ಜಾಗತಿಕ ದುರಂತವನ್ನು ಮೋದಿ ತಪ್ಪಿಸಿದರು: ಅಮೆರಿಕ ಪ್ರಶಂಸೆ

By Kannadaprabha News  |  First Published Dec 19, 2022, 7:03 AM IST
  • ಯುದ್ಧ ವಿಷಯದಲ್ಲಿ ಮೋದಿ ಅವರು ಆರಂಭದಿಂದಲೂ ಅಭಿಪ್ರಾಯ ವ್ಯಕ್ತಪಡಿಸಿದರು
  • ಇದು ಉಕ್ರೇನ್‌ ಮೇಲೆ ಯುದ್ಧ ಸಾರಿದ್ದ ರಷ್ಯಾ ಮೇಲೆ ಸಾಕಷ್ಟು ಪರಿಣಾಮ ಬೀರಿತು
  • ಉಕ್ರೇನ್‌ ಮೇಲೆ ರಷ್ಯಾ ಇನ್ನಷ್ಟು ದೊಡ್ಡ ದಾಳಿ ನಡೆಸುವುದನ್ನು ಇದು ತಪ್ಪಿಸಿರಬಹುದು
  • ಭಾರತದ ವಿದೇಶಾಂಗ ನೀತಿ ಬಗ್ಗೆ ಮತ್ತೊಮ್ಮೆ ಅಮೆರಿಕದಿಂದ ಮುಕ್ತಕಂಠದ ಪ್ರಶಂಸೆ
     

ವಾಷಿಂಗ್ಟನ್‌: ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರದ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಮುಕ್ತ ಕಂಠದಿಂದ ಶ್ಲಾಘಿಸಿರುವ ಅಮೆರಿಕ, ‘ರಷ್ಯಾ-ಉಕ್ರೇನ್‌ ಯುದ್ಧದ ವಿಷಯದಲ್ಲಿ ಮೋದಿ ಜಾಗತಿಕ ದುರಂತವನ್ನು ತಪ್ಪಿಸಿದರು’ ಎಂದು ಹೇಳಿದೆ. ಯುದ್ಧದ ವಿಷಯದಲ್ಲಿ ಪ್ರಧಾನಿ ಮೋದಿ ಆರಂಭದಿಂದಲೂ ವ್ಯಕ್ತಪಡಿಸುತ್ತಾ ಬಂದ ಅಭಿಪ್ರಾಯವು ರಷ್ಯಾದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಅಣ್ವಸ್ತ್ರಗಳನ್ನು ಬಳಸುವುದರ ವಿರುದ್ಧವೂ ಮೋದಿ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಉಕ್ರೇನ್‌ ಮೇಲೆ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ರಷ್ಯಾ ದಾಳಿ ನಡೆಸುವುದನ್ನು ತಪ್ಪಿಸಿರುವ ಸಾಧ್ಯತೆಯಿದೆ ಎಂದು ಅಮೆರಿಕದ ಗುಪ್ತಚರ ದಳ ಸಿಐಎ ಮುಖ್ಯಸ್ಥ ಬಿಲ್‌ ಬನ್ಸ್‌ರ್‍ ಹೇಳಿದ್ದಾರೆ. ಪ್ರಧಾನಿ ಮೋದಿ ಜೊತೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕೂಡ ಅಣ್ವಸ್ತ್ರಗಳ ಬಳಕೆ ವಿರುದ್ಧ ಮಾತನಾಡಿದ್ದರು. ಅದೂ ಕೂಡ ಪ್ರಯೋಜನಕ್ಕೆ ಬಂದಿದೆ ಎಂದು ಬನ್ಸ್‌ರ್‍ ಅಭಿಪ್ರಾಯಪಟ್ಟಿದ್ದಾರೆ.

ಇದು ಯುದ್ಧದ ಕಾಲವಲ್ಲ ಎಂದಿದ್ದ ಮೋದಿ:

Tap to resize

Latest Videos

‘ಉಕ್ರೇನ್‌ (Ukraine) ಮೇಲೆ ರಷ್ಯಾ (Russia)ಯುದ್ಧ ಸಾರಿದ ದಿನದಿಂದಲೂ ‘ಇದು ಯುದ್ಧದ (war time)ಕಾಲವಲ್ಲ’ ಎಂದು ಪ್ರಧಾನಿ ಮೋದಿ (Narendra Modi) ಹೇಳುತ್ತಲೇ ಬಂದಿದ್ದರು. ಜೊತೆಗೆ, ಸ್ವತಃ ರಷ್ಯಾ ಅಧ್ಯಕ್ಷ (Russian President)ವ್ಲಾದಿಮಿರ್‌ ಪುಟಿನ್‌ಗೆ (Vladimir Putin)ಕರೆ ಮಾಡಿ ಯುದ್ಧದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಉಜ್ಬೇಕಿಸ್ತಾನದಲ್ಲಿ ನಡೆದ ಶಾಂಘೈ ಶೃಂಗದಲ್ಲೂ ಯುದ್ಧದ ತೀವ್ರತೆಗೆ ಕಡಿವಾಣ ಹಾಕಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರಯತ್ನಿಸಿದ್ದರು. ರಷ್ಯಾ ಕೂಡ ಕೆಲ ಸಂದರ್ಭಗಳಲ್ಲಿ ಮೋದಿಯವರ ನಿಲುವನ್ನು ಮೆಚ್ಚಿಕೊಂಡಿತ್ತು. ಇವೆಲ್ಲ ಪ್ರಯತ್ನಗಳು ಒಟ್ಟಾಗಿ ಯುದ್ಧದ ತೀವ್ರತೆಯನ್ನು ಕಡಿಮೆ ಮಾಡಿವೆ’ ಎಂಬರ್ಥದಲ್ಲಿ ಸಿಐಎ ಮುಖ್ಯಸ್ಥರು ಮಾತನಾಡಿದ್ದಾರೆ.

8 ವರ್ಷಗಳಲ್ಲಿ ಅಶಾಂತಿ, ಭ್ರಷ್ಟಾಚಾರಕ್ಕೆ ರೆಡ್ ಕಾರ್ಡ್ ನೀಡಿದ್ದೇವೆ: ಪ್ರಧಾನಿ ಮೋದಿ

ಉಜ್ಬೇಕಿಸ್ತಾನದಲ್ಲಿ ಮೋದಿ ಮಾತಿಗೆ ಮನ್ನಣೆ ನೀಡಿದ ಪುಟಿನ್‌, ‘ನನಗೆ ನಿಮ್ಮ ಕಳಕಳಿ ಅರ್ಥವಾಗುತ್ತದೆ. ಉಕ್ರೇನ್‌ ಸಂಘರ್ಷದಲ್ಲಿ ನಿಮ್ಮ ನಿಲುವೇನು ಎಂಬುದು ನನಗೆ ಗೊತ್ತಿದೆ. ನಾವು ಕೂಡ ಇದೆಲ್ಲವೂ ಆದಷ್ಟು ಬೇಗ ಮುಗಿಯಲಿ ಎಂದು ಬಯಸುತ್ತಿದ್ದೇವೆ’ ಎಂದು ಹೇಳಿದ್ದರು.

ರಷ್ಯಾ ಅಧ್ಯಕ್ಷ ಪುಟಿನ್‌ ಜೊತೆ ಪ್ರಧಾನಿ ಮೋದಿ ಮಾತುಕತೆ!

click me!