ಮುಸ್ಲಿಂ ಮಹಿಳೆಗೆ ISIS ಎಂದು ಬರೆದು ಕೊಟ್ಟ ಸ್ಟಾರ್‌ಬಕ್ಸ್!

By Suvarna NewsFirst Published Jul 8, 2020, 5:00 PM IST
Highlights

ಪಾನೀಯ ಆರ್ಡರ್  ಮಾಡಿದ ಮುಸ್ಲಿಂ ಮಹಿಳೆ/ ಮಹಿಳೆ ಹೆಸರಿನ ಬದಲು ಬಂದಿದ್ದು ಐಎಸ್‌ಐಎಸ್‌/ ಸ್ಟಾರ್ ಬಕ್ಸ್ ಮೇಲೆ ಮಹಿಳೆ ಕೆಂಡಾಮಂಡಲ/ ಅಮೆರಿಕದ ಘಟನೆ ದೊಡ್ಡ ಸುದ್ದಿ

ಮಿನ್ನೆಸೋಟಾ(ಜು.  08)  ಮುಸ್ಲಿಂ ಮಹಿಳೆಗೆಯೊಬ್ಬರು  ಸ್ಟಾರ್ ಬಕ್ಸ್  ಮೇಲೆ ಕೆಂಡವಾಗಿದ್ದಾರೆ.  ಯುಎಸ್‌ಎನ ಮಿನ್ನೆಸೋಟಾದ ಘಟನೆ ಇಡೀ ಪ್ರಪಂಚದ ಗಮನ ಸೆಳೆದಿದೆ.

19 ವರ್ಷದ ಅಯೇಷಾ ಒಂದು ಸನ್ನಿವೇಶ ಎದುರಿಸಿದ್ದಾರೆ. ಆಕೆ ಆರ್ಡರ್ ಮಾಡಿದ ಪಾನೀಯದ ಮೇಲೆ ಆಕೆಯ ಹೆಸರಿನ ಬದಲಾಗಿ ಐಎಸ್‌ಐಎಸ್‌ ಎಂದು ಬರೆದು ನೀಡಲಾಗಿದೆ.   ಎಲ್ಲರಿಗೂ ಗೊತ್ತಿರುವ ಹಾಗೆ ಐಎಸ್‌ಐಎಸ್‌(ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್)  ಒಂದು ಉಗ್ರ ಸಂಘಟನೆ.

ಕೌನ್ಸಿಲ್ ಆಫ್ ಅಮೆರಿಕನ್- ಇಸ್ಲಾಮಿಕ್ ರಿಲೇಶನ್ ವಿಭಾಗದಲ್ಲಿ ಮಹಿಳೆ ದೂರು ಸಲ್ಲಿಸಲು ನಿರ್ಧಾರ ಮಾಡಿದ್ದಾರೆ.  ಇದೊಂದು ಜಾತಿ ನಿಂದನೆ ಅಥವಾ ಅವಹೇಳನಕಾರಿ ಕೆಲಸ ಎಂಬುದು ಮಹಿಳೆಯ ಪ್ರಮುಖ ಆರೋಪ .

ಅಪಘಾತ ತಪ್ಪಿಸಿಕೊಂಡವಳ ಮೇಲೆ ಮತ್ತೆ ಕಾರು ಹತ್ತಿಸಲು ಬಂದ

ನಾನು ಪಾನೀಯ ಸ್ವೀಕಾರ ಮಾಡಿದಾಗ ಆಘಾತಕ್ಕೆ ಒಳಗಾಗಿದ್ದೆ. ಇಡೀ ಮುಸ್ಲಿಂ ಸಮುದಾಯವನ್ನು ಪ್ರಪಂಚ ಈ ದೃಷ್ಟಿಯಿಂದ ನೋಡುತ್ತಿದ್ದೆಯೇ ಎಂದು ಅಚ್ಚರಿಯಾಯಿತು, ಜತೆಗೆ ನೋವಾಯಿತು ಎಂದು ಮಹಿಳೆ ಹೇಳಿಕೆ ನೀಡಿದ್ದಾರೆ.

ನಾನು ಕೊರೋನಾ ವೈರಸ್ ನಿಯಮ ಪಾಲನೆ ಮಾಡುತ್ತಿದ್ದೇನೆ. ಮುಖಕ್ಕೆ ಮಾಸ್ಕ್ ಧರಿಸಿದ್ದು ಕಾಫಿ ಶಾಪ್ ಗೆ ತೆರಳಿ ನನಗೆ ಬೇಕಾದ್ದನ್ನು ಆರ್ಡರ್ ಮಾಡುತ್ತಿದ್ದೆ. ಅಲ್ಲಿದ್ದವರಿಗೆ ನನ್ನ ಹೆಸರು ಹೇಳಿದೆ.. ಆದರೆ ಅವರಿಗೆ ನನ್ನ ಹೆಸರು ಉಚ್ಚಾರಣೆ ಮಾಡಲು ಸಾಧ್ಯವಾಗಿಲ್ಲ. 

ಅಯೇಷಾ  ಎನ್ನುವುದು ಐಎಸ್‌ಐಎಸ್‌ ಎಂದು ಹೇಗೆ ಕೇಳಲು ಸಾಧ್ಯ, ನಾನು ನನ್ನ ಹೆಸರನ್ನು ಹಲವು ಸಾರಿ ಉಚ್ಚಾರ ಮಾಡಿದೆ ಎಂದಿದ್ದಾರೆ. ಐಎಸ್‌ಐಎಸ್‌ ಕಂಡು ಕೆಂಡಾಮಂಡಲವಾಗಿದ್ದ ಯುವತಿಗೆ ಬೇರೆ ಪಾನೀಯ ನೀಡಲಾಗಿದ್ದು  25  ಡಾಲರ್ ಗಿಫ್ಟ್ ಕೂಪನ್ ಸಹ ಕೊಟ್ಟು ಕಳುಹಿಸಲಾಗಿದೆ.

 

click me!