Mother Of The Day: ನೀರಿಗೆ ಹಾರಿದ ಮಗನ ಒಂದೇ ಕೈಯಲ್ಲಿ ರಕ್ಷಿಸಿದ ತಾಯಿ

By Anusha Kb  |  First Published May 4, 2022, 10:21 AM IST
  • ಮಗುವನ್ನು ರಕ್ಷಿಸಿದ ತಾಯಿ
  • ನೀರಿಗೆ ಹಾರಿದ ಮಗು
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
     

ಈಜುಕೊಳದಂತೆ ಕಾಣುವ ನೀರಿನ ಹೊಂಡಕ್ಕೆ ಮಗುವೊಂದು ಧುಮುಕಲು ಯತ್ನಿಸಿದ್ದು, ಕೂಡಲೇ ಅಲ್ಲಿಗೆ ಓಡಿ ಬಂದ ಆತನ ಅಮ್ಮ ಕ್ಷಣದಲ್ಲೇ ಕೇವಲ ಒಂದು ಕೈಯಲ್ಲಿ ಆತನ ರಕ್ಷಣೆ ಮಾಡಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಾಯಿಯ ಈ ರಕ್ಷಣಾ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಮಗುವೊಂದು ನೋಡು ನೋಡುತ್ತಿದ್ದಂತೆ ಕೊಳಕ್ಕೆ ಧುಮುಕುತ್ತದೆ. ಕೂಡಲೇ ಓಡಿ ಬಂದ ತಾಯಿ ಕ್ಷಣದಲ್ಲೇ ಆತನ ರಕ್ಷಣೆ ಮಾಡುತ್ತಾಳೆ. ಒಂದೇ ಕೈಯಲ್ಲಿ ಮಗನ ಟೀ ಶರ್ಟ್‌ ಹಿಡಿದು ಆಕೆ ಮಗುವನ್ನು ಮೇಲೆತ್ತುತ್ತಾಳೆ. ಹಂಚಿಕೊಂಡಾಗಿನಿಂದ, ವೀಡಿಯೊ ಬಿರುಗಾಳಿಯಿಂದ ಇಂಟರ್ನೆಟ್ ಅನ್ನು ತೆಗೆದುಕೊಂಡಿದೆ. ಇದು 477,000 ವೀಕ್ಷಣೆಗಳು ಮತ್ತು ಸಾವಿರಾರು ಇಷ್ಟಗಳನ್ನು ಗಳಿಸಿದೆ. ಕೆಲವು ಇಂಟರ್ನೆಟ್ ಬಳಕೆದಾರರು ಮಹಿಳೆಯನ್ನು "ಸೂಪರ್ ಮಾಮ್" ಎಂದು ಶ್ಲಾಘಿಸಿದರೆ, ಇತರರು ಅಮ್ಮನ ಪ್ರತಿವರ್ತನವು ದಿನವನ್ನು ಉಳಿಸಿದಾಗ ಇದೇ ರೀತಿಯ ನಿದರ್ಶನಗಳನ್ನು ಹಂಚಿಕೊಂಡಿದ್ದಾರೆ.

Mother of the year!👏 pic.twitter.com/TIXn8P85gx

— Figen (@TheFigen)

Tap to resize

Latest Videos

ಇದು ಮೂಢ ನಂಬಿಕೆ ಅಲ್ಲ, ಆದರೆ ತಮ್ಮ ಮಕ್ಕಳ ರಕ್ಷಣೆ ವಿಚಾರಕ್ಕೆ ಬಂದಾಗ ಪ್ರತಿಯೊಬ್ಬ ತಾಯಿಯೂ ಅಪಾರವಾದ ಅತ್ಯದ್ಬುತವಾದ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಸ್ಪೈಡರ್‌ ಮ್ಯಾನ್‌ಗೂ ಈ ರೀತಿ ಮಗುವಿನ ರಕ್ಷಣೆ ಮಾಡಲಾಗುತ್ತಿರಲಿಲ್ಲ ಎಂದು ಒಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.

