
ಲಂಡನ್ (ಫೆ.26) ವ್ಯಾಪರಕ್ಕಾಗಿ ಬಂದು ಭಾರತವನ್ನೇ ತೆಕ್ಕೆಗೆ ತೆಗೆದುಕೊಂಡ ಬ್ರಿಟಿಷ್ ಬಳಿಕ ಬ್ರಿಟಿಷ್ ರಾಜ್ ಆಳ್ವಿಕೆ ನಡೆಸಿತ್ತು. ಸರಿಸುಮಾರು 200 ವರ್ಷಗಳ ಕಾಲ ಭಾರತವನ್ನು ಬ್ರಿಟಿಷರು ಆಳ್ವಿಕೆ ಹೆಸರಲ್ಲಿ ದೋಚಿದ್ದರು. ಲಕ್ಷಾಂತರ ಮಂದಿಯ ಕಗ್ಗೊಲೆಗೂ ಕಾರಣರಾಗಿದ್ದಾರೆ. ಇದಕ್ಕೂ ಮೊದಲು ಮೊಘಲರು, ಸುಲ್ತಾನರು ಸೇರಿದಂತೆ ದಾಳಿಕೋರರು ಭಾರತವನ್ನೇ ಮುಗಿಸುವ ಪ್ರಯತ್ನ ಮಾಡಿದ್ದರು. ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಬ್ರಿಟಿಷರು ಅಧಿಕೃತವಾಗಿ ಈಸ್ಟ್ ಇಂಡಿಯಾ ಕಂಪನಿ ಆರಂಭಿಸಿ ಆಳ್ವಿಕೆ ಆರಂಭಿಸಿದ್ದರು. ಆದರೆ ಭಾರತದ ವೀರರ ಹೋರಾಟದಿಂದ ಭಾರತ ಸ್ವಾತಂತ್ರ್ಯಗೊಂಡಿತು. ಈ ವೇಳೆ ಈಸ್ಟ್ ಇಂಡಿಯಾ ಕಂಪನಿ ಮುಚ್ಚಿತ್ತು. ಇದೀಗ ಬರೋಬ್ಬರಿ 170 ವರ್ಷಗಳ ಬಳಿಕ ಮತ್ತೆ ಈಸ್ಟ್ ಇಂಡಿಯಾ ಕಂಪನಿ ದಿವಾಳಿಯಾಗಿ ಮುಚ್ಚಿ ಹೋಗಿದೆ.
1947ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸ್ಥಗಿತಗೊಂಡಾಗ ಭಾರತೀಯರು ಸಂಭ್ರಮ ಪಟ್ಟಿದ್ದರು. ಕೆಲವರು ಕಣ್ಣೀರು ಸುರಿಸಿದ್ದು ಇದೆ. ಬ್ರಿಟಿಷ್ ಮಾರ್ಗದರ್ಶನದಲ್ಲೇ ಭಾರತ ಮುಂದುವರಿಯಲಿ ಎಂದವರು ಇದ್ದಾರೆ. ಆದರೆ ಅಂದು ಬಹುತೇಕ ಭಾರತೀಯರು ಸಂಭ್ರಮಿಸಿದ್ದರು, ಆದರೆ ಇಂದು ಈಸ್ಟ್ ಇಂಡಿಯಾ ಕಂಪನಿ ದಿವಾಳಿಯಾಗಿ ಸ್ಥಗಿತಗೊಂಡ ಮಾಹಿತಿ ಹೊರಬಿದ್ದಾಗ ಭಾರತೀಯರು ಸಂಭ್ರಮಿಸಿಲ್ಲ.
