English Channel Tragedy: ಬೋಟ್ ಮಗುಚಿ 31 ವಲಸಿಗರು ಸಾವು

By Suvarna NewsFirst Published Nov 25, 2021, 2:36 PM IST
Highlights

ಇಂಗ್ಲಿಷ್ ಕಾಲುವೆಯಲ್ಲಿ(English Channel)  ವಲಸಿಗರ ಬೋಟ್ ಮಗುಚಿ ಕನಿಷ್ಠ  31 ಜನರು ಮೃತಪಟ್ಟಿದ್ದಾರೆ. ಇದು ಅತ್ಯಂತ ದೊಡ್ಡ ವಲಸಿಗರ ದುರಂತ ಎಂದು ಫ್ರಾನ್ಸ್(France) ಆಂತರಿಕ ಸಚಿವ ತಿಳಿಸಿದ್ದಾರೆ

ಕಲೈಸ್(ನ.25): ಕಡಿದಾಗಿರುವ ಅಪಾಯಕಾರಿ ಇಂಗ್ಲಿಷ್‌ ಕಾಲುವೆಯಲ್ಲಿ(English Channel)  ವಲಸಿಗರ ಬೋಟ್ ಮಗುಚಿ ಸುಮಾರು 31ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇಂಗ್ಲಿಷ್ ಕಾಲುವೆಯಲ್ಲಿ ಬೋಟ್(Boat) ಮುಗುಚಿದ್ದು ಇದು ಅತ್ಯಂತ ದೊಡ್ಡ ವಲಸಿಗರ (Migrant) ದುರಂತ ಎಂದು ಫ್ರಾನ್ಸ್‌ನ ಆಂತರಿಕ ಸಚಿವ ತಿಳಿಸಿದ್ದಾರೆ. ಆಂತರಿಕ ಸಚಿವ ಗೆರಾಲ್ಡ್ ಡರ್ಮನಿನ್ ಅವರು ಘಟನೆಯ ಬಗ್ಗೆ ಪ್ರತಿಕ್ರಿಯಿಸಿ, ಬೋಟ್‌ನಲ್ಲಿ ಸುಮಾರು ಜನರಿದ್ದರು ಎನ್ನಲಾಗಿದೆ. ಅಧಿಕಾರಿಗಳು  ಜನರ ಮೃತದೇಹ ಪತ್ತೆ ಹಚ್ಚಿದ್ದಾರೆ. ಇದರಲ್ಲಿ  ಮಹಿಳೆಯರು ಹಾಗೂ ಒಬ್ಬ ಯುವತಿ ಇದ್ದಳು. ಒಬ್ಬ ವ್ಯಕ್ತಿ ಕಾಣೆಯಾಗಿದ್ದು ಇನ್ನೂ ಪತ್ತೆ ಹಚ್ಚಿಲ್ಲ. ವಲಸಿಗ ಪ್ರಯಾಣಿಕರು ಯಾವ ದೇಶದವರೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ರಕ್ಷಣಾ ಕಾರ್ಯವನ್ನು ನಡೆಸಿದ ಪ್ರಾದೇಶಿಕ ಕಡಲ ಪ್ರಾಧಿಕಾರ 27 ಮೃತದೇಹ ಸಿಕ್ಕಿರುವುದಾಗಿ ತಿಳಿಸಿದೆ. ಇಬ್ಬರು ಬದುಕಿದ್ದು, ಉಳಿದ ನಾಲ್ವರು ನಾಪತ್ತೆಯಾಗಿರುವುದಾಗಿ ಶಂಕಿಸಲಾಗಿದೆ. ಸಂಖ್ಯೆಗಳಲ್ಲಿ ಕಂಡುಬಂದ ವ್ಯತ್ಯಾಸದ ಬಗ್ಗೆ ಸದ್ಯಕ್ಕೆ ಯಾವುದೇ ಸ್ಪಷ್ಟತೆ ಇಲ್ಲ.

War For Oil: ಬಲಾಢ್ಯ ದೇಶಗಳು ವರ್ಸಸ್‌ ಕೊಲ್ಲಿ ರಾಷ್ಟ್ರಗಳ ತೈಲಸಮರ!

