
ಬೀಜಿಂಗ್(ಏ.13): ಚೀನಾದಲ್ಲಿ ಹುಟ್ಟಿದ ಕೊರೋನಾ ವೈರಸ್ ಇದೀಗ ಎಲ್ಲಾ ದೇಶಕ್ಕೂ ಹಬ್ಬಿದೆ. ಅತ್ತ ಚೀನಾ 3 ತಿಂಗಳು ಹೋರಾಟ ಮಾಡಿ ವೈರಸ್ ನಿಯಂತ್ರಿಸಲು ಸಾಧ್ಯವಾಗಿತ್ತು. ಹೀಗಾಗಿ ವುಹಾನ್ ಸೇರಿದಂತೆ ಚೀನಾದಲ್ಲಿ ಎಲ್ಲಾ ಸೇವೆಗಳು ಆರಂಭಗೊಂಡಿತು. ಜನರು ತಮ್ಮ ಕಚೇರಿಗಳತ್ತ ಮುಖಮಾಡಿದರು. ಜೀವನ ಸಹಜ ಸ್ಥಿತಿಗೆ ನಿಧಾನವಾಗಿ ಬರುತ್ತಿತ್ತು. ಅಷ್ಟರಲ್ಲೇ ಚೀನಾದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಕಾಣಿಸಿಕೊಳ್ಳತೊಡಗಿದೆ. ಇದೀಗ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.
ವುಹಾನ್ ಲ್ಯಾಬ್‌ನಿಂದಲೇ ಬಂತು ಕೊರೋನಾ, ವಿಜ್ಞಾನಿಗಳ ಸಂಶೋಧನಾ ವರದಿಗೆ ಬೆತ್ತಲಾಯ್ತು ಚೀನಾ!
ಚೀನಾ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ಶುಕ್ರವಾರ 46 ಹೊಸ ಪ್ರಕರಣಗಳು ದೃಢಪಟ್ಟಿತ್ತು. ಆದರೆ ಏಪ್ರಿಲ್ 12 ಭಾನುವಾರ 108 ಹೊಸ ಪ್ರಕರಣಗಳು ಪತ್ತೆಯಾಗಿರುವುದನ್ನು ದೃಢಪಡಿಸಿದೆ. ತಜ್ಞರ ತಂಡ ಹೊಸ ಪ್ರಕರಣಗಳ ಟ್ರಾವೆಲ್ ಹಿಸ್ಟರಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಕಲೆಹಾಕಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ವಿಮಾನ ಸೇವೆ ನಿರ್ಬಂಧ ತೆರವಾದ ಬೆನ್ನಲ್ಲೇ ಚೀನಾ ಪ್ರಜೆಗಳು ವಿದೇಶದಿಂದ ತವರಿಗೆ ಮರಳಿದ್ದಾರೆ. ಇವರಿಂದ ಪ್ರಕರಣ ಹೆಚ್ಚಾಗುತ್ತಿದೆ ಎಂದಿದೆ.
ಕೊರೋನಾ ಪೀಡಿತ ವುಹಾನ್‌ನಲ್ಲಿ ಈಗ ಮದುವೆಗೆ ಭಾರೀ ಬೇಡಿಕೆ!.
ಸತತ 3 ತಿಂಗಳು ಲಾಕ್‌ಡೌನ್ ಮಾಡಿ ಕೊರೋನಾ ನಿಯಂತ್ರಣ ಮಾಡಿದ ಚೀನಾ ಕಳೆದೆರಡು ವಾರದಲ್ಲಿ ನಿರ್ಬಂದ ತೆರವು ಮಾಡಿದ ಕಾರಣ ಇದೀಗ ಕೊರೋನಾ ಪ್ರಕರಣ ಹೆಚ್ಚಾಗಿದೆ. ಇದು ಎಲ್ಲಾ ದೇಶಗಳಿಗೆ ಎಚ್ಚರಿಕೆಯಾಗಿದೆ. ಕಾರಣ ಸದ್ಯ ಭಾರತದಲ್ಲಿ ಲಾಕ್‌ಡೌನ್ ವಿಸ್ತರಿಸಲಾಗಿದೆ. ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದ ಕೂಡಲೇ ನಿರ್ಬಂಧ ತೆರವಾದರೆ ಕೊರೋನಾ ವಕ್ಕರಿಸಿವುದು ಖಚಿತ. ಹೀಗಾಗಿ ಎಚ್ಚರವಹಿಸಿವುದು ಅಗತ್ಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