Fauda: 'ಫೌಡಾ' ನಟರ ಜೊತೆ ಪ್ರಧಾನಿ ಮೋದಿ ಸೆಲ್ಫಿ! ಫೋಟೋ ಸಖತ್ ವೈರಲ್

Published : Feb 26, 2026, 07:02 PM IST
Fauda: 'ಫೌಡಾ' ನಟರ ಜೊತೆ ಪ್ರಧಾನಿ ಮೋದಿ ಸೆಲ್ಫಿ! ಫೋಟೋ ಸಖತ್ ವೈರಲ್

ಸಾರಾಂಶ

ಇಸ್ರೇಲ್ ಪ್ರವಾಸದ ವೇಳೆ ಪ್ರಧಾನಿ ಮೋದಿ, ಅಲ್ಲಿನ ಜನಪ್ರಿಯ 'ಫೌಡಾ' ಸೀರೀಸ್ ನಟರನ್ನು ಭೇಟಿಯಾಗಿದ್ದಾರೆ. ಅವರೊಂದಿಗೆ ಸೆಲ್ಫಿ ತೆಗೆದು, 'ಇಲ್ಲಿ ಯಾವುದೇ ಅಂಡರ್‌ಕವರ್ ಆಪರೇಷನ್ ಬೇಕಾಗಿಲ್ಲ' ಎಂದು ತಮಾಷೆ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇಸ್ರೇಲ್ ಪ್ರವಾಸದ ವೇಳೆ, ಅಲ್ಲಿನ ಜನಪ್ರಿಯ ಸೀರೀಸ್ 'ಫೌಡಾ'ದ ನಟರನ್ನು ಭೇಟಿಯಾಗಿದ್ದಾರೆ. ಅವರೊಂದಿಗೆ ತೆಗೆದ ಸೆಲ್ಫಿಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಭೇಟಿಗೆ ಯಾವುದೇ ಅಂಡರ್‌ಕವರ್ ಕೆಲಸ ಬೇಕಾಗಿಲ್ಲ, ಒಂದು ಸೆಲ್ಫಿ ಸಾಕು ಎಂದು ಮೋದಿ ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಇಸ್ರೇಲ್‌ ಸಂಸತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ಇತಿಹಾಸ! ಮೋದಿ ಅಪ್ಪುಗೆಗೆ ನೆತನ್ಯಾಹು ಫಿದಾ

 

 

ಇದನ್ನೂ ಓದಿ: PM Modi Israel Visit: ಮತ್ತಷ್ಟು ಗಟ್ಟಿಯಾಗಲಿದೆ ಭಾರತ-ಇಸ್ರೇಲ್ ದೋಸ್ತಿ; ಮೋದಿ ಪ್ರವಾಸದ ಸಂಪೂರ್ಣ ಮಾಹಿತಿ

ಮೋದಿ ಅವರ ಈ ಪೋಸ್ಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅನೇಕರು ಈ ಕ್ಷಣವನ್ನು ರಾಜತಾಂತ್ರಿಕತೆ ಮತ್ತು ಜನಪ್ರಿಯ ಸಂಸ್ಕೃತಿಯ ಅದ್ಭುತ ಮಿಶ್ರಣ ಎಂದು ಬಣ್ಣಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂದು ಸ್ವಾತಂತ್ರ್ಯ ಈಗ ದಿವಾಳಿ, 170 ವರ್ಷ ಬಳಿಕ ಮತ್ತೆ ಸ್ಥಗಿತಗೊಂಡ ಈಸ್ಟ್ ಇಂಡಿಯಾ ಕಂಪನಿ
ಮೃತ ಮಹಿಳೆಯ ಗರ್ಭದಲ್ಲಿ ಅರಳಿದ ಜೀವ: ಗರ್ಭಕೋಶದ ಕಸಿ ಬಳಿಕ ಗಂಡು ಮಗುವಿಗೆ ಜನ್ಮನೀಡಿದ ಮಹಿಳೆ