1858ರಲ್ಲಿ ಬ್ರಿಟಿಷ್ ರಾಜ್ ಅಂದರೆ ಈಸ್ಟ್ ಇಂಡಿಯಾ ಕಂಪನಿ ಹೆಸರಲ್ಲಿ ಅಕ್ಷರಶ ಜೀತಪದ್ದತಿಯ ಆಳಿಕೆ ಆರಂಭಗೊಂಡಿತ್ತು. 1947ರಲ್ಲಿ ಇಂದು ಅಂತ್ಯಗೊಂಡಿತ್ತು. ಆದರೆ 2010ರಲ್ಲಿ ಭಾರತೀಯ ಮೂಲದ ಲಂಡನ್ ಉದ್ಯಮಿ ಸಂಜೀವ್ ಮೆಹ್ತ ದುಬಾರಿ ಹಣ ನೀಡಿ ಈಸ್ಟ್ ಇಂಡಿಯಾ ಕಂಪನಿ ಹೆಸರಿನ ಹಕ್ಕು ಪಡೆದಿದ್ದರು. ಅಂದು ಬ್ರಿಟಿಷರು ಭಾರತೀಯರ ಆಳ್ವಿಕೆಗೆ ಈಸ್ಟ್ ಇಂಡಿಯಾ ಕಂಪನಿ ಆರಂಭಿಸಿದ್ದರೆ, ಇದೀಗ ಈಸ್ಟ್ ಇಂಡಿಯಾ ಕಂಪನಿ ಭಾರತೀಯನ ಕೈಯಲ್ಲಿದೆ ಎಂದು ಭಾರಿ ಸುದ್ದಿಯಾಗಿತ್ತು. ಈ ಖರೀದಿ ವಿಶ್ವದಲ್ಲೇ ಭಾರಿ ಸಂಚಲನ ಸೃಷ್ಟಿಸಿತ್ತು. ಸಂಜೀವ್ ಮೆಹ್ತ ಕೂಡ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಈಸ್ಟ್ ಇಂಡಿಯಾ ಕಂಪನಿ ಎಂದರೆ ನಮಗೆ ನೆಗೆಟೀವ್ ಭಾವನೆ ಬರುತ್ತೆ. ಆದರೆ ಇದೀಗ ಭಾರತೀಯನೇ ಈ ಈಸ್ಟ್ ಇಂಡಿಯಾ ಕಂಪನಿ ಮಾಲೀಕ. ಹೀಗಾಗಿ ಸದ್ಯ ಪಾಸಿಟೀವ್ ಭಾವನೆ ಎಂದಿದ್ದರು.
ದಿ ಸಂಡೇ ಟೈಮ್ಸ್ ವರದಿ ಪ್ರಕಾರ ಡಿಸೆಂಬರ್ 2025ರಲ್ಲೇ ಸಂಜೀವ್ ಮೆಹ್ತಾ ಮಾಲೀಕತ್ವದ ಈಸ್ಟ್ ಇಂಡಿಯಾ ಆಧುನಿಕ ಕಂಪನಿ ದಿವಾಳಿಯಾಗಿತ್ತು. ಈಸ್ಟ್ ಇಂಡಿಯಾ ಕಂಪನಿ ತನ್ನ ಪೇರೆಂಟ್ಸ್ ಗ್ರೂಪ್ ಬ್ರಿಟಿಷ್ ವರ್ಜಿನ್ ಐಲೆಂಡ್ ಕಂಪನಿಗೆ 6.3 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿದೆ. ಇತ್ತ ಇನ್ನು 2.03 ಕೋಟಿ ರೂಪಾಯಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿದೆ. ಇಷ್ಟೇ ಅಲ್ಲ ಉದ್ಯೋಗಿಗಳಿಗೆ 1.71 ಕೋಟಿ ರೂಪಾಯಿ ಬಾಕಿ ನೀಡಬೇಕಿದೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಾರಣ ಸಂಜೀವ್ ಮೆಹ್ತ ಮಾಲೀಕತ್ವದ ಈಸ್ಟ್ ಇಂಡಿಯಾ ಕಂಪನಿ ಮುಚ್ಚಿದೆ. ಈಸ್ಟ್ ಇಂಡಿಯಾ ಕಂಪನಿಗೆ ಸಂಬಂಧಿಸಿದ ಸಂಜೀವ್ ಮೆಹ್ತ ಅವರ ಕೆಲ ಇತರ ಕಂಪನಿಗಳು ಮುಚ್ಚಿದೆ ಎಂದು ವರದಿಯಾಗಿದೆ.
ಸಂಜೀವ್ ಮೆಹ್ತ ಈಸ್ಟ್ ಇಂಡಿಯಾ ಕಂಪನಿ ರೈಟ್ಸ್ ಖರೀದಿಸಿದ ಬಳಿಕ ಇದರ ಅಂಗ ಸಂಸ್ಥೆಯಾಗಿ ಹಲವು ಕಂಪನಿಗಳು ಆರಂಭಿಸಿದ್ದರು. 2020ರ ಬಳಿಕ ಅಂದರೆ ಕೋವಿಡ್ ಬಳಿಕ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಾ ಬಂದಿದೆ. ಆದರೂ ಕಂಪನಿ ಹಲವು ಮೂಲಗಳಿಂದ ಸಾಲ ಪಡೆದು ಮುಂದುವರಿಸುವ ಪ್ರಯತ್ನ ಮಾಡಿದೆ. ಆದರೆ ಸಾಧ್ಯವಾಗಿಲ್ಲ. ಇದರ ಅಂಗ ಸಂಸ್ಥೆಯಾದ ಈಸ್ಟ್ ಇಂಡಿಯಾ ಕಂಪನಿ ಕಲೆಕ್ಷನ್ ಲಿಮಿಟೆಡ್ ಕೂಡ ಮುಚ್ಚಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