
ನೈರೋಬಿ (ಫೆ.26) ಭಾರತದಲ್ಲಿ ಭಗವದ್ಗೀತೆಯನ್ನು ಶಾಲೆಗಳ ಬೋಧಿಸಬೇಕು ಅನ್ನೋ ಹೇಳಿಕೆ ಕಳೆದ ಕೆಲ ವರ್ಷಗಳಲ್ಲಿ ಭಾರಿ ವಿವಾದಕ್ಕೆ ಗುರಿಯಾಗಿದೆ. ಸಂಸ್ಕೃತ ಅಧ್ಯಯನ, ಹಿಂದೂ ಅನ್ನೋ ಪದ ಭಾರತದಲ್ಲಿ ವಿವಾದಾತ್ಮಕವಾಗಿ ಮಾರ್ಪಟ್ಟಿದೆ. ಆದರೆ ವಿದೇಶಿಗರು ಹೆಮ್ಮೆಯಿಂದ ಭಾರತದ ಧರ್ಮ, ಭಾಷೆ, ಸಂಸ್ಕೃತಿಗಳನ್ನು ಅನುಸರಿಸುತ್ತಿದ್ದಾರೆ. ಇದೀಗ ವಿದೇಶಗಳ ಹಲವು ಅಸೆಂಬ್ಲಿ, ಸಂಸತ್ತುಗಳಲ್ಲಿ ಭಾರತೀಯತೆ ಎದ್ದು ಕಾಣುತ್ತಿದೆ. ಇತ್ತೀಚಿನ ಸೇರ್ಪಡೆ ಎಂದರೆ ಕೀನಾಯ ಯುವ ಅಸೆಂಬ್ಲಿಯಲ್ಲಿ ನಡೆದ ಘಟನೆ. ಕೀನಾಯದ ಯುವ ಅಸೆಂಬ್ಲಿ ಮೊಂಬಾಸಾದಲ್ಲಿ ಕೀನ್ಯಾದ ಜನಪ್ರಿಯ ಹಾಗೂ ಯುವ ನಾಯಕ ಕೆಲ್ಲಿ ಕಲೆಬ್ ಪ್ರಮಾಣವಚನ ಸ್ವೀಕಾರ ಇದೀಗ ವಿಶ್ವದಲ್ಲೇ ಭಾರಿ ಸಂಚಲನ ಸೃಷ್ಟಿಸಿದೆ. ಕಾರಣ ಕೆಲ್ಲಿ ಕಲೆಬ್ ಪ್ರಮಾಣವಚನ ಸ್ವೀಕರಿಸಿದ್ದು ಭಗವದ್ಗೀತೆ ಮೇಲೆ.
ಕೆಲ್ಲಿ ಕಲೆಬ್ ನಾನು ಭಗವವದ್ಗೀತೆ ಮೇಲೆ ಪ್ರಮಾಣವಚನ ಸ್ವೀಕರಿಸುತ್ತಿದ್ದೇನೆ ಎಂದು ವಚನ ಸಮಾರಂಭದಲ್ಲಿ ಹೇಳಿಲ್ಲ, ಬದಲಾಗಿ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು ಕೀನಾಯ ಮೊಂಬಾಸಾ ಯುವ ಅಸೆಂಬ್ಲಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವಿಶೇಷ ಕ್ಷಣಕ್ಕೆ ಮೊಂಬಾಸಾ ಯುವ ಅಸೆಂಬ್ಲಿ ಸಾಕ್ಷಿಯಾಗಿದೆ.
