ಪತನಗೊಂಡ ವಿಮಾನದ ಬ್ಲ್ಯಾಕ್‌ಬಾಕ್ಸ್‌ ಪತ್ತೆ: ಯೇತಿ ವಿಮಾನ ಬಳಸುತ್ತಿದ್ದ ಕಿಂಗ್‌ಫಿಶರ್

By Kannadaprabha News  |  First Published Jan 17, 2023, 10:21 AM IST

ಐವರು ಭಾರತೀಯರು ಸೇರಿದಂತೆ 72 ಮಂದಿಯ ದುರ್ಮರಣಕ್ಕೆ ಕಾರಣವಾದ ಯೇತಿ ಏರ್‌ಲೈನ್ಸ್‌ನ ವಿಮಾನ ಪತನಗೊಂಡ ಸ್ಥಳದಿಂದ ಬ್ಲ್ಯಾಕ್‌ಬಾಕ್ಸ್‌ ಅನ್ನು ಸೋಮವಾರ ಸ್ವಾಧೀನಪಡಿಸಿಕೊಳ್ಳಲಾಗಿದೆ.


ಕಾಠ್ಮಂಡು: ಐವರು ಭಾರತೀಯರು ಸೇರಿದಂತೆ 72 ಮಂದಿಯ ದುರ್ಮರಣಕ್ಕೆ ಕಾರಣವಾದ ಯೇತಿ ಏರ್‌ಲೈನ್ಸ್‌ನ ವಿಮಾನ ಪತನಗೊಂಡ ಸ್ಥಳದಿಂದ ಬ್ಲ್ಯಾಕ್‌ಬಾಕ್ಸ್‌ ಅನ್ನು ಸೋಮವಾರ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಮೂಲಕ ಘಟನೆಯ ಕಾರಣದ ತನಿಖೆ ಆರಂಭಿಸಲಾಗಿದೆ. ಭಾನುವಾರ ಸಾಯಂಕಾಲ ನಿಲ್ಲಿಸಲಾಗಿದ್ದ ಶೋಧ ಕಾರಾರ‍ಯಚರಣೆಯನ್ನು ಸೋಮವಾರ ಮತ್ತೆ ಆರಂಭಿಸಲಾಗಿದ್ದು, ವಿಮಾನದ ಬ್ಲ್ಯಾಕ್‌ಬಾಕ್ಸ್‌ ಅನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ ಲ್ಯಾಂಡ್‌ ಮಾಡುವುದಕ್ಕಿಂತ ಮೊದಲು ಪೈಲಟ್‌ಗಳ ನಡುವೆ ನಡೆದ ಸಂಭಾಷಣೆ, ಇಂಜಿನ್‌ನ ಕಾರ್ಯ ಮುಂತಾದವುಗಳು ರೆಕಾರ್ಡ್‌ ಆಗಿದ್ದು, ಇದರ ಪರಿಶೀಲನೆಯ ಬಳಿಕ ಅಪಘಾತಕ್ಕೆ ಕಾರಣವೇನು ಎಂಬುದು ತಿಳಿದುಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

35 ಶವಗಳ ಗುರುತು ಪತ್ತೆ:

Tap to resize

Latest Videos

ವಿಮಾನದಲ್ಲಿದ್ದ 72 ಪ್ರಯಾಣಿಕರಲ್ಲಿ 68 ಶವಗಳನ್ನು ಈವರೆಗೆ ಪತ್ತೆ ಹಚ್ಚಲಾಗಿದ್ದು, ಅದರಲ್ಲಿ 35 ಶವಗಳ ಗುರುತನ್ನು ಪತ್ತೆ ಹಚ್ಚಲಾಗಿದೆ. ಉಳಿದ ಶವಗಳಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಆದರೆ ಯಾರೂ ಬದುಕಿರುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಯೇತಿ ವಿಮಾನ ಬಳಸುತ್ತಿದ್ದ ಕಿಂಗ್‌ಫಿಶರ್‌

