ಬಾಂಗ್ಲಾದೇಶ ಮಧ್ಯಂತರ ಸರ್ಕಾರಕ್ಕೆ ಗ್ರಾಮೀಣ ಬ್ಯಾಂಕ್‌ ಹರಿಕಾರ ಯೂನುಸ್‌ ನೇತೃತ್ವ?

By Kannadaprabha News  |  First Published Aug 7, 2024, 12:22 PM IST

ಆಂತರಿಕ ಸಂಘರ್ಷ ಪೀಡಿತ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನುಸ್ ಅವರನ್ನು ನೇಮಿಸಲಾಗಿದೆ. ಈ ಕುರಿತು ಬಾಂಗ್ಲಾ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಮಂಗಳವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.


ಢಾಕಾ: ಆಂತರಿಕ ಸಂಘರ್ಷ ಪೀಡಿತ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನುಸ್ ಅವರನ್ನು ನೇಮಿಸಲಾಗಿದೆ. ಈ ಕುರಿತು ಬಾಂಗ್ಲಾ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಮಂಗಳವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.ಇದರೊಂದಿಗೆ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಯೂನಸ್ ಅವರನ್ನು ಮಾಡಬೇಕು ಎಂಬ ಬಾಂಗ್ಲಾದೇಶ ವಿದ್ಯಾರ್ಥಿ ಹೋರಾಟಗಾರರ ಬೇಡಿಕೆಗೆ ಸೇನೆ ಮಣಿದಂತಾಗಿದೆ.

ಸಂಸತ್ ವಿಸರ್ಜನೆ: 
ಇದಕ್ಕೂ ಮುನ್ನ ಮಂಗಳವಾರ ಬೆಳಗ್ಗೆ ಮಧ್ಯಂತರ ಆಡಳಿತ ರಚನೆಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಬಾಂಗ್ಲಾದೇಶ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಸಂಸತ್ತನ್ನು ವಿಸರ್ಜಿಸಿದ್ದರು. ಈ ಮೂಲಕ ಮಧ್ಯಂತರ ಸರ್ಕಾರ ರಚನೆಗೆ ಹಾದಿ ಸುಗಮ ಮಾಡಿ ಕೊಟ್ಟಿದ್ದರು. ಜೊತೆಗೆ 3 ಸಶಸ್ತ್ರ ಪಡೆಗಳ ಮುಖ್ಯಸ್ಥರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿ ಮುಖಂಡರು ಮಧ್ಯಂತರ ಸರ್ಕಾರ ರಚನೆಗೆ ಚರ್ಚೆಗಳನ್ನು ಆರಂಭಿಸಿದ್ದರು.

Tap to resize

Latest Videos

undefined

ವಿದ್ಯಾರ್ಥಿಗಳ ಬೇಡಿಕೆ:
ಈ ಮಾತುಕತೆಗಳ ನಡುವೆಯೇ 'ಮಧ್ಯಂತರ ಸರ್ಕಾರಕ್ಕೆ ಮಿಲಿಟರಿ ನೇತೃತ್ವ ಇರಬಾರದು. ನೊಬೆಲ್ ವಿಜೇತ ಮೊಹಮ್ಮದ್ ಯೂ ನುಸ್ ಅವರ ನೇತೃತ್ವ ಇರಬೇಕು' ಎಂದು ವಿದ್ಯಾರ್ಥಿ ಮುಖಂಡರು ಆಗ್ರಹಿಸಿದ್ದರು. ಜೊತೆಗೆ 'ಈಗಾಗಲೇ 84 ವರ್ಷದ ಯೂನುಸ್ ಅವರೊಂದಿಗೆ ಮಾತನಾಡಿದ್ದೇವೆ, ಬಾಂಗ್ಲಾದೇಶವನ್ನು ಉಳಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವರು ಒಪ್ಪಿಕೊಂಡಿದ್ದಾರೆ' ಎಂದು ವಿದ್ಯಾರ್ಥಿ ಚಳವಳಿ ನೇತಾರ ನಹೀದ್ ಇಸ್ಲಾಂ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.

ಹಸೀನಾರ ತಕ್ಷಣದ ರಾಜಾಶ್ರಯ ಬೇಡಿಕೆಗೆ ಬ್ರಿಟನ್‌ ತಿರಸ್ಕಾರ? ಅಮೆರಿಕಾದಿಂದಲೂ ವೀಸಾ ನಿರಾಕರಣೆ

ಯೂನುಸ್ ಹರ್ಷ:
ಈ ನಡುವೆ ಬಾಂಗ್ಲಾ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ್ದ ಯೂನುಸ್ 'ಹಸೀನಾ ನಿರ್ಗ ಮನ ವಿದ್ಯಮಾನ ಬಾಂಗ್ಲಾಗೆ ಸಿಕ್ಕ ಎರಡನೇ ವಿಮೋಚನೆ ವಿದ್ಯಾರ್ಥಿಗಳು ಅಷ್ಟು ತ್ಯಾಗ ಮಾಡಬಹುದಾದರೆ, ದೇಶದ ಜನರು ಇಷ್ಟು ತ್ಯಾಗ ಮಾಡಬಹುದಾದರೆ, ನನಗೂ ಕೆಲವು ಜವಾಬ್ದಾರಿ ಇದೆ. ನಾನೂ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದೇನೆ' ಎಂದು ಯೂನಸ್ ಹೇಳಿದ್ದರು.

