El Salvador Bitcoin City: ಎಲ್‌ ಸಾಲ್ವಡೋರ್‌, ಇದು ಜಗತ್ತಿನ ಮೊದಲ ಬಿಟ್‌ ಕಾಯಿನ್‌ ಸಿಟಿ!

Kannadaprabha News   | Asianet News
Published : Nov 26, 2021, 03:38 PM ISTUpdated : Nov 26, 2021, 03:54 PM IST
El Salvador Bitcoin City: ಎಲ್‌ ಸಾಲ್ವಡೋರ್‌, ಇದು ಜಗತ್ತಿನ ಮೊದಲ ಬಿಟ್‌ ಕಾಯಿನ್‌ ಸಿಟಿ!

ಸಾರಾಂಶ

ಡಿಜಿಟಲ್‌ ಕರೆನ್ಸಿಗೆ ಮಾನ್ಯತೆ ನೀಡಿದ ಮೊದಲ ದೇಶವಾದ ಎಲ್‌ ಸಾಲ್ವಡೋರ್‌ ( El Salvador) ಇದೀಗ ಹೊಸ ಸಾಹಸಕ್ಕೆ ಕಾರಣವಾಗಿದೆ. ಸ್ವತಃ ಅಧ್ಯಕ್ಷ ನಯೀಬ್ ಬುಕೆಲಿ ಈ ಘೋಷಣೆ ಮಾಡಿದ್ದಾರೆ. ಹಲವು ಕಾರಣಗಳಿಂದ ಇಡೀ ಜಗತ್ತಿನ ಗಮನ ಸೆಳೆಯುತ್ತಿರುವ ಈ ಹೊಸ ನಗರಿಯ ಕುರಿತು ಒಂದಿಷ್ಟುಮಾಹಿತಿ ಇಲ್ಲಿದೆ.

ಜಗತ್ತಿನ ಅತಿಚರ್ಚಿತ ವಿಷಯದಲ್ಲಿ ಇದೀಗ ಕ್ರಿಪ್ಟೋಕರೆನ್ಸಿ (Cryptocurrency) ಕೂಡಾ ಒಂದು. ಈ ಡಿಜಿಟಲ್‌ ಕರೆನ್ಸಿಯ (Digital Currency) ಕುರಿತು ಇನ್ನೂ ಡಿಜಿಟಲ್‌ ಸಾಕ್ಷ್ಯರತೆ ಇನ್ನೂ ಮೂಡಿಲ್ಲ. ಇಂಥ ಹಂತದಲ್ಲೇ ಎಲ್‌ ಸಾಲ್ವಡೋರ್‌ (El Salvador) ಎಂಬ ದೇಶ ಜಗತ್ತಿನ ಮೊದಲ ಬಿಟ್‌ಕಾಯಿನ್‌ ಸಿಟಿ ನಿರ್ಮಿಸುವ ಘೋಷಣೆ ಮಾಡಿದೆ.

ಡಿಜಿಟಲ್‌ ಕರೆನ್ಸಿಗೆ ಮಾನ್ಯತೆ ನೀಡಿದ ಮೊದಲ ದೇಶವಾದ ಎಲ್‌ ಸಾಲ್ವಡೋರ್‌ ಇದೀಗ ಹೊಸ ಸಾಹಸಕ್ಕೆ ಕಾರಣವಾಗಿದೆ. ಸ್ವತಃ ಅಧ್ಯಕ್ಷ ನಯೀಬ್ ಈ ಘೋಷಣೆ ಮಾಡಿದ್ದಾರೆ. ಹಲವು ಕಾರಣಗಳಿಂದ ಇಡೀ ಜಗತ್ತಿನ ಗಮನ ಸೆಳೆಯುತ್ತಿರುವ ಈ ಹೊಸ ನಗರಿಯ ಕುರಿತು ಒಂದಿಷ್ಟುಮಾಹಿತಿ ಇಲ್ಲಿದೆ.

