
ಕಾಠ್ಮಂಡು (ಸೆ.09) ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ನಿರ್ಧಾರದಿಂದ ಶುರುವಾದ ಪ್ರತಿಭಟನೆ ದೇಶವ್ಯಾಪಿ ಹರಡಿದೆ. ಸರ್ಕಾರ ಸೋಶಿಯಲ್ ಮೀಡಿಯಾ ಬ್ಯಾನ್ ತೆರುವುಗೊಳಿಸಿದರೂ ಪ್ರತಿಬಟನೆ ನಿಂತಿಲ್ಲ. ಪ್ರತಿಭಟನಕಾರರು ಪ್ರಧಾನಿ ಕೆಪಿ ಒಲಿ ಶರ್ಮಾ ಮನೆಗೆ ನುಗ್ಗಿದ್ದಾನೆ. ಪ್ರಧಾನಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಈಗಾಗಲೇ ರಾಜೀನಾಮೆ ನೀಡಿರುವ ಕೆಪಿ ಒಲಿ ಶರ್ಮಾ ಪಲಾಯನ ಮಾಡುವ ಸಾಧ್ಯತೆ ಇದೆ. ಇತ್ತ ಗೃಹ ಸಚಿವರು ರಾಜೀನಾಮೆ ನೀಡಿದ್ದಾರೆ. ಇತ್ತ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ನೇಪಾಲದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲಿ ನಡೆದ ರೀತಿಯಲ್ಲೇ ಇದೀಗ ನೇಪಾಳದಲ್ಲೂ ನಡೆಯುತ್ತಿದೆ. ನೇಪಾಳದಲ್ಲೂ ಸರ್ಕಾರ ಪತನದ ಅಂಚಿನಲ್ಲಿದೆ. ಭಾರತದ ನೆರೆ ರಾಷ್ಟ್ರಗಳಲ್ಲಿ ಈ ರೀತಿಯ ಪರಿಸ್ಥಿತಿ ನಿರ್ಮಾಣದ ಹಿಂದೆ ಅಮೆರಿಕ ಹಾಗೂ ಜಾರ್ಜ್ ಸೊರೋಸ್ ಕೈವಾಡವಿದೆಯಾ ಅನ್ನೋ ಅನುಮಾನಗಳು ಮೂಡುತ್ತಿದೆ.
ಕೆಪಿ ಒಲಿ ಶರ್ಮಾ ಈಗಾಗಲೇ ಸೋಶಿಯಲ್ ಮೀಡಿಯಾ ಬ್ಯಾನ್ ನಿರ್ಧಾರ ವಾಪಸ್ ಪಡೆದಿದ್ದಾರೆ. ಜೆನ್‌ಜಿ ಪ್ರತಿಭಟನಕಾರರು ಬ್ಯಾನ್ ತೆರುವುಗೊಳಿಸಬೇಕು ಎಂದೇ ಹೋರಾಟ ಆರಂಭಸಿದ್ದರು. ಆರಂಭದಲ್ಲೇ ಕೆಪಿ ಒಲಿ ಶರ್ಮಾ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೀಗಾಗಿ ಪ್ರತಿಭಟನೆ ತೀವ್ರಗೊಂಡಿತ್ತು. ಇದೀಗ ಸೋಶಿಯಲ್ ಮೀಡಿಯಾ ಬ್ಯಾನ್ ತೆರವುಗೊಳಿಸಿದರೂ ಪ್ರತಿಭಟನೆ ನಿಂತಿಲ್ಲ. ಪ್ರಧಾನಿ ಕೆಪಿ ಒಲಿ ಶರ್ಮಾ ಹಾಗೂ ರಾಷ್ಟ್ರಪತಿ ರಾಮಚಂದ್ರ ಪೌದೆಲ್ ಖಾಸಗಿ ನಿವಾಸಗಳಿಗೆ ಪ್ರತಿಭಟನಕಾರರು ಬೆಂಕಿ ಹಚಿದ್ದಾರೆ. ಹಲವು ಮಾಜಿ ಸಚಿವರು, ನಾಯಕರ ಮನೆಯನ್ನು ಪ್ರತಿಭಟನಕಾರರು ಧ್ವಂಸಗೊಳಿಸಿದ್ದಾರೆ.