ಮೃತರ ಸಂಖ್ಯೆ 440ಕ್ಕೆ ಏರಿಕೆ ಸ್ಥಿತಿ ಶಾಂತ:

ಏತನ್ಮಧ್ಯೆ, ಮಂಗಳವಾರ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಮತ್ತೆ ಸುಮಾರು 100 ಜನ ಸಾವನ್ನಪ್ಪಿದ್ದು, ಈ ಗಲಭೆಯಲ್ಲಿ ಈವರೆಗೆ ಸತ್ತವರ ಸಂಖ್ಯೆ 440ಕ್ಕೆ ಏರಿದೆ. ಆಡಳಿತಾರೂಢ ಹಸೀನಾ ಪಕ್ಷದ ನಾಯಕರ ಮನೆ ಮೇಲೆ ದಂಗೆಕೋರರು ದಾಳಿ ಮಾಡಿದ್ದಾರೆ. ಆದರೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸೇನೆಯು ಪ್ರಯತ್ನಗಳನ್ನು ನಡೆಸುತ್ತಿದೆ. ಮಂಗಳ ವಾರ ಢಾಕಾದಲ್ಲಿ ಪರಿಸ್ಥಿತಿ  ಶಾಂತವಾಗಿತ್ತು.

ಬಾಂಗ್ಲಾದೇಶದಲ್ಲಿ ಮತೀಯವಾದಿಗಳ ಅಟ್ಟಹಾಸ: ಹಿಂದೂಗಳ ದೇಗುಲ ಮನೆ ಉದ್ದಿಮೆ ಧ್ವಂಸ

ಯಾರು ಯೂನುಸ್?:

ಬಾಂಗ್ಲಾದೇಶದಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಪರಿಕಲ್ಪನೆಯನ್ನು ತಂದು ಜನರ ಆರ್ಥಿಕ ಸದೃಢತೆಗೆ ನೆರವಾದವರು ಆರ್ಥಿಕ ತಜ್ಞ ಯೂನುಸ್‌. ಜನರ ಬಡತನ ವಿರೋಧಿ ಅಭಿಯಾನಕ್ಕಾಗಿ ಟೊಂಕ ಕಟ್ಟಿ ನಿಂತವರು ಇವರು. ಆದರೆ ಶೇಖ್ ಹಸೀನಾ ಜತೆ ಇವರು ಎಣ್ಣೆ-ಸೀಗೆಕಾಯಿ ಸ್ನೇಹ ಹೊಂದಿದ್ದರು. ಹಸೀನಾ ಸರ್ಕಾರ ಇವರ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿತ್ತು.

ಖಲೀದಾ ಬಂಧಮುಕ್ತಿ
ಈ ನಡುವೆ ರಾಷ್ಟ್ರಾಧ್ಯಕ್ಷರ ಆದೇಶದಂತೆ ಬಂಧಿತ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ಪ್ರಧಾನಿ ಖಲೀದಾ ಜಿಯಾ ಅವರನ್ನು ಮಂಗಳವಾರ ಗೃಹ ಬಂಧನದಿಂದ ಮುಕ್ತಗೊಳಿಸಲಾಗಿದೆ. ಇದರ ಬೆನ್ನಲ್ಲೇ ಹಿಂಸಾಚಾರ ಆರೋಪಿಗಳನ್ನೂ ಬಿಡುಗಡೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ.

ರಫೇಲ್‌ ರಕ್ಷಣೆಯಲ್ಲಿ ಭಾರತಕ್ಕೆ ಬಂದಿದ್ದ ಶೇಕ್ ಹಸೀನಾ: ರಾಜೀನಾಮೆ ಬಳಿಕ ಬಾಂಗ್ಲಾದಲ್ಲಿ ಹಿಂಸೆಗೆ 110 ಬಲಿ

ಬಾಂಗ್ಲಾದಲ್ಲಿ ಮುಂದೇನು?
ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಲಿದೆ
ಮಧ್ಯಂತರ ಸರ್ಕಾರ ರಚನೆಯಾಗಿ ತಕ್ಷಣಕ್ಕೆ ಶಾಂತಿ ಸ್ಥಾವನೆಗೆ ಪ್ರಯತ್ನಿಸಲಿದೆ
ಮುಂದಿನ ಹಂತದಲ್ಲಿ ಚುನಾವಣಾ ಆಯೋಗ ಸಂಸತ್ ಚುನಾವಣೆ ಘೋಷಿಸಲಿದೆ
ಹಸೀನಾ ರಾಜಕೀಯಕ್ಕೆ ಮರಳದಿರುವ ಹಿನ್ನೆಲೆ ವಕ್ಷದ ನಿಲುವಿನ ಬಗ್ಗೆ ಕುತೂಹಲ
ಅವಾಮಿ ಲೀಗ್ ಬಗ್ಗೆ ಜನಾಕ್ರೋಶದ ಕಾರಣ ಆದು ಕಣಕ್ಕೆ ಇಳಿವ ಬಗ್ಗೆ ಅನುಮಾನ.
ಚುನಾವಣೆ ನಡೆದು ಫಲಿತಾಂಶ ಪ್ರಕಟ ಆಗುವವರೆಗೆ ಹಂಗಾಮಿ ಸರ್ಕಾರ ಅಧಿಕಾರ
ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯೂಸನ್ ಸರ್ಕಾರದ ಅವಧಿ ಸಮಾಪ್ತಿ

click me!