ಫೆಬ್ರವರಿ 14ರಂದು ಯುವ ನಾಯಕ ಕೆಲ್ಲಿ ಕಲೆಬ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೆಲ್ಲಿ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ ಕೀನಾಯ ಅಸೆಂಬ್ಲಿ ಸದಸ್ಯರು ಕೆಲ್ಲಿ ಕಲೆಬ್‌ಗೆ ಗೌರವ ಸಲ್ಲಿಸಿದ್ದಾರೆ. ಕೀನಾಯದ ಮೊಂಬಾಸಾ ಯುವ ಅಸೆಂಬ್ಲಿ ಭವಿಷ್ಯದ ನಾಯಕರು ದೇಶಕ್ಕೆ ನೀಡುವ ವೇದಿಕೆಯಾಗಿದೆ. ಇಲ್ಲಿ ಅನೌಪಚಾರಿಕ ಚರ್ಚೆಗಳು ನಡೆಯಲಿದೆ. ಯುವ ಅಸೆಂಬ್ಲಿಯಲ್ಲಿನ ಚರ್ಚೆಗಳು ಕೀನಾಯ ಅಸೆಂಬ್ಲಿಯಲ್ಲಿ ಪ್ರತಿಧ್ವನಿಸಿದ ಹಲವು ಸಂದರ್ಭಗಳೂ ಇವೆ. ಕೆಲ್ಲಿ ಕಲೆಬ್ ಕೀನಾಯದ ಯುವ ನಾಯಕನಾಗಿ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಇದೀಗ ಕೆಲ್ಲಿ ಕಲೆಬ್ ಭಾರತ ಮಾತ್ರವಲ್ಲ ವಿಶ್ವದಲ್ಲೇ ಪ್ರಮಾಣಚವನ ಮೂಲಕ ಭಾರಿ ಸದ್ದು ಮಾಡಿದ್ದಾರೆ.
ಕೆಲ್ಲಿ ಕಲೆಬ್ ಕೀನಾಯದ ಚೆಂಗಾಮ್ವೆ ಕ್ಷೇತ್ರದ ಯುವ ಶಾಸಕನಾಗಿ ಗುರುತಿಸಿಕೊಂಡಿದ್ದಾರೆ. ಈ ಕ್ಷೇತ್ರ ಗಂಜೋನಿ ವ್ಯಾಪ್ತಿಯಲ್ಲಿ ಬರಲಿದೆ. ವಿಶೇಷ ಅಂದರೆ ಇಲ್ಲಿ ಇಸ್ಕಾನ್ ಗಂಜೋನಿ ಘಟಕ ಕಾರ್ಯನಿರ್ವಹಿಸುತ್ತಿದೆ. ಕೆಲ್ಲಿ ಕಲೆಬ್ ಸಹೋದರನ ಮೂಲಕ ಕೆಲ್ಲಿ ಕಲೆಬ್ ಗಂಜೋನಿಯ ಇಸ್ಕಾನ್ ಘಟಕ ಸೇರಿಕೊಂಡಿದ್ದರು. 2021ರಲ್ಲಿ ಬೆಟರ್ ಯುು ಕ್ಲಬ್ ಅನ್ನೋ ವಿಶೇಷ ಅಭಿಯಾನವವನ್ನು ಕೀನಾಯದ ಮೊಂಬಾಸ ವ್ಯಾಪ್ತಿಯಲ್ಲಿ ಆರಂಭಿಸಲಾಗಿದೆ. ಈ ಅಭಿಯಾನದಡಿ ಭ್ರಾತೃತ್ವ, ಸಹೋದರತ್ವ, ಎಲ್ಲಾ ಧರ್ಮಗಳನ್ನು ಗೌರವಿಸುವ, ಪಾಲಿಸುವ ಹಾಗೂ ಅಗತ್ಯವಿರುವರಿಗೆ ನೆರವು ನೀಡುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ಹಲವರು ಇಸ್ಕಾನ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಸ್ಕಾನ್ ನೆರವಿನಲ್ಲಿ ವಿದ್ಯಾಭ್ಯಾಸ ಪೂರೈಸಿರುವ ಕೆಲ್ಲಿ ಕಲೆಬ್ ಇದೀಗ ಕೀನ್ಯಾ ಕೌಂಟಿ ಅಸೆಂಬ್ಲಿಯಲ್ಲಿ ಪ್ರಮಾಣಚನ ಸ್ವೀಕರಿಸಿ ಸರ್ಕಾರದ ಭಾಗವಾಗಿದ್ದಾರೆ. ಬೆಟರ್ ಯು ಕ್ಲಬ್ ಸಂಘಟನೆ ಹಾಗೂ ಅಭಿಯಾನದಲ್ಲಿ ಸಕ್ರೀಯವಾಗಿರುವ ಕೆಲ್ಲಿ ಕಲೆಬ್ ಸದಸ್ಯರ ಸಂಖ್ಯೆಯನ್ನು 180ಕ್ಕೆ ಏರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