ಏನಿದು ಬಿಟ್‌ಕಾಯಿನ್‌ ಸಿಟಿ

ಇದು ಕೂಡಾ ಇತರೆ ನಗರಗಳಂತೆ ಒಂದು ನಗರ. ಇಲ್ಲಿ ವಸತಿ, ವಾಣಿಜ್ಯ ಕಟ್ಟಡ, ಏರ್‌ಪೋರ್ಟ್‌, ರೈಲು ಎಲ್ಲವೂ ಇರಲಿದೆ. ಆದರೆ ಇಲ್ಲಿ, ಆಸ್ತಿ, ಆದಾಯ, ವೇತನ ಯಾವುದಕ್ಕೂ ತೆರಿಗೆ ಇರುವುದಿಲ್ಲ. ಬದಲಿಗೆ ಶೇ.10ರಷ್ಟುವ್ಯಾಟ್‌ ಮಾತ್ರ ವಿಧಿಸಲಾಗುವುದು. ಇಡೀ ನಗರಕ್ಕೆ ಅಗತ್ಯವಾದ ಮತ್ತು ಬಿಟ್‌ಕಾಯಿನ್‌ ಮೈನಿಂಗ್‌ಗೆ ಅಗತ್ಯವಾದ ವಿದ್ಯುತ್‌ ಅನ್ನು ಸಮೀಪದಲ್ಲೇ ಇರುವ ಜ್ವಾಲಾಮುಖಿಯಿಂದ ಪೂರೈಸಲಾಗುವುದು. ಇನ್ನು ನಗರದ ಮುಖ್ಯ ಉದ್ದೇಶ ಬಿಟ್‌ಕಾಯಿನ್‌ ಮೈನಿಂಗ್‌ಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸುವುದು. ಮೈನಿಂಗ್‌ ಮಾಡುವುದು. ಕ್ರಿಪ್ಟೋ ಕರೆನ್ಸಿಯಲ್ಲಿ ಹಲವು ಕಂಪನಿಗಳು ಇವೆಯಾದರೂ, ಇಲ್ಲಿ ಬಿಟ್‌ಕಾಯಿನ್‌ ಮಾತ್ರವೇ ಚಲಾವಣೆ ಮಾಡಲಾಗುವುದು.

CryptoCurrency ಯಲ್ಲಿ ಹೂಡಿಕೆ ಮಾಡಿದ್ದಾರಾ ದೈತ್ಯ ಟೆಕ್ ಕಂಪನಿ CEO?

ನಗರ ನಿರ್ಮಾಣ ಎಲ್ಲಿ

ಎಲ್ ಸಾಲ್ವಡೋರ್‌ನ (El Salvador) ಪೂರ್ವ ಭಾಗದಲ್ಲಿರುವ ಗಲ್ಫ್ ಆಫ್‌ ಫೆನ್ಸೆಕಾ ಬಳಿ ಈ ನಗರ ನಿರ್ಮಿಸಲು ಉದ್ದೇಶಿಸಲಾಗಿದೆ. ನಗರ ನಿರ್ಮಾಣಕ್ಕಾಗಿ 2022ರಲ್ಲಿ 100 ಕೋಟಿ ಡಾಲರ್‌ ಮೌಲ್ಯದ ಬಾಂಡ್‌ ಬಿಡುಗಡೆ ಮಾಡಲಾಗುವುದು. ಕನಿಷ್ಟ100 ಡಾಲರ್‌ ಹೂಡಿಕೆ ಮಾಡಿ ಯಾರು ಬೇಕಾದರೂ ಈ ಬಾಂಡ್‌ ಖರೀದಿಸಬಹುದು. ಈ ಹೂಡಿಕೆಗೆ ನಿಗದಿತ ಬಡ್ಡಿಯ ಜೊತೆಗೆ, ಭಾರೀ ಲಾಭದ ಆಮಿಷವನ್ನೂ ನೀಡಲಾಗಿದೆ.

ಏನಿದು ಬಿಟ್‌ ಕಾಯಿನ್‌ ಬಾಂಡ್‌

ಬಿಟ್‌ಕಾಯಿನ್‌ ಸಿಟಿ ಬಿಡುಗಡೆಗೆ ಅಗತ್ಯವಾದ ಹಣಕ್ಕಾಗಿ, ಸರ್ಕಾರಗಳು ಬಿಡುಗಡೆ ಮಾಡುವ ಸರ್ಕಾರಿ ಬಾಂಡ್‌ ರೂಪದಲ್ಲೇ ಎಲ್‌ ಸಾಲ್ವಡೋರ್‌ ಸರ್ಕಾರ ತಲಾ 100 ಕೋಟಿ ಡಾಲರ್‌ ಮೌಲ್ಯದ ಬಿಟ್‌ಕಾಯಿನ್‌ ಬಾಂಡ್‌ ಬಿಡುಗಡೆ ಮಾಡಲಿದೆ. ತಲಾ 100 ಡಾಲರ್‌ ಹೂಡಿಕೆ ಮಾಡಿ ಯಾರು ಬೇಕಾದರೂ ಬಾಂಡ್‌ ಖರೀದಿಸಬಹುದು. ಈ ಹಣದ ಅರ್ಧ ಭಾಗವನ್ನು ನಗರ ನಿರ್ಮಾಣ, ಬಿಟ್‌ ಕಾಯಿನ್‌ ಮೈನಿಂಗ್‌ಗೆ ಮತ್ತು ಉಳಿದರ್ಧ ಭಾಗವನ್ನು ಬಿಟ್‌ ಕಾಯಿನ್‌ ಖರೀದಿಸಲು ಬಳಸಲಾಗುತ್ತದೆ.

