ಮಹಿಳೆಯರ ಶಿಕ್ಷಣಕ್ಕೆ ತಾಲಿಬಾನ್‌ ಷರತ್ತಿನ ಅನುಮತಿ!

By Kannadaprabha News  |  First Published Sep 13, 2021, 7:54 AM IST

* ಮಹಿಳೆಯರ ಶಿಕ್ಷಣದ ವಿಷಯದಲ್ಲಿ ಕಠಿಣ ನಿಲುವು

* ಮಹಿಳೆಯರ ಉನ್ನತ ಶಿಕ್ಷಣಕ್ಕೆ ತಾಲಿಬಾನ್‌ ಷರತ್ತಿನ ಅನುಮತಿ

* ಸಹ ಶಿಕ್ಷಣ ಇಲ್ಲ, ವಸ್ತ್ರ ಸಂಹಿತೆ ಅನ್ವಯ


ಕಾಬೂಲ್‌(ಸೆ.13): ಮಹಿಳೆಯರ ಶಿಕ್ಷಣದ ವಿಷಯದಲ್ಲಿ ಕಠಿಣ ನಿಲುವುಗಳನ್ನು ಹೊಂದಿರುವ ತಾಲಿಬಾನ್‌ ಉಗ್ರರು, ಮಹಿಳೆಯರ ಉನ್ನತ ಶಿಕ್ಷಣಕ್ಕೆ ಷರತ್ತಿನ ಅನುಮತಿ ನೀಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ತಾಲಿಬಾನ್‌ ಸರ್ಕಾರ, ಮುಂದಿನ ದಿನಗಳಲ್ಲೂ ದೇಶದ ಮಹಿಳೆಯರು ಸ್ನಾತಕೋತ್ತರ ಪದವಿ ಸೇರಿ ವಿವಿಗಳಲ್ಲಿ ಉನ್ನತ ಶಿಕ್ಷಣ ಪಡೆಯಬಹುದು. ಆದರೆ ತರಗತಿ ಕೊಠಡಿಗಳು ಯುವತಿ ಮತ್ತು ಯುವಕರಿಗೆ ಪ್ರತ್ಯೇಕವಾಗಿರುತ್ತವೆ. ಜೊತೆಗೆ ಇಸ್ಲಾಮಿಕ್‌ ವಸ್ತ್ರ ಸಂಹಿತೆ ಕಡ್ಡಾಯ ಎಂದು ತಾಲಿಬಾನ್‌ ಸರ್ಕಾರ ಸ್ಪಷ್ಟಪಡಿಸಿದೆ.

Tap to resize

Latest Videos

ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೊಸ ಶಿಕ್ಷಣ ನೀತಿ ಬಗ್ಗೆ ಮಾತನಾಡಿದ ನೂತನ ಶಿಕ್ಷಣ ಸಚಿವ ಅಬ್ದುಲ್‌ ಹಕ್ಕಾನಿ, ‘ತಾಲಿಬಾನ್‌ 20 ವರ್ಷಗಳ ಹಿಂದಕ್ಕೆ ಹೋಗಲು ಇಷ್ಟಪಡಲ್ಲ. ಹಾಗಾಗಿ ಮಹಿಳೆಯರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪುರುಷ ಮತ್ತು ಮಹಿಳೆಯರ ಸಹ ಶಿಕ್ಷಣಕ್ಕೆ ಅವಕಾಶ ನೀಡುವುದಿಲ್ಲ. ಮಹಿಳಾ ವಿದ್ಯಾರ್ಥಿಗಳು ಹಿಜಾಬ್‌(ಬುರ್ಖಾ) ಧರಿಸಬೇಕು ಎಂದು ಹೇಳಿದರು. ಆದರೆ ಇದು ಕೇವಲ ಶಿರಸ್ತಾ್ರಣವೋ ಅಥವಾ ಕಡ್ಡಾಯವಾಗಿ ಮುಖದ ಮೇಲಿನ ಹೊದಿಕೆಯೋ ಎಂಬುದನ್ನು ಹಕ್ಕಾನಿ ವಿವರಿಸಿಲ್ಲ.

1990ರ ದಶಕದಲ್ಲಿ ಆಫ್ಘನ್‌ನಲ್ಲಿ ಆಳ್ವಿಕೆ ನಡೆಸಿದ್ದ ತಾಲಿಬಾನ್‌ ಮಹಿಳೆಯರಿಗೆ ಶಿಕ್ಷಣವನ್ನು ನಿರಾಕರಿಸಿತ್ತು ಮತ್ತು ಸಾರ್ವಜನಿಕ ಜೀವನದಿಂದಲೂ ಹೊರಗಿಟ್ಟಿತ್ತು.

click me!