ಪಾಕಿಸ್ತಾನಕ್ಕೆ ತಿರುಗುಬಾಣ; ಉಗ್ರರ ದಾಳಿಯಲ್ಲಿ ಪಾಕ್ ಸೇನಾ ಕ್ಯಾಪ್ಟನ್, 11 ಯೋಧರು ಹತ್ಯೆ!

By Suvarna News  |  First Published Jul 13, 2021, 8:23 PM IST
  • ಉಗ್ರರ ಸಾಕಿ ಸಲಹುತ್ತಿರುವ ಪಾಕಿಸ್ತಾನಕ್ಕೆ ತಿರುಗುಬಾಣ
  • ಪಾಕ್ ಸೇನೆ ಮೇಲೆ ಉಗ್ರರ ದಾಳಿ, ಕ್ಯಾಪ್ಟನ್ ಸೇರಿ 12 ಯೋಧರು ಹುತಾತ್ಮ
  • ಕೆಲ ಯೋಧರನ್ನು ಒತ್ತೆಯಾಳಾಗಿ ಇರಿಸಿಕೊಂಡ ಉಗ್ರರ ತಂಡ

ಪಾಕಿಸ್ತಾನ(ಜು.13): ಭಾರತದ ವಿರುದ್ಧ ತನ್ನ ಕಾರ್ಯಸಾಧನೆಗೆ ಉಗ್ರರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಉಗ್ರರ ಸಾಕಿ ಸಲಹಿದ ಪಾಕಿಸ್ತಾನಕ್ಕೆ ಇದೀಗ ತಿರುಗುಬಾಣವಾಗಿದೆ. ಪಾಕಿಸ್ತಾನದ ಪಕ್ತಾಂಕ್ವಾ ಖೈಬರ್ ಪ್ರಾಂತ್ಯದಲ್ಲಿ ಪಾಕಿಸ್ತಾನ ಸೇನೆ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.

ಶರಣಾದ 22 ಆಫ್ಘಾನಿಸ್ತಾನ ಯೋಧರ ಮೇಲೆ ಗುಂಡಿನ ಸುರಿಮಳೆಗೈದ ತಾಲಿಬಾನ್ ಉಗ್ರರು!

Tap to resize

Latest Videos

undefined

ಉಗ್ರರ ದಾಳಿಯಲ್ಲಿ ಪಾಕಿಸ್ತಾನ ಸೇನೆಯ ಕ್ಯಾಪ್ಟನ್ ಹಾಗೂ 11 ಯೋಧರು ಹತರಾಗಿದ್ದಾರೆ. ಇನ್ನು ಕೆಲ ಯೋಧರನ್ನು ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಅನ್ನೋ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದೆ. ಇನ್ನು 15ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ.

ಉಗ್ರರ ಪರ ಕೆಲಸ : 11 ಸರ್ಕಾರಿ ನೌಕರರು ವಜಾ

ಉಗ್ರರ ದಾಳಿಯಲ್ಲಿ ಮೃತರಾದ ಪಾಕಿಸ್ತಾನ ಸೇನಾಧಿಕಾರಿಯನ್ನು ಅಬ್ದುಲ್ ಬಸಿತ್ ಎಂದು ಗುರುತಿಸಲಾಗಿದೆ. ಖೈಬರ್ ಹಾಗೂ ಖುರಾಮ್ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಉಗ್ರರ ವಿರುದ್ಧ ಕಾರ್ಯಚರಣೆ ನಡೆಸಿತ್ತು. ಸರ್ಕಾರವೇ ಉಗ್ರರನ್ನು ಪೋಷಿಸುತ್ತಿರುವಾಗ, ಸೇನೆ ನಡೆಸಿದ ಕಾರ್ಯಚರಣೆ ಉಗ್ರರನ್ನು ಕೆರಳಿಸಿತ್ತು ಇದಕ್ಕೆ ಪ್ರತಿಯಾಗಿ ಉಗ್ರರು ಸೇನೆ ಮೇಲೆ ದಾಳಿ ಮಾಡಿ ಪ್ರತೀಕಾರ ತೀರಿಸಿಕೊಂಡಿದ್ದಾರೆ.

click me!