ಈ ಬಾಂಡ್‌ಗಳನ್ನು ಬಿಟ್‌ ಕಾಯಿನ್‌ ಸೇವೆ ನೀಡುವ ‘ಬ್ಲಾಕ್‌ ಸ್ಟ್ರೀಮ್’ ಕಂಪನಿ ನಿರ್ವಹಣೆ ಮಾಡಲಿದೆ. ಬಿಟ್‌ ಕಾಯಿನ್‌ ಮೈನಿಂಗ್‌ ಮಾಡುವ ಮೂಲಕ ಎಲ… ಸಾಲ್ವಡೋರ್‌ ಹಣ ಗಳಿಸಲಿದೆ. ಈ ಲಾಭವನ್ನು ಹೂಡಿಕೆ ಮಾಡುವವರಿಗೆ ನಿಗದಿತವಾಗಿ ಹಂಚಿಕೆ ಮಾಡಲಾಗುತ್ತದೆ. 5 ವರ್ಷಗಳ ನಂತರ ಬಿಟ್‌ ಕಾಯಿನ್‌ಗಳನ್ನು ಮಾರಾಟ ಮಾಡುವುದಾಗಿ ಹಾಗೂ ಈ ಸಮಯದಲ್ಲಿ ಹೂಡಿಕೆದಾರರಿಗೆ ಹೆಚ್ಚುವರಿ ಕೂಪನ್‌ ನೀಡುವುದಾಗಿ ಬುಕೆಲಿ ಭರವಸೆ ನೀಡಿದ್ದಾರೆ.

ಹೇಗಿರಲಿದೆ ಬಿಟ್‌ ಕಾಯಿನ್‌ ಸಿಟಿ

ಆಕಾಶದಿಂದ ನೋಡಿದರೆ ಬಿಟ್‌ ಕಾಯಿನ್‌ ಮಾದರಿಯಲ್ಲಿ ಈ ನಗರ ಕಾಣಿಸುತ್ತದೆ. ನಗರದ ಮಧ್ಯಭಾಗದಲ್ಲಿ ಬಿಟ್‌ ಕಾಯಿನ್‌ ಮೈನಿಂಗ್‌ ಮಾಡುವ ಪ್ಲಾಜಾ ನಿರ್ಮಾಣ ಮಾಡಲಾಗುತ್ತದೆ. ಇಡೀ ನಗರಕ್ಕೆ ಹಾಗೂ ಬಿಟ್‌ ಕಾಯಿನ್‌ ಮೈನಿಂಗ್‌ಗೆ ಬೇಕಾಗುವ ವಿದ್ಯುತ್‌ ಅನ್ನು ಕೊಂಚಾಗುವ ಜ್ವಾಲಾಮುಖಿಯ ಜಿಯೋಥರ್ಮಲ್ ಶಕ್ತಿಯಿಂದ ಪಡೆದುಕೊಳ್ಳಲಾಗುತ್ತದೆ. ಇಡೀ ನಗರ ಕಾರ್ಬನ್‌ ಮಾಲಿನ್ಯ ಮುಕ್ತವಾಗಿರಲಿದೆ.

CryptoCurrency | ಕ್ರಿಪ್ಟೋಗೆ ತೆರಿಗೆ ವಿಧಿಸಲು ಬಜೆಟ್‌ನಲ್ಲಿ ಕಾಯ್ದೆ ತಿದ್ದುಪಡಿ

ಬಿಟ್‌ ಕಾಯಿನ್‌ ಅಂದರೆ?

ಕ್ರಿಪ್ಟೊಕರೆನ್ಸಿಗಳಲ್ಲಿ ಹೆಚ್ಚು ಪ್ರಖ್ಯಾತವಾಗಿರುವುದು 2009ರಲ್ಲಿ ಚಾಲ್ತಿಗೆ ಬಂದ ಬಿಟ್‌ ಕಾಯಿನ್‌. ಇದು ಡಿಜಿಟಲ… ರೂಪದ ಹಣ. ಮಧ್ಯವರ್ತಿಗಳಿಲ್ಲದೇ ವ್ಯವಹಾರ ನಡೆಸಬಹುದಾಗಿದೆ. ಕಂಪ್ಯೂಟರ್‌ಗಳಲ್ಲಿ ಕಡತಗಳ ರೂಪದಲ್ಲಿ ಬಿಟ್‌ ಕಾಯಿನ್‌ಗಳು ಸಂಗ್ರಹವಾಗಿರುತ್ತದೆ. ಈ ಹಣವನ್ನು ಬ್ಲಾಕ್‌ಚೈನ್‌ ಟೆಕ್ನಾಲಜಿ ಮೂಲಕ ಸುರಕ್ಷಿತವಾಗಿಡಲಾಗುತ್ತದೆ.

