ಬೋಕೋ ಉಗ್ರರಿಂದ 100 ರೈತರ ನರಮೇಧ!

By Suvarna NewsFirst Published Dec 1, 2020, 8:57 AM IST
Highlights

 ನೈಜೀರಿಯಾದಲ್ಲಿ ಬೊಕೋಹರಾಮ್‌ ಉಗ್ರಗಾಮಿ ಸಂಘಟನೆ ರೈತರ ಮೇಲೆ ನಡೆಸಿದ ಭೀಕರ ದಾಳಿ| ದಾಳಿಯಲ್ಲಿ 110 ಮಂದಿ ರೈತರು ಸಾವು

ಅಬುಜಾ(ಡಿ.01): ನೈಜೀರಿಯಾದಲ್ಲಿ ಬೊಕೋಹರಾಮ್‌ ಉಗ್ರಗಾಮಿ ಸಂಘಟನೆ ರೈತರ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ 110 ಮಂದಿ ಸಾವಿಗೀಡಾಗಿದ್ದಾರೆ. ದಾಳಿಯಲ್ಲಿ ಹತ್ಯೆಯಾದವರ ಪೈಕಿ 30 ಜನರ ಶಿರಚ್ಛೇದ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

'ದೆಹಲಿ ಬಿಟ್ಟು ಕದಲಲ್ಲ, ನಿರ್ಣಾಯಕ ಸಮರಕ್ಕೆಂದೇ ರಾಜಧಾನಿಗೆ ಬಂದಿದ್ದೇವೆ'

ಈಶಾನ್ಯ ನೈಜೀರಿಯಾದ ಬೊರ್ನೊ ರಾಜ್ಯದ ಮೈದುಗುರಿ ಎಂಬ ಪ್ರಾಂತ್ಯದಲ್ಲಿ ಶನಿವಾರ ಹಾಗೂ ಭಾನುವಾರದಂದು ಈ ಭೀಕರ ನರಮೇಧ ನಡೆದಿದೆ. ಬೈಕ್‌ಗಳಲ್ಲಿ ಬಂದ ಬೊಕೋಹರಾಮ್‌ ಉಗ್ರರು ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಕೃಷಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ ಎಂದು ನೈಜೀರಿಯಾದಲ್ಲಿರುವ ವಿಶ್ವ ಸಂಸ್ಥೆಯ ಪ್ರತಿನಿಧಿ ಎಡ್ವರ್ಡ್‌ ಕಲ್ಲೋನ್‌ ಮಾಹಿತಿ ನೀಡಿದ್ದಾರೆ.

ಕೃಷಿ ಮಂಡಿ ರದ್ದು ಮಾಡಿಲ್ಲ, ಬೆಂಬಲ ಬೆಲೆಯೂ ನಿಂತಿಲ್ಲ: ರೈತರಿಗೆ ಮೋದಿ ಅಭಯ!

ನೈಜೀರಿಯಾದಲ್ಲಿ ಬೊಕೋ ಹರಾಮ್‌ ಹಾಗೂ ಪಶ್ಚಿಮ ಆಫ್ರಿಕಾದ ಇಸ್ಲಾಮಿಕ್‌ ಸ್ಟೇಟ್‌ ಉಗ್ರಗಾಮಿ ಸಂಘಟನೆಗಳು ನಿರಂತರವಾಗಿ ದಾಳಿ ನಡೆಸುತ್ತಿವೆ. ಈ ಎರಡು ಸಂಘಟನೆಗಳ ದಾಳಿಗೆ ಕಳೆದೊಂದು ದಶಕದಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

click me!