
ಲಂಡನ್(ಜೂ.26): ತಾನು ಕೊರೋನಾಕ್ಕೆ ತುತ್ತಾಗಿ ಸಾವನ್ನಪ್ಪಿದರೆ, ತನ್ನ ಮಗಳು ತಾನಿಲ್ಲದೇ ಬದುಕಲು ಸಾಧ್ಯವಿಲ್ಲ ಎಂಬ ಭೀತಿಯಲ್ಲಿ ತಾಯಿಯೇ 5 ವರ್ಷದ ಮಗಳನ್ನು 15 ಬಾರಿ ಇರಿದುಕೊಂದ ಬಳಿಕ ತಾನೂ ಇರಿದುಕೊಂಡ ಘಟನೆ ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ನಡೆದಿದೆ.
ಕಳೆದ ವರ್ಷದ ಜೂ.30ರಂದು ಈ ಘಟನೆ ನಡೆದಿದ್ದು, ಮಗಳನ್ನು ತಾನೇ ಇರಿದು ಕೊಂದಿದ್ದಾಗಿ ಭಾರತೀಯ ಮೂಲದ ಸುಥಾ ಶಿವನಾಥ್ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾಳೆ. ನನ್ನ ಪತ್ನಿಗೆ ಕೊರೋನಾ ತಗಲುವ ಭಾರೀ ಭೀತಿ ಎದುರಾಗಿತ್ತು. ಜೊತೆಗೆ ದೇಶದಲ್ಲಿ ಹೇರಿದ್ದ ಕೋವಿಡ್ ಲಾಕ್ಡೌನ್ ಕೂಡಾ ಆಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಆಕೆ ಇಂಥದ್ದೊಂದು ನಿರ್ಧಾರಕ್ಕೆ ಬರಲು ಕಾರಣವಾಗಿರಬಹುದು ಎಂದು ಸುಥಾರ ಪತಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ದಿನ ಆಕೆ ವಿಚಿತ್ರವಾಗಿ ವರ್ತಿಸುತ್ತಿದ್ದಳು. ನನಗೂ ಕೆಲಸಕ್ಕೆ ಹೋಗದಂತೆ ಒತ್ತಾಯ ಮಾಡಿದ್ದಳು. ನಾನು ಸೂಪರ್‌ಮಾರ್ಕೆಟ್‌ಗೆ ಹೋಗಿದ್ದ ವೇಳೆ ಆಕೆ ಈ ಕೃತ್ಯವೆಸಗಿದ್ದಾಳೆ. ನೆರೆ ಮನೆಯವರು ಈ ಘಟನೆ ನೋಡಿ ನನಗೆ ಮಾಹಿತಿ ನೀಡಿದರು. ಮನೆಗೆ ತಲುಪಿದ ವೇಳೆ ಪುತ್ರಿ ಸಾವನ್ನಪ್ಪಿದ್ದಳು. ಪತ್ನಿಯನ್ನು 2 ತಿಂಗಳ ಕಾಲ ಚಿಕಿತ್ಸೆ ಕೊಡಿಸಿ ಬದುಕಿಸಿಕೊಂಡೆ ಎಂದು ಶಿವನಾಥ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