ಅಫ್ಘಾನಿಸ್ತಾನ, ಸುಡಾನ್, ಇರಾಕ್, ಎರಿಟ್ರಿಯಾಗಳಂತಹ ದೇಶಗಳಲ್ಲಿ ಹೆಚ್ಚಿದ ಆಂತರಿಕ ಕಲಹ ಹಾಗೂ ಬಡತನದಿಂದಾಗಿ ಜನರು ಬ್ರಿಟನ್‌ನಲ್ಲಿ ಉತ್ತಮ ಜೀವನ ಪಡೆಯಲು ಅಪಾಯಕಾರಿ ಕಾಲುವೆಗಳ ಮೂಲಕ ಪ್ರಯಾಣಿಸುತ್ತಿದ್ದಾರೆ. ಚಿಕ್ಕ, ಕಡಿಮೆ ಗುಣಮಟ್ಟದ ಬೋಟ್‌ಗಳಲ್ಲಿ ಕಡಿದಾದ ಇಂಗ್ಲಿಷ್ ಕಾಲುವೆ ದಾಟುವುದು ಅತ್ಯಂತ ಅಪಾಯಕಾರಿ. ಹಾಗಿದ್ದರೂ ವಲಸಿಗರು ಜೀವ ಪಣಕ್ಕಿಟ್ಟು ಹೊಸ ಜೀವನದ ಆಸೆಯಲ್ಲಿ ಪ್ರಯಾಣಿಸುತ್ತಿರುತ್ತಾರೆ.

ಶೋಧ ಕಾರ್ಯದಲ್ಲಿ ಪಾಲ್ಗೊಳ್ಳಲು ಮೂರು ಹೆಲಿಕಾಪ್ಟರ್‌ಗಳು ಮತ್ತು ಮೂರು ಬೋಟ್‌ಗಳನ್ನು ನಿಯೋಜಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ವಲಸಿಗರು ಕಾಲುವೆಯನ್ನು ದಾಟಲು ಸಾಮೂಹಿಕವಾಗಿ ದೋಣಿಗಳನ್ನು ಬಳಸಲಾರಂಭಿಸಿದಾಗಿನಿಂದ 2018 ರಿಂದ ಈ ದುರಂತವು ಅತಿ ಹೆಚ್ಚು ಸಾವಿಗೆ ಕಾರಣವಾಗಿದೆ. ಉತ್ತರದ ಬಂದರು ನಗರವಾದ ಕ್ಯಾಲೈಸ್‌ನಲ್ಲಿ ದೋಣಿ ಮುಳುಗಿದೆ. ಉದ್ದನೆಯ ಗಾಳಿ ತುಂಬಿದ ದೋಣಿಯಲ್ಲಿ ಅಕ್ರಮವಾಗಿ ವಲಸಿಗರ ಪ್ರಯಾಣಕ್ಕೆ ನೇರವಾಗಿ ಸಂಬಂಧಿಸಿರುವ ಆರೋಪದ ಮೇಲೆ ನಾಲ್ವರು ಶಂಕಿತ ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ.

ಚಳಿಗಾಲವು ಸಮೀಪಿಸುತ್ತಿದ್ದಂತೆ ಸಮುದ್ರ ಒರಟಾಗುತ್ತವೆ. ನೀರು ತಣ್ಣಗಾಗುತ್ತದೆ. ಇನ್ನೂ ಹೆಚ್ಚಿನ ಜೀವಗಳನ್ನು ದುರಂತವಾಗಿ ಕಳೆದುಕೊಳ್ಳುವ ಅಪಾಯ ಹೆಚ್ಚಾಗುತ್ತದೆ ಎನ್ನಲಾಗಿದೆ. 1999 ರಿಂದ ಈ ಪ್ರದೇಶದಲ್ಲಿ 300 ಕ್ಕೂ ಹೆಚ್ಚು ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಇಂಗ್ಲೆಂಡ್‌ಗೆ ಪ್ರಯಾಣಿಸಲು ವಲಸಿಗರಿಗೆ 6,000 ಯುರೋಗಳಷ್ಟು ಅಂದರೆ ಐದು ಲಕ್ಷಕ್ಕೂ ಅಧಿಕ ವೆಚ್ಚವಾಗುತ್ತದೆ. ಕಳ್ಳಸಾಗಣೆದಾರರು ಒಟ್ಟು ಲಾಭದಲ್ಲಿ ಸುಮಾರು 3.4 ಮಿಲಿಯನ್ ಡಾಲರ್ ಅಂದರೆ ಕೋಟಿಗೂ ಅಧಿಕ ಹಣ ಸಂಪಾದಿಸಿದ್ದಾರೆ. ಬ್ರಿಟಿಷ್ ಅಧಿಕಾರಿಗಳ ಪ್ರಕಾರ ಈ ವರ್ಷ ಇಲ್ಲಿಯವರೆಗೆ 25,000 ಕ್ಕೂ ಹೆಚ್ಚು ಜನರು ಅಕ್ರಮವಾಗಿ ಆಗಮಿಸಿದ್ದಾರೆ. ಇದು 2020 ರಲ್ಲಿ ದಾಖಲಾದ ಅಂಕಿಅಂಶದ ಮೂರು ಪಟ್ಟು ಹೆಚ್ಚಿದೆ.

click me!