ಪೊಲೀಸರಿಗೆ 'ಬೆತ್ತಲೆ' ಸವಾಲು, ಬಟ್ಟೆ ಕಳಚಿ ಕಿತ್ತೆಸೆದು ಮಹಿಳೆಯ ಹುಚ್ಚಾಟ!

By Suvarna News  |  First Published Apr 13, 2020, 11:05 PM IST

ಲಾಕ್ ಡೌನ್ ಉಲ್ಲಂಘನೆ ಮಾಡಿದ್ದ ಮಹಿಳೆ ವಿಚಿತ್ರ ವರ್ತನೆ/ ಬಟ್ಟೆ ಬಿಚ್ಚೇಸೆದು ಪೊಲೀಸರ ವಿರುದ್ಧ ಘೋಷಣೆ/ ಮಹಿಳೆ ಹತೋಟಿಗೆ ತರಲು ಹರಸಾಹಸ


ಮ್ಯಾಡ್ರಿಡ್(ಏ. 13) ಕೊರೋನಾ ಲಾಕ್ ಡೌನ್ ಉಲ್ಲಂಘನೆ ಮಾಡಿದ್ದ ಮಾಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದರು. ಆದರೆ ಇದೇ ಸಿಟ್ಟಿಗೆ ಮಹಿಳೆ ವಿಚಿತ್ರವಾಗಿ ಪ್ರತಿಭಟನೆ ಮಾಡಿದ್ದಾಳೆ.

ಸ್ಪೇನ್ ಟೊರೆಮೊಲಿನೋಸ್ ನಗರದ ಕೋಸ್ಟಾ ಡೆಲ್ ಸಾಲ್ ರೆಸಾರ್ಟ್ ನಲ್ಲಿ ವಾಸವಿದ್ದ 41 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು. ಬಿಡುಗಡೆಯಾದ ನಂತರ ತನ್ನೆಲ್ಲಾ ಬಟ್ಟೆ ಬಿಚ್ಚಿ ಎಸೆದು ಬೆತ್ತಲಾಗಿ ಕಾರಿನ ಮೇಲೆ ಹತ್ತಿ ಘೋಷಣೆ ಕೂಗಿದ್ದಾಳೆ.

Tap to resize

Latest Videos

ರಾಹುಲ್ ಗಾಂಧಿ ಮಾತಿಗೆ ಸಹಮತ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ

ಕೊರೋನಾ ತುರ್ತುಸೇವೆ ಶ್ಳಾಘಿಸಿದ ನೆರೆಹೊರೆಯವರಿಗೆ ಮಹಿಳೆ ಕಿರಿಕಿರಿ ನೀಡಿದ್ದಾರೆ.  ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಈ ವೇಳೆಯೇ ಬೆತ್ತಲಾಗಲು ಯತ್ನ ಮಾಡಿದ್ದಾಳೆ. ಆದರೆ ಅದು ಸಾಧ್ಯವಾಗಿಲ್ಲ. 

ಹದ್ದು ಮೀರಿ ವರ್ತಿಸುತ್ತಿದ್ದ ಮಹಿಳೆಯನ್ನು ಅದು ಹೇಗೋ ಹರಸಾಹಸ ಮಾಡಿ ಆಂಬುಲೆನ್ಸ್ ಮೂಲಕ ಸಾಗಿಸಲಾಗಿದೆ. 

click me!