ದೇಶದಲ್ಲಿ ಉಪಗ್ರಹ ಇಂಟರ್ನೆಟ್‌ ಆರಂಭಕ್ಕೆ ಶ್ರೀಮಂತರ ಪೈಪೋಟಿ!

By Kannadaprabha News  |  First Published Oct 2, 2021, 1:58 PM IST

* ಅಮೆಜಾನ್‌, ಸ್ಪೇಸ್‌ ಎಕ್ಸ್‌ ಮಾಲೀಕರಿಂದ ಕೇಂದ್ರಕ್ಕೆ ಮೊರೆ

* 1 ಜಿಬಿಪಿಎಸ್‌ಗಿಂತಲೂ ವೇಗವಾಗಿ ಸಿಗುತ್ತೆ ನೆಟ್‌ ಸಂಪರ್ಕ

* ರಿಲಯನ್ಸ್‌ ಜಿಯೋ, ಏರ್‌ಟೆಲ್‌ಗೆ ಕಾದಿದೆ ತುರುಸಿನ ಸ್ಪರ್ಧೆ

* ಮುಂದಿನ ವರ್ಷದಿಂದ ಸ್ಪೇಸ್‌ ಎಕ್ಸ್‌ ಸೇವೆ ಆರಂಭ


ನವದೆಹಲಿ(ಅ.02): ಉಪಗ್ರಹಗಳನ್ನು(Satellite) ಬಳಸಿ 1 ಜಿಬಿಪಿಎಸ್‌ಗಿಂತಲೂ ವೇಗದ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ದೇಶದಲ್ಲಿ ಆರಂಭಿಸಲು ವಿಶ್ವದ ಶ್ರೀಮಂತ ಉದ್ಯಮಿಗಳಾದ ಅಮೆಜಾನ್‌(Amazon) ಕಂಪನಿಯ ಜೆಫ್‌ ಬೆಜೋಸ್‌(Jeff Bezos) ಹಾಗೂ ಸ್ಪೇಸ್‌ ಎಕ್ಸ್‌ನ ಒಡೆಯ ಎಲೊನ್‌ ಮಸ್ಕ್‌(Elon Musk) ಮುಂದೆ ಬಂದಿದ್ದಾರೆ.

ದೇಶದಲ್ಲಿ ಈಗ ಕೇಬಲ್‌ ಆಧರಿತ ಬ್ರಾಡ್‌ಬ್ಯಾಂಡ್‌(Boadband) ಸೇವೆ ಬಳಕೆಯಲ್ಲಿದೆ. ಆದರೆ ಉಪಗ್ರಹ ಆಧರಿತ ಬ್ರಾಡ್‌ಬ್ಯಾಂಡ್‌ ಸಂಪರ್ಕ ಸಾಧ್ಯವಾದರೆ ಗ್ರಾಮೀಣ ಪ್ರದೇಶಗಳು, ಮರುಭೂಮಿಯಲ್ಲೂ ವೇಗದ ಸಂಪರ್ಕ ಸಾಧ್ಯವಾಗಲಿದೆ. ಅಮೆಜಾನ್‌ ಹಾಗೂ ಎಲೊನ್‌ ಮಸ್ಕ್‌ರ ಸ್ಟಾರ್‌ ಲಿಂಕ್‌ ದೇಶದಲ್ಲಿ ಸೇವೆ ಆರಂಭಿಸಿದರೆ ಏರ್‌ಟೆಲ್‌ ಹಾಗೂ ರಿಲಯನ್ಸ್‌ ಜಿಯೋ ಕಂಪನಿಗಳಿಗೆ ಭಾರಿ ಪೈಪೋಟಿ ಏರ್ಪಡಲಿದೆ.

Tap to resize

Latest Videos

undefined

ಅಮೆರಿಕದ ಈ ಎರಡೂ ಕಂಪನಿಗಳು ಪ್ರತ್ಯೇಕ ಯೋಜನೆಗಳೊಂದಿಗೆ ಈಗಾಗಲೇ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿವೆ. ಆದರೆ ಇನ್ನೂ ಅಧಿಕೃತವಾಗಿ ಲೈಸೆನ್ಸ್‌ ಕೋರಿ ಅರ್ಜಿ ಸಲ್ಲಿಸಿಲ್ಲ. ಏತನ್ಮಧ್ಯೆ, 2022ರ ಡಿಸೆಂಬರ್‌ನಿಂದ ಭಾರತದಲ್ಲಿ ಉಪಗ್ರಹ ಆಧರಿತ ಬ್ರಾಡ್‌ಬ್ಯಾಂಡ್‌ ಸೇವೆ ಆರಂಭಿಸುವುದಾಗಿ ಮಸ್ಕ್‌ರ ಸ್ಟಾರ್‌ ಲಿಂಕ್‌ ಶುಕ್ರವಾರ ಅಧಿಕೃತವಾಗಿ ಘೋಷಣೆ ಮಾಡಿದೆ.

ಸದ್ಯ ಒನ್‌ ವೆಬ್‌ ಎಂಬ ಕಂಪನಿ ಭಾರತದಲ್ಲಿ ಉಪಗ್ರಹ ಆಧರಿತ ಬ್ರಾಡ್‌ಬ್ಯಾಂಡ್‌ ಸೇವೆ ಆರಂಬಿಸಲು ಅನುಮತಿ ಪಡೆದಿದ್ದು, ಮುಂದಿನ ವರ್ಷ ಸೇವೆ ಆರಂಭಿಸಲಿದೆ.

ಭೂಮಿಯಿಂದ 1000 ಕಿ.ಮೀ. ದೂರದಲ್ಲಿ ಸುತ್ತುತ್ತಿರುವ ಉಪಗ್ರಹಗಳನ್ನು ಬಳಸಿಕೊಂಡು ಇಂಟರ್ನೆಟ್‌ ಸೇವೆ ನೀಡುವುದು ಈ ಕಂಪನಿಗಳ ಉದ್ದೇಶ. ಉಪಗ್ರಹಗಳ ಬ್ಯಾಂಡ್‌ವಿಡ್‌್ತ ಅನ್ನು ಉದ್ದಿಮೆಗಳು, ರೈಲ್ವೆ, ಹಡಗು ಕಂಪನಿಗಳು, ರಕ್ಷಣಾ ಸ್ಥಾವರಗಳು, ವಿಮಾನಯಾನ ಕಂಪನಿಗಳು ಹಾಗೂ ದೂರ ಸಂಪರ್ಕ ಕಂಪನಿಗಳಿಗೆ ನೇರವಾಗಿ ಮಾರಾಟ ಮಾಡುವ ಆಲೋಚನೆಯೂ ಇದೆ. ಈ ಸೇವೆಯಿಂದ ಇಂಟರ್ನೆಟ್‌ನಿಂದ ವಂಚಿತವಾಗಿರುವ ಗ್ರಾಮೀಣ ಪ್ರದೇಶಗಳು, ಮರುಭೂಮಿ, ಪರ್ವತ ಪ್ರದೇಶಗಳಲ್ಲೂ ವೇಗದ ಇಂಟರ್ನೆಟ್‌ ಲಭ್ಯವಾಗಲಿದೆ.

click me!