ಬಿಟ್‌ಕಾಯಿನ್‌ ಮೈನಿಂಗ್‌ ಅಂದರೇನು?

ಕಂಪ್ಯೂಟರ್‌ಗಳಲ್ಲಿ ತಯಾರು ಮಾಡಲಾಗಿರುವ ಅತಿ ಕ್ಲಿಷ್ಟಪಝಲ್ ಗಳನ್ನು ಪರಿಹಾರ ಮಾಡುವ ಮೂಲಕ ಬಿಟ್‌ ಕಾಯಿನ್‌ ಅನ್ನು ಸೃಷ್ಟಿಮಾಡಲಾಗುತ್ತದೆ. ಪ್ರತಿ ಫಝಲ್‌ ಬಿಡಿಸಿದಾಗಲೂ ಒಂದೊಂದು ಬ್ಲಾಕ್‌ ಮೈನಿಂಗ್‌ ಮಾಡಿದವರಿಗೆ ಸಿಗುತ್ತದೆ. ಹೀಗೆ ನಿಗದಿತ ಪ್ರಮಾಣದ ಬ್ಲಾಕ್‌ಗಳು ಶೇಖರಣೆಯಾದಾಗ ಅದು ಒಂದು ಬಿಟ್‌ಕಾಯಿನ್‌ ಎನ್ನಿಸಿಕೊಳ್ಳುತ್ತದೆ.

ಬಿಟ್‌ ಕಾಯಿನ್‌ಗಳನ್ನು ಸೃಷ್ಟಿಮಾಡುವಾಗ, ಇನ್ನೊಬ್ಬರಿಗೆ ಕಳುಹಿಸುವಾಗ ಸುರಕ್ಷತೆಗಾಗಿ ಪ್ರತಿ ಬಾರಿಯೂ ಹೊಸದಾದ ಸುರಕ್ಷ ಕೀಗಳನ್ನು ಬಳಸಬೇಕಾಗುತ್ತದೆ. ಈ ಸುರಕ್ಷಾ ಕೀಗಳು ಸುಮಾರು 64 ಅಕ್ಷರಗಳನ್ನು ಒಳಗೊಂಡಿರುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರೀ ಶಕ್ತಿಶಾಲಿ ಕಂಪ್ಯೂಟರ್‌ಗಳನ್ನು ಬಳಸಿ ಬಿಟ್‌ಕಾಯಿನ್‌ ಮೈನಿಂದ ಮಾಡಲಾಗುತ್ತಿದೆ. ಹೀಗಾಗಿ ಇದು ಭಾರೀ ಪ್ರಮಾಣದ ವಿದ್ಯುತ್‌ ಅನ್ನು ಬೇಡುತ್ತದೆ. ಗುರುವಾರ ಒಂದು ಬಿಟ್‌ಕಾಯಿನ್‌ ಮೌಲ್ಯ 44 ಲಕ್ಷ ರು.ನಷ್ಟಿತ್ತು.

ಜ್ವಾಲಾಮುಖಿ ಇಂದ ವಿದ್ಯುತ್‌ ಹೇಗೆ?

ಜ್ವಾಲಾಮುಖಿ ಇರುವ ಪ್ರದೇಶದಲ್ಲಿ ಭೂಮಿಯ ಉಷ್ಣತೆ ಅತ್ಯಂತ ಹೆಚ್ಚಾಗಿರುತ್ತದೆ. ಇದನ್ನು ಭೂಶಾಖ ಶಕ್ತಿ ಎನ್ನಲಾಗುತ್ತದೆ. ಇದನ್ನು ಬಳಸಿಕೊಂಡು ವಿದ್ಯತ್‌ಚ್ಚಕ್ತಿಯನ್ನು ತಯಾರು ಮಾಡಲಾಗುತ್ತದೆ. ಭೂಮಿಯ ಅತಿಯಾದ ಶಾಖದಿಂದಾಗಿ ಅಂತರ್ಜಲ ಬಿಸಿಯಾಗಿ ಆವಿಯ ರೂಪದಲ್ಲಿ ಹರಿಯುತ್ತಿರುತ್ತದೆ. ಇಂತಹ ಸ್ಥಳಗಳಿಗೆ ಪೈಪ್‌ಗಳನ್ನು ಅಳವಡಿಸುವ ಮೂಲಕ ಬಿಸಿ ಆವಿಯನ್ನು ಟರ್ಬೈನ್‌ಗಳಿಗೆ ಹಾಯಿಸಲಾಗುತ್ತದೆ. ಇದರಿಂದಾಗಿ ಟರ್ಬೈನ್‌ಗಳು ತಿರುಗಿ ವಿದ್ಯುತ್‌ ಉತ್ಪಾದನೆಯಾಗುತ್ತದೆ.

- ಗಣೇಶ್ ಪ್ರಸಾದ್ ಯಾನಗಹಳ್ಳಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