
ಫ್ರಾನ್ಸ್ (ಜೂ.16) ಭಾರತ ಹಾಗೂ ಅಮೆರಿಕ ಸಂಬಂಧ ಕಳೆದೊಂದು ವರ್ಷದಲ್ಲಿ ತೀರಾ ಉತ್ತಮವಾಗಿ ಏನೂ ಇಲ್ಲ. ರಷ್ಯಾ ತೈಲ ಖರೀದಿ ಹೆಸರಲ್ಲಿ ಭಾರತದ ಮೇಲೆ ಹೆಚ್ಚುವರಿ ತೆರಿಗೆ, ಹೊರ್ಮುಜ್‌ನಲ್ಲಿ ಭಾರತದ ತೈಲ ಟ್ಯಾಂಕರ್ ಮೇಲೆ ಅಮೆರಿಕ ದಾಳಿ, ಭಾರತೀಯ ನಾವಿಕರ ಸಾವು ಸೇರಿದಂತೆ ಹಲವು ಘಟನೆಗಳಿಂದ ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧ ಅಷ್ಟಕಷ್ಟೆ. ಈ ಪರಿಸ್ಥಿತಿಯಲ್ಲಿ ಇದೀಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭೇಟಿಯಾಗಿದ್ದಾರೆ. ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಮೋದಿ ಹಾಗೂ ಟ್ರಂಪ್ ಹ್ಯಾಂಡ್‌ಶೇಕ್ ಮಾಡಿ ಮಾತನಾಡಿದ್ದಾರೆ. ಬರೋಬ್ಬರಿ 16 ತಿಂಗಳ ಬಳಿಕ ಉಭಯ ನಾಯಕರ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಪ್ರಮುಖವಾಗಿ ಹ್ಯಾಂಡ್‌ಶೇಕ್ ಇದೀಗ ಚರ್ಚೆಗೆ ಕಾರಣಾಗಿದೆ.
ಜಿ7 ಶೃಂಗಸಭೆಯ ವೇದಿಕೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್ ಸಿಕ್ಕಾಗ ಪರಸ್ಪರ ಅತ್ಯಂತ ಆತ್ಮೀಯವಾಗಿ ಕೈಕುಲುಕುವ ಮೂಲಕ ಆಪ್ತತೆ ಪ್ರದರ್ಶಿಸಿದರು. ಪ್ರತಿ ಭಾರಿ ಮೋದಿ ಟ್ಕಂಪ್ ಭೇಟಿಯಾದಾಗ ಆಲಿಂಗ ಮಾಡುತ್ತಿದ್ದರು. ಹಗ್ ಮಾಡಿ ಉಭಯ ನಾಯಕರು ಮಾತನಾಡುತ್ತಿದ್ದರು. ಆಧರೆ ಸಂಬಂಧ ಹಳಸಿದ ಕಾರಣ ಈ ಬಾರಿಯ ಭೇಟಿ ಹ್ಯಾಂಡ್‌ಶೇಕ್‌ಗೆ ಸೀಮಿತವಾಯಿತಾ ಅನ್ನೋ ಪ್ರಶ್ನೆಗಳು ಎದ್ದಿದೆ. ಮೋದಿ ಪ್ರಮುಖ ನಾಯಕರ ಭೇಟಿಯಲ್ಲಿ ಆಲಿಂಘನ ಮಾಡುವುದೇ ವಾಡಿಕೆಯಾಗಿತ್ತು. ಇದೀಗ ಹಸ್ತಲಾಘವ ದ್ವಿಪಕ್ಷೀಯ ಸಂಬಂಧದ ಬಗ್ಗೆ ತೀವ್ರ ಚರ್ಟೆ ಹುಟ್ಟುಹಾಕಿದೆ. ಕಳೆದ ವರ್ಷ ಜನವರಿಯಲ್ಲಿ ಉಭಯ ನಾಯಕರು ಭೇಟಿಯಾಗಿದ್ದರು. ಇದೀಗ ಬರೋಬ್ಬರಿ 16 ತಿಂಗಳ ಸುದೀರ್ಘ ಅವಧಿಯ ನಂತರ ಉಭಯ ನಾಯಕರು ಒಂದೇ ವೇದಿಕೆಯಲ್ಲಿ ಭೇಟಿಯಾಗಿದ್ದಾರೆ.
ಜಾಗತಿಕ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಸವಾಲುಗಳ ಮಧ್ಯೆ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಈ ಜಿ7 ಶೃಂಗಸಭೆಯು ಅತ್ಯಂತ ಪ್ರಮುಖವಾಗಿದೆ. ಇಂತಹ ವೇದಿಕೆಯಲ್ಲಿ ಭಾರತ ಮತ್ತು ಅಮೆರಿಕದ ಉನ್ನತ ನಾಯಕರ ಈ ಭೇಟಿಯು ಮುಂಬರುವ ದಿನಗಳಲ್ಲಿ ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ, ರಕ್ಷಣೆ ಮತ್ತು ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮುನ್ಸೂಚನೆ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಉಭಯ ನಾಯಕರು ಕೈಕುಲುಕುತ್ತಿರುವ ಮತ್ತು ಪರಸ್ಪರ ಮಾತನಾಡುತ್ತಿರುವ ದೃಶ್ಯಗಳ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