ್ ಮಲ್ಲಾ ಮತ್ತು ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆಯ ಮೃತದೇಹಗಳನ್ನು ಅಪಘಾತದ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ಪ್ರಕಾರ  ಒಂದು ದೇಹವು ಗುರುತಿಸಲಾಗದಷ್ಟು ಸುಟ್ಟುಹೋಗಿದೆ.

ನಾಲ್ವರು ಪ್ರಯಾಣಿಕರು ಚೀನಾದ ಪ್ರಜೆಗಳಾಗಿದ್ದು, ಪೈಲಟ್ ನೇಪಾಳಿ ವ್ಯಕ್ತಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ವಾರಗಳ ಹಿಂದೆ ಕಠ್ಮಂಡು ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ  ಕ್ಷಣಗಳಲ್ಲಿ ಅಪಘಾತವಾಗಿ 18 ಜನ ದುರಂತ ಸಾವು ಕಂಡ ಕೆಲವೇ ದಿನಗಳಲ್ಲಿ ನಡೆದಿದೆ.

ಕಳೆದೊಂದು ದಶಕದಲ್ಲಿ ನೇಪಾಳ 12 ವಿಮಾನ ದುರಂತಗಳಿಗೆ ಸಾಕ್ಷಿಯಾಗಿದೆ. ಇದಕ್ಕೆ ಮುಖ್ಯ ಕಾರಣ ವಿಮಾನ ನಿರ್ವಹಣೆ, ಸಿಬ್ಬಂದಿ ತರಬೇತಿಯ ಕೊರತೆ. ನೇಪಾಳ ಆರ್ಥಿಕವಾಗಿ ಹಿಂದುಳಿದ ದೇಶವಾಗಿದ್ದು, ವಿಮಾನಯಾನ ಸಂಸ್ಥೆಗಳು ನುರಿತ ಸಿಬ್ಬಂದಿಗಳು, ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿವೆ. ನೇಪಾಳ ಕ್ಲಿಷ್ಟ ಹವಾಮಾನ ವ್ಯವಸ್ಥೆ ಹೊಂದಿದ್ದು, ಹವಾಮಾನ ಮುಂಚೆಯೇ ಊಹಿಸುವುದು ಸವಾಲು. ಜೊತೆಗೆ ನೇಪಾಳದ ಗ್ರಾಮೀಣ ಭಾಗ, ಪರ್ವತಾ ಪ್ರದೇಶಗಳಗಳಲ್ಲಿ ಹವಾಮಾನ ಮುನ್ಸೂಚನೆ ನೀಡಲು ಸರಿಯಾದ ವ್ಯವಸ್ಥೆಗಳಿಲ್ಲ. ಪ್ರಮುಖ ವಿಮಾನ ನಿಲ್ದಾಣಗಳು ಪರ್ವತಗಳಿಂದ ಸುತ್ತುವರೆದಿದ್ದು, ದೊಡ್ಡ ದೊಡ್ಡ ವಿಮಾನಗಳ ಲ್ಯಾಂಡಿಂಗ್ ಕೂಡ ಸವಾಲು. ಈ ಕಾರಣಗಳು ಸರಣಿ ದುರಂತಕ್ಕೆ ಹಾದಿ ಮಾಡಿ ಕೊಡುತ್ತಿವೆ. 

click me!