ಪ್ರಪಂಚದೆಲ್ಲೆಡೆ ಹೊಸವರ್ಷವನ್ನು ಜನ ಅದ್ದೂರಿಯಾಗಿ ಬರ ಮಾಡಿಕೊಂಡಿದ್ದಾರೆ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಜನ ಹೊಸ ವರ್ಷವನ್ನು ಆಚರಿಸಿದ್ದು, ಅರಬ್ ರಾಷ್ಟ್ರ ಅಬುಧಾಬಿ ಈ ವರ್ಷ ಹೊಸವರ್ಷದಂದೇ ಗಿನ್ನೆಸ್ ದಾಖಲೆ ಬರೆದಿದೆ.
ಪ್ರಪಂಚದೆಲ್ಲೆಡೆ ಹೊಸವರ್ಷವನ್ನು ಜನ ಅದ್ದೂರಿಯಾಗಿ ಬರ ಮಾಡಿಕೊಂಡಿದ್ದಾರೆ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಜನ ಹೊಸ ವರ್ಷವನ್ನು ಆಚರಿಸಿದ್ದು, ಅರಬ್ ರಾಷ್ಟ್ರ ಅಬುಧಾಬಿ ಈ ವರ್ಷ ಹೊಸವರ್ಷದಂದೇ ಗಿನ್ನೆಸ್ ದಾಖಲೆ ಬರೆದಿದೆ. ಹೊಸವರ್ಷವನ್ನು ಬರಮಾಡಿಕೊಳ್ಳುವ ಬರದಲ್ಲಿ ದಾಖಲೆಯ ಪಟಾಕಿ ಸಿಡಿಸಿ ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಕಾರಣಕ್ಕೆ ಈ ಗಿನ್ನೆಸ್ ಪ್ರಶಸ್ತಿ ಗರಿ ಅಬುಧಾಬಿಯ ಕಿರೀಟ ಸೇರಿದೆ.
ಮುಸ್ಲಿಂ ರಾಷ್ಟ್ರವಾದರೂ ಅಬುಧಾಬಿ ಈ ವರ್ಷದ ಹೊಸವರ್ಷಾಚರಣೆಯನ್ನು ಅದ್ಭುತವಾಗಿ ಆಚರಿಸಿದೆ. ಲ್ ವಾತ್ಬಾದಲ್ಲಿ ನಡೆದ ಶೇಖ್ ಜಾಯೆದ್ ಉತ್ಸವದಲ್ಲಿ ನಿರಂತರ 50 ನಿಮಿಷಗಳ ಕಾಲ ಆಕಾಶದಲ್ಲಿ ಸುಡುಮದ್ದುಗಳ ಪ್ರದರ್ಶನದಿಂದ ಚಿತ್ತಾರ ಮೂಡಿಸುವ ಮೂಲಕ ನೋಡುಗರನ್ನು ಮಂತ್ರಮುಗ್ಧಗೊಳಿಸಿದ್ದಲ್ಲದೇ ಗಿನ್ನೆಸ್ ವಿಶ್ವ ದಾಖಲೆಯ ಪುಟದಲ್ಲಿ ಹೊಸ ಆರು ದಾಖಲೆಗಳನ್ನು ನಿರ್ಮಾಣ ಮಾಡಿದೆ. ಡ್ರೋನ್‌ಗಳನ್ನು ಒಳಗೊಂಡಿದ್ದ ಈ ಅದ್ಭುತವಾದ ಪ್ರದರ್ಶನವೂ ರಾತ್ರಿಯಲ್ಲಿ ಆಗಸವನ್ನು ಬಣ್ಣದ ಚಿತ್ತಾರಗಳಿಂದ ಬೆರಗುಗೊಳ್ಳುವಂತೆ ಮಾಡಿತು. ಪಟಾಕಿಯ ಜೊತೆಗೆ ಡ್ರೋನ್‌ಗಳ ಅದ್ಭುತ ಪ್ರದರ್ಶನಗಳು ನೋಡುಗರನ್ನು ಕಣ್ರೆಪ್ಪೆ ಮುಚ್ಚದಂತೆ ಮಾಡಿದವು.
ಈ ಹಬ್ಬದ ವಾತಾವರಣವೂ ಮಧ್ಯರಾತ್ರಿಯ ಹೊತ್ತಿಗೆ ಮತ್ತಷ್ಟು ರಂಗು ಪಡೆದಿದ್ದವು ಯಾಸ್ ಐಲ್ಯಾಂಡ್ ಮತ್ತು ಕಾರ್ನಿಚೆ ಸೇರಿದಂತೆ ನಗರದಾದ್ಯಂತದ ಸಾಂಪ್ರದಾಯಿಕ ಸ್ಥಳಗಳು ತಮ್ಮದೇ ಆದ ಬೆರಗುಗೊಳಿಸುವ ಪೈರೋಟೆಕ್ನಿಕ್ ಪ್ರದರ್ಶನಗಳೊಂದಿಗೆ ನೋಡುಗರನ್ನು ಮತ್ತಷ್ಟು ಬೆರಗುಗೊಳ್ಳುವಂತೆ ಮಾಡಿತು. ಈ ಅದ್ಭುತ ಕ್ಷಣಗಳ ಹತ್ತು ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶೇಖ್ ಜಾಯೆದ್ ಉತ್ಸವದಲ್ಲಿ ಈ ವರ್ಷ ಪ್ರದರ್ಶನವು ದಾಖಲೆಗಳನ್ನು ಮುರಿದು ಹಾಕಿತ್ತು. 2023ರಲ್ಲಿ, ಈ ಉತ್ಸವವು ಮೂರು ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿಮಿರ್ಸುವುದರ ಜೊತೆ 40 ನಿಮಿಷಗಳ ನಿರಂತರ ಸುಡ್ಡುಮದ್ದುಗಳ ಪ್ರದರ್ಶನ ಜಾಗತಿಕವಾಗಿ ಮೆಚ್ಚುಗೆ ಗಳಿಸಿತ್ತು. ಕಳೆದ ವರ್ಷ, ಇದು 5,000 ಡ್ರೋನ್‌ಗಳನ್ನು ಬಳಸಿಕೊಂಡು ವಿಶ್ವದ ಅತಿದೊಡ್ಡ ವೈಮಾನಿಕ ಲೋಗೋವನ್ನು ಅನಾವರಣಗೊಳಿಸಲಾಗಿತ್ತು. 2025ರಲ್ಲಿ ಯಾಸ್ ಐಲ್ಯಾಂಡ್ ತನ್ನ ಪ್ರಸಿದ್ಧ ಸುಡು ಮದ್ದುಗಳ ಪ್ರದರ್ಶನವನ್ನು ರಾತ್ರಿ 9 ಗಂಟೆಗೆ ಆಯೋಜಿಸಿತು. ಮತ್ತು ಮಧ್ಯರಾತ್ರಿ, ಯಾಸ್ ಬೇ ವಾಟರ್‌ಫ್ರಂಟ್, ಯಾಸ್ ಮರೀನಾ ಮತ್ತು ಯಾಸ್ ಬೀಚ್‌ನಂತಹ ಪ್ರದೇಶಗಳು ಪ್ರವಾಸಿಗರಿಗೆ ಮತ್ತಷ್ಟು ರಂಗು ಕಟ್ಟಿಕೊಟ್ಟವು.