ನೇಪಾಳ ಸಂಸತ್ತಿಗೂ ಪ್ರತಿಭಟನಕಾರರು ದಾಳಿ ಮಾಡಿದ್ದಾರೆ. ಕಟ್ಟಡದ ಕೆಲ ಭಾಗದಲ್ಲಿ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನೆ ಹೆಚ್ಚಾಗುತ್ತಿದೆ. ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲೂ ಇದೇ ರೀತಿ ಸಂಸತ್ತೂ, ಪ್ರಧಾನಿ ಮನೆ ಮೇಲೆ ದಾಳಿಯಾಗಿತ್ತು. ಈ ದಾಳಿ ಬೆನ್ನಲ್ಲೇ ಬಾಂಗ್ಲಾದೇಶ ಪ್ರಧಾನಿಯಾಗಿದ್ದ ಶೇಕ್ ಹಸೀನಾ ಪಲಾಯನ ಮಾಡಿದ್ದರು. ಇತ್ತ ಶ್ರೀಲಂಕಾದಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ.
ಸೋಶಿಯಲ್ ಮೀಡಿಯಾ ಬ್ಯಾನ್ ಪ್ರತಿಭಟನೆಯಲ್ಲಿ 19 ಸಾವು, ನೇಪಾಳ ಗೃಹ ಸಚಿವರ ತಲೆದಂಡ
ಅಮೆರಿಕ ಸರ್ಕಾರ ಸೇರಿದಂತೆ ಇತರ ದೇಶಗಳ ಮೇಲೆ ಭಾರಿ ಹಿಡಿತ ಸಾಧಿಸಿರುವ ಉದ್ಯಮಿ, ಸರ್ಕಾರದ ಪ್ರಮುಖ ನಿರ್ಧಾರಗಳಲ್ಲಿ ಭಾಗವಾಗಿರುವ ಜಾರ್ಜ್ ಸೊರೋಸ್ ಹಾಗೂ ಅಮೆರಿಕ ನೆರೆ ರಾಷ್ಟ್ರಗಳಲ್ಲಿನ ಅಸ್ಥಿರತೆ ಹಿಂದೆ ಇದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಬಾಂಗ್ಲಾದೇಶವನ್ನ ತನ್ನ ತೆಕ್ಕಗೆ ತೆಗೆದುಕೊಂಡಿರುವ ಅಮೆರಿಕ ಹಾಗೂ ಸೋರೋಸ್ ಪಡೆ ಇದೀಗ ನೇಪಾಳದಲ್ಲೂ ಸಂಪೂರ್ಣ ಹಿಡಿತ ಸಾಧಿಸಿ ಭಾರತಕ್ಕೆ ಪಾಠ ಕಲಿಸುವ ಹುನ್ನಾರ ಅಡಗಿದೆಯಾ ಅನ್ನೋ ಅನುಮಾನಗಳು ಕಾಡತೊಡಗಿದೆ.
ಭಾರತದ ನೆರೆ ರಾಷ್ಟ್ರಗಳಲ್ಲಿ ಉದ್ಭವಿಸಿದ ಪ್ರತಿಭಟನೆ, ಹಿಂಸಾಚಾರದ ಹಿಂದೆ ವಿದ್ಯಾರ್ಥಿ ಹಾಗೂ ಯುವ ಸಮೂಹದ ಪ್ರತಿಭಟನೆ ಎದ್ದು ಕಾಣುತ್ತಿದೆ. ಇದೀಗ ನೇಪಾಳದಲ್ಲಿ ಜೆನ್‌ಜಿ ಸಮೂಹ, ಹೆಚ್ಚಾಗಿ ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾದಲ್ಲಿ ಈಜಾಡುತ್ತಿರುವ ಯುವ ಸಮೂಹವೇ ಈ ಪ್ರತಿಭಟನೆಯಲ್ಲಿದೆ. ಇನ್ನು ಬಾಂಗ್ಲಾದೇಶದಲ್ಲೂ ವಿದ್ಯಾರ್ಥಿಗಳ ಪ್ರತಿಭಟನೆ ದೇಶದ ರಾಜಕೀಯವನ್ನೇ ಅಸ್ಛಿರಗೊಳಿಸಿತ್ತು. ಇನ್ನು ಶ್ರೀಲಂಕಾದಲ್ಲೂ ವಿದ್ಯಾರ್ಥಿಗಳು ಸೇರಿದಂತೆ ಹಲವು ಸಮೂಹಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರ ಉರುಳಿಸಿತ್ತು. ಮೂರು ದೇಶಗಳಲ್ಲೂ ವಿದ್ಯಾರ್ಥಿಗಳನ್ನೇ ದಾಳವಾಗಿಟ್ಟುಕೊಂಡೇ ಪ್ರತಿಭಟನೆ ಪ್ಲಾನ್ ರೂಪಿಸಲಾಗುತ್ತಿದೆ ಅನ್ನೋ ಅನುಮಾನಗಳು ದಟ್ಟವಾಗಿ ಕಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