brave mother: ಚಿರತೆಯೊಂದಿಗೆ ಹೋರಾಡಿ ಮಗುವನ್ನು ರಕ್ಷಿಸಿದ ಸಾಹಸಿ ತಾಯಿ

ಕೆಲ ದಿನಗಳ ಹಿಂದೆ ತಾಯಿಯೊಬ್ಬರು ತನ್ನ ಮಗನನ್ನು ಕ್ಷಣದಲ್ಲಿ ಟ್ರಕ್ ಅಡಿಯಿಂದ ರಕ್ಷಿಸುವ ಮೂಲಕ ಸುದ್ದಿಯಾಗಿದ್ದರು. ಇಂಗ್ಲೆಂಡ್ ಕ್ರಿಕೆಟಿಗ ಜೋಫ್ರಾ ಆರ್ಚರ್ ಈ ವಿಡಿಯೋಗೆ ಪ್ರತಿಕ್ರಿಯಿಸುವ ಮೂಲಕ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೊ ಮತ್ತೆ ವೈರಲ್ ಆಗಿತ್ತು. ವೀಡಿಯೊದಲ್ಲಿ ಕಾಣಿಸುವಂತೆ ಮೂವರು ಮೋಟಾರು ಸೈಕಲ್‌ನಲ್ಲಿ  ಪ್ರಯಾಣಿಸುತ್ತಿದ್ದಾಗ ಅಪಘಾತವಾಗಿದ್ದು, ತಾಯಿ ಮಗ ಇಬ್ಬರು ಟ್ರಕ್ ಬರುತ್ತಿದ್ದ ದಾರಿಗೆ ಉರುಳಿದ್ದಾರೆ. ಕೂಡಲೇ ತಾಯಿ ಮಗುವನ್ನು ಕ್ಷಣದಲ್ಲಿ ತನ್ನತ್ತ ಎಳೆದುಕೊಂಡು ಟ್ರಕ್‌ ಕೆಳಗೆ ಸಿಕ್ಕಿಕೊಳ್ಳುವುದರಿಂದ ತಪ್ಪಿಸಿದ್ದಾಳೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಾಹಸಿ ತಾಯಿಯೊಬ್ಬಳು ತನ್ನ ಮಗುವನ್ನು ರಕ್ಷಿಸಿಕೊಳ್ಳುವ ಸಲುವಾಗಿ ಚಿರತೆಯೊಂದಿಗೆ ಕಾದಾಡಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿತ್ತು. ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿರುವ ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನ(Sanjay Gandhi National Park)ದ ಸಮೀಪದಲ್ಲಿರುವ ಹಳ್ಳಿಯೊಂದರಲ್ಲಿ ಈ ಸಾಹಸಿ ಘಟನೆ ನಡೆದಿತ್ತು. ಬೈಗಾ ಆದಿವಾಸಿ( tribal) ಸಮುದಾಯದ ಕಿರಣ್‌ ಬೈಗಾ(Kiran Baiga) ಎಂಬಾಕೆಯೇ ಹೀಗೆ ಚಿರತೆಯನ್ನು ಕಿಲೋ ಮೀಟರ್‌ವರೆಗೆ ಹಿಂಬಾಲಿಸಿ ಮಗುವನ್ನು ರಕ್ಷಿಸಿದ ಧೈರ್ಯವಂತ ಮಹಿಳೆ. ಭಾನುವಾರ ಸಂಜೆ ಇವರು ತಮ್ಮ  ಮೂವರು ಮಕ್ಕಳೊಂದಿಗೆ ಮನೆಯ ಮುಂಭಾಗದಲ್ಲಿ ಬೆಂಕಿ ಹಾಕಿ ಅದರ ಮುಂದೆ ಚಳಿ ಕಾಯಿಸುತ್ತ ಕುಳಿತಿದ್ದರು. ಈ ವೇಳೆ ಧುತ್ತನೇ ಬಂದ ಚಿರತೆಯೊಂದು ಇವರೊಂದಿಗೆ ಕುಳಿತಿದ್ದ ಕಿರಣ್‌ಳ 8 ವರ್ಷದ ಮಗು ರಾಹುಲ್‌(Rahul )ನನ್ನು ಬಾಯಿಯಲ್ಲಿ ಕಚ್ಚಿ ಹೊತ್ತೊಯ್ದಿತ್ತು.

ಪುಟ್ಟ ಕಂದನ ಜೀವ ಉಳಿಸುವ 16 ಕೋಟಿ ಮದ್ದಿಗೆ ತೆರಿಗೆ ರದ್ದು!

ಮಗುವನ್ನು ಹೊತ್ತೊಯ್ದು ಕಿಲೋ ಮೀಟರ್‌ವರೆಗೆ ಸಾಗಿದ ಚಿರತೆ ಕಾಡಿನ ಮಧ್ಯದಲ್ಲಿ ಮಗುವನ್ನು ತನ್ನ ಬಲಿಷ್ಠವಾದ ಉಗುರುಗಳಲ್ಲಿ ಹಿಡಿದುಕೊಂಡು ನಿಂತಿದೆ. ಈ ವೇಳೆ ಧೈರ್ಯದಿಂದ ಚಿರತೆಯತ್ತ ಮುನ್ನುಗಿದ್ದ ತಾಯಿ ಕಿರಣ್‌, ಅದರೊಂದಿಗೆ ಕಾದಾಡಿ ಮಗುವನ್ನು ಚಿರತೆಯಿಂದ ಬಿಡಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. 

click me!