ನೇಪಾಳದಲ್ಲಿ ದುರಂತಕ್ಕೀಡಾದ ಯೇತಿ ಸಂಸ್ಥೆಯ 9ಎನ್‌-ಎಎನ್‌ಸಿ ವಿಮಾನವನ್ನು ಮದ್ಯದೊರೆ ವಿಜಯ್‌ ಮಲ್ಯ ಒಡೆತನದ ಪ್ರಸ್ತುತ ಅಸ್ತಿತ್ವದಲ್ಲಿಲ್ಲದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಬಳಕೆ ಮಾಡುತ್ತಿತ್ತು ಎಂದು ಬೆಳಕಿಗೆ ಬಂದಿದೆ.  ಕಿಂಗ್‌ಫಿಶರ್‌ 2007ರಲ್ಲಿ ಬಾಗಿಲು ಮುಚ್ಚಿದ 6 ವರ್ಷದ ಬಳಿಕ ಈ ವಿಮಾನವನ್ನು ಥಾಯ್ಲೆಂಡ್‌ನ ನೋಕ್‌ ಏರ್‌ ಕಂಪನಿಯು ಇದರ ಬಳಕೆ ಮಾಡುತ್ತಿತ್ತು. ಬಳಿಕ 2019ರಲ್ಲಿ ಇದನ್ನು ಯೇತಿ ಏರ್‌ಲೈನ್ಸ್‌ ಖರೀಸಿತು. ನೇಪಾಳದಲ್ಲಿ  ಎಟಿಆರ್‌-72 ಮಾದರಿಯ ವಿಮಾನವೊಂದು ದುರಂತಕ್ಕೀಡಾಗಿರುವುದು ಇದೇ ಮೊದಲು. ಇದೊಂದು ಅವಳಿ ಎಂಜಿನ್‌ ಇರುವ ವಿಮಾನವಾಗಿದ್ದು, ಫ್ರಾನ್ಸ್‌ ಹಾಗೂ ಇಟಲಿಯ ಎಟಿಆರ್‌ ವಿಮಾನ ತಯಾರಿಕಾ ಕಂಪನಿಗಳು ಈ ವಿಮಾನವನ್ನು ತಯಾರಿಸಿದ್ದವು.

ನೇಪಾಳ ವಿಮಾನ ಅಪಘಾತದಲ್ಲೇ ಬಲಿಯಾದ ಪೈಲಟ್‌ ದಂಪತಿ..!

16 ವರ್ಷ ಹಿಂದೆ ಪತಿ ಸಾವು, ಈಗ ಪತ್ನಿ

ಭಾನುವಾರ ನಡೆದ ಭೀಕರ ವಿಮಾನ ದುರಂತದಲ್ಲಿ ಮಹಿಳಾ ಸಹ-ಪೈಲಟ್‌ ಅಂಜು ಖತಿವಾಡ (44) ಮೃತಪಟ್ಟಿದ್ದಾರೆ. ವಿಪರ್ಯಾಸ ಎಂದರೆ, ಸ್ವತಃ ಪೈಲಟ್‌ ಆಗಿದ್ದ ಅವರ ಪತಿಯು 16 ವರ್ಷಗಳ ಹಿಂದೆ ವಿಮಾನ ದುರಂತದಲ್ಲಿಯೇ ಮೃತಪಟ್ಟಿದ್ದರು. ಅಂಜು ಪತಿ ದೀಪಕ್‌ ಪೋಖ್ರೆಲ್‌, ಪೈಲಟ್‌ ಅಗಿದ್ದ ಯೇತಿ ಏರ್‌ಲೈನ್ಸ್‌ನ ವಿಮಾನವೊಂದು 2006ರಲ್ಲಿ ನೇಪಾಳದ ಜುಮ್ಲಾದಲ್ಲಿ ದುರಂತಕ್ಕೀಡಾಗಿತ್ತು. ಗಂಡನ ಸಾವಿನ ನಂತರ ದೊರಕಿದ ವಿಮೆಯ ಹಣದಲ್ಲಿ ಅಂಜು ಪೈಲಟ್‌ ತರಬೇತಿಯನ್ನು ಪಡೆದು, 2010ರಲ್ಲಿ ಯೇತಿ ಏರ್‌ಲೈನ್ಸ್‌ಗೆ ಸೇರಿಕೊಂಡಿದ್ದರು. 6,400 ಗಂಟೆಗಳ ಕಾಲ ವಿಮಾನ ಚಲಾಯಿಸಿರುವ ಅಂಜು, ಸಹ ಪೈಲಟ್‌ ಆಗಿದ್ದು, ಇನ್ನೇನು ಪೈಲಟ್‌ ಹುದ್ದೆಗೆ ಬಡ್ತಿ ಪಡೆವವರಿದ್ದರು. ಅಷ್ಟರಲ್ಲೇ ದುರಂತ ಸಂಭವಿಸಿದೆ. ದುರಂತಕ್ಕೊಳಗಾದ ವಿಮಾನ ಚಲಾಯಿಸುತ್ತಿದ್ದ ಅಂಜು ಖತಿವಾಡ ಗುರುತು ಇನ್ನೂ ಪತ್ತೆಯಾಗಿಲ್ಲ. ಆದರೆ ಅವರು ಬದುಕಿರುವ ಸಾಧ್ಯತೆಗಳಿಲ್ಲ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳ ವಿಮಾನ ದುರಂತ: ಫೇಸ್‌ಬುಕ್‌ ಲೈವ್‌ ಮಾಡುವಾಗ ಅಪಘಾತ.!

click me!