ಬೆವರುವಿಕೆ ಸರಿಪಡಿಸಲು ಸರ್ಜರಿ; 23 ವರ್ಷದ ಇನ್‌ಸ್ಟಾಗ್ರಾಂ ತಾರೆ ಸಾವು!

Published : Jul 15, 2021, 10:22 PM IST
ಬೆವರುವಿಕೆ ಸರಿಪಡಿಸಲು ಸರ್ಜರಿ; 23 ವರ್ಷದ ಇನ್‌ಸ್ಟಾಗ್ರಾಂ ತಾರೆ ಸಾವು!

ಸಾರಾಂಶ

ಅತೀಯಾದ ಬೆವರುವಿಕೆಯಿಂದ ಬೇಸತ್ತ ತಾರೆಯಿಂದ ಸರ್ಜರಿ ಚಿಕಿತ್ಸೆಯಲ್ಲಿ ಎಡವಟ್ಟು 23 ವರ್ಷದ ಇನ್‌ಸ್ಟಾಗ್ರಾಂ ತಾರೆ ಸಾವು ಬೆವರಿನ ಗ್ರಂಥಿಗಳನ್ನು ತೆಗೆಯಲು ಸರ್ಜರಿ, ಆರೋಗ್ಯದಲ್ಲಿ ಏರುಪೇರಾಗಿ ಸಾವು  

ಮೆಕ್ಸಿಕೋ(ಜು.15): ಪ್ರತಿಯೊಬ್ಬರ ದೇಹದಲ್ಲಿನ ಅಂಗಾಂಗ ಕಾರ್ಯನಿರ್ವಹಣೆ,  ಚಟುವಟಿಕೆಗಳು ಅವರ ಆರೋಗ್ಯ, ಹಾರ್ಮೋನ್‌ಗೆ ತಕ್ಕಂತೆ ಇರುತ್ತದೆ. ಸಹಜವಾಗಿರುವ ಈ ಹಾರ್ಮೋನ್‌, ಗ್ರಂಥಿಗಳನ್ನು ನಿಮಗೆ ಬೇಕಾದಂತೆ ಬದಲಾಯಿಸಲು ಹೊರಟರೆ ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ಮೆಕ್ಸಿಕೋದ ಬಾಡಿಬಿಲ್ಡರ್, ಇನ್‌ಸ್ಟಾಗ್ರಾಂ ತಾರೆ ಒಡಾಲಿಸ್ ಸ್ಯಾಂಟೊಸ್ ಮೆನಾ ಉದಾಹರಣೆ. ತನಗಿರುವ ಅತೀಯಾದ ಬೆವರುವಿಕೆಯನ್ನು ಸರಿಪಡಿಸಲು ಹೋದ ಒಡಾಲಿಸ್ ಸಾವನ್ನಪ್ಪಿದ್ದಾಳೆ.

 

ಅದೊಂದು ಸರ್ಜರಿ ಮಾಡಿಸಿಕೊಂಡಿದ್ದಕ್ಕೆ ಪ್ರಾಣವನ್ನೇ ಕಳಕೊಂಡ ಮೆಕ್ಸಿಕನ್ ಸುಂದರಿ!

23 ವರ್ಷದ ಒಡಾಲಿಸ್ ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ. ಸ್ವತಃ ಬಾಡಿ ಬಿಲ್ಡರ್ ಆಗಿರುವ ಒಡಾಲಿಸಾ ಬಾಡಿ ಬಿಲ್ಡಿಂಗ್ ಟಿಪ್ಸ್ ನೀಡುತ್ತಿದ್ದರು.  ಒಡಾಲಿಸ್ ಮಾತನ್ನು ಮೆಕ್ಸಿಕೋದಲ್ಲಿ ಜನ ಚಾಚು ತಪ್ಪದೆ ಪಾಲಿಸುತ್ತಿದ್ದರು. ಆದರೆ ಈಕೆಗೆ ಕಂಕುಳದಲ್ಲಿ ಅತೀಯಾದ ಬೆವರುವಿಕೆಯಾಗುತ್ತಿತ್ತು. ಇದರಿಂದ ಹಲವು ಬಾರಿ ಮುಜುಗರಕ್ಕೂ ಒಳಗಾಗಿದ್ದಾಳೆ. ಈ ಬೆವರುವಿಕೆಯನ್ನು ಸರಿಪಡಿಸಲು ಸರ್ಜರಿ ಮಾಡಿಸಿದ್ದಾಳೆ. ಸರ್ಜರಿ ಮಾಡಿದ 7 ದಿನಕ್ಕೆ ಒಡಾಲಿಸ್ ಸಾವನ್ನಪ್ಪಿದ್ದಾಳೆ.

 

ಮಿರಾಡ್ರೈ ಎಂಬ ಕಂಕುಳ ಬೆವರುವಿಕೆಯನ್ನು ಕಡಿಮೆ ಮಾಡುವ ಚಿಕಿತ್ಸೆಯನ್ನು ಮೆಕ್ಸಿಕೋದ ಗ್ವಾಡಲಜರಾದ ಸ್ಕಿನ್‌ಪೀಲ್ ಕ್ಲೀನಿಕ್ ಮಾಡುತ್ತಿದೆ. ಈ ಚಿಕಿತ್ಸೆಗೆ ಒಡಾಸಿಲ್ ಅವರ ಅನುಮತಿ ಮೇರೆಗೆ ಸೇರಿಸಲಾಗಿತ್ತು. ಈ ಸರ್ಜರಿಯಲ್ಲಿ ಶಾಖ ಶಕ್ತಿಯನ್ನು ಬಳಸಿಕೊಂಡು ಕಂಕುಳ ಕೆಳಗಿನ ಬೆವರು ಗ್ರಂಥಿಯನ್ನು ತೆಗೆದು ಹಾಕಲಾಗುತ್ತದೆ. ಈ ಚಿಕಿಕ್ಸೆ ದೇಹದ ಬೆವರು,  ವಾಸನೆ ಹಾಗೂ ಕಂಕುಳ ಕೆಳಗಿನ ಕೂದಲನ್ನು ಕಡಿಮೆ ಮಾಡಲಿದೆ.

ಸುಂದರಿಯಾಗಲು 2 ವರ್ಷದಲ್ಲಿ 20 ಸರ್ಜರಿ: 22ರ ಯುವತಿ ಮುಖವೀಗ ವಿಕಾರ!

ಅರಿವಳಿಕೆ ಮದ್ದು ನೀಡಿ ಈ ಚಿಕಿತ್ಸೆ ಮಾಡಲಾಗುತ್ತದೆ. ಆದರೆ ಚಿಕಿತ್ಸೆ ಬೆನ್ನಲ್ಲೇ ಹೃದಯಾಘಾತಕ್ಕೊಳಗಾದ ಒಡಾಲಿಸ್ ಸಾವನ್ನಪ್ಪಿದ್ದಾಳೆ. ಇದೀಗ ಮೆಕ್ಸಿಕೋ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬೆವರುವಿಕೆ ಗ್ರಂಥಿಗಳನ್ನು ತೆಗೆದ ಕಾರಣ ಅಥವಾ ಕೆಲಸಕ್ಕಾಗಿ ತರಬೇತಿ ಪಡೆಯದ ವ್ಯಕ್ತಿಯಿಂದ ಅರಿವಳಿಕೆ ನೀಡುವುದರಿಂದ ಓಡಾಲಿಸ್ ಸಾವು ಸಂಭವಿಸಿರಹುದು ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