ನೈಜೆರ್ ದೇಶದಲ್ಲಿ ಸಂಘರ್ಷ, ತಕ್ಷಣ ದೇಶ ತೊರೆಯುವಂತೆ ಭಾರತೀಯರಿಗೆ ಸೂಚನೆ!

Published : Aug 11, 2023, 05:14 PM ISTUpdated : Aug 11, 2023, 05:19 PM IST
ನೈಜೆರ್ ದೇಶದಲ್ಲಿ ಸಂಘರ್ಷ, ತಕ್ಷಣ ದೇಶ ತೊರೆಯುವಂತೆ ಭಾರತೀಯರಿಗೆ ಸೂಚನೆ!

ಸಾರಾಂಶ

ನೈಜರ್ ದೇಶದಲ್ಲಿರುವ ಭಾರತೀಯ ನಾಗರೀಕರಿಗ ತಕ್ಷಣವೇ ದೇಶ ತೊರೆಯುವಂತೆ ಭಾರತ ವಿದೇಶಾಂದ ಸಚಿವಾಲಯ ಸೂಚನೆ ನೀಡಿದೆ. ಇಷ್ಟೇ ಅಲ್ಲ ನೈಜರ್ ದೇಶಕ್ಕೆ ಪ್ರಯಾಣ ಮುಂದೂಡುವಂತೆ ಸೂಚಿಸಿದೆ.

ನವದೆಹಲಿ(ಆ.11) ರಿಪಬ್ಲಿಕ್ ಆಫ್ ನಿಜರ್‌ನಲ್ಲಿ ಸಂಘರ್ಷ ಜೋರಾಗಿದೆ. ದಂಗೆ ಎದ್ದಿರುವ ನೈಜರ್ ದೇಶದಲ್ಲಿ ಪರಿಸ್ಥಿತಿ ಶೋಚನೀಯವಾಗಿದೆ. ಚುನಾಯಿತ ಅಧ್ಯಕ್ಷ ಮೊಹಮ್ಮದ್ ಬಜೌಮ್ ಬಂಧಿಸಿರುವ ನೈಜರ್ ಸೇನಾ ಪಡೆ ತನ್ನ ವಶದಲ್ಲಿ ಇಟ್ಟುಕೊಂಡಿದೆ. ಇತ್ತ ನೈಜರ್ ಸೇನಾ ಪಡೆಗೆ ಆಫ್ರಿಕನ್ ರಾಷ್ಟ್ರಗಳು ಹಲವು ನಿರ್ಬಂಧ ವಿಧಿಸಿದೆ. ಈ ಬೆಳವಣಿಗೆಗಳಿಂದ ನೈಜರ್ ದೇಶದಲ್ಲಿ ದಂಗೆ ಶುರುವಾಗಿದೆ. ಅರಾಜಕತೆ ಸೃಷ್ಟಿಯಾಗಿದೆ. ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನಲೆಯಲ್ಲಿ ಭಾರತೀಯ ವಿದೇಶಾಂಗ ಇಲಾಖೆ ತನ್ನ ನಾಗರೀಕರಿಗೆ ಮಹತ್ವದ ಸೂಚನೆ ನೀಡಿದೆ. ಈಗಾಗಲೇ ನೈಜರ್ ದೇಶದ ವಿಮಾನ ಸೇವೆಗಳು ಸ್ಥಗಿತಗೊಂಡಿದೆ. ಪರಿಸ್ಥಿತಿ ಕೈಮೀರುತ್ತಿದ್ದು, ಭಾರತೀಯರು ನೈಜರ್ ದೇಶ ಪ್ರಯಾಣನ್ನು ಮುಂದೂಡವಂತೆ ಸೂಚಿಸಲಾಗಿದೆ.

ನೈಜರ್ ದೇಶದ ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದ್ಯ ನೈಜರ್ ದೇಶದ ವಿಮಾನಯಾನ ಸೇವೆಗಳು ಸ್ಥಗಿತಗೊಂಡಿದೆ. ಪರಿಸ್ಥಿತಿ ಕೈಮೀರುತ್ತಿದೆ. ಹೀಗಾಗಿ ನೈಜರ್ ದೇಶದಲ್ಲಿರುವ ಭಾರತೀಯ ನಾಗರೀಕರು ತಕ್ಷಣವೇ ನೈಜರ್ ದೇಶ ತೊರೆಯಬೇಕು.ಭಾರತೀ ನಾಗರೀಕರ ಸುರಕ್ಷತೆಗಾಗಿ ದೇಶ ತೊರೆಯುವುದು ಸದ್ಯಕ್ಕಿರುವ ಮಾರ್ಗ. ನೈಜರ್ ದೇಶದಲ್ಲಿರುವ ಭಾರತೀಯರ ರಾಯಭಾರ ಕಚೇರಿ ನಿಮಗೆ ನರೆವು ನೀಡಲಿದೆ. ಇದುವರೆಗೆ ರಾಯಭಾರ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳದೇ ಇರುವ ನಾಗರೀಕರು ಆನ್‌ಲೈನ್ ಮೂಲಕ ಅಥವಾ ದೂರವಾಣಿ ಮೂಲಕ ಮಾಡಿಕೊಳ್ಳಿ. ನೈಜರ್‌ನ ಭಾರತ ರಾಯಭಾರ ಕಚೇರಿ ಎಲ್ಲಾ ನೆರವು ನೀಡಲಿದೆ. ಇನ್ನು ನೈಜರ್ ದೇಶಕ್ಕೆ ಪ್ರಯಾಣ ಬೆಳೆಸುವ ಭಾರತೀಯರು ಸದ್ಯಕ್ಕೆ ಮುಂದೂಡುವುದು ಉತ್ತಮ. ಪರಿಸ್ಥಿತಿ ಸುಧಾರಿಸಿದ ಬಳಿಕ ಪ್ರಯಾಣ ಮುಂದುವರಿಸಿ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ.

ಪಾಕಿಸ್ತಾನ ತನ್ನ ಕೆಲಸವನ್ನು ನೋಡಿಕೊಳ್ಳಲಿ, ಭಾರತದ ತೀಕ್ಷ್ಣ ಉತ್ತರ

ನೈಜರ್ ದೇಶದ ಚುನಾಯಿತ ಸರ್ಕಾರವನ್ನೇ ಸೇನೆ ಪತನಗೊಳಿಸಿದೆ. ಇತ್ತ ನೈಜರ್ ಸೇನಾ ಕಮಾಂಡರ್ ಎಬಿ ಟಿಯಾನಿ ನೀಡಿದ ಘೋಷಣೆ ಆಫ್ರಿಕನ್ ದೇಶಗಳನ್ನು ಮತ್ತಷ್ಟು ಕೆರಳಿಸಿದೆ. ತಾನೇ ನೈಜರ್ ದೇಶದ ಅಧ್ಯಕ್ಷ ಎಂದು ಟಿಯಾನಿ ಘೋಷಣೆ ಮಾಡಿದ್ದಾರೆ. ಇತ್ತ ನೈಜೀರಿಯಾ ಸೇರಿದಂತೆ 15 ಆಫ್ರಿಕನ್ ರಾಷ್ಟ್ರಗಳು ತುರ್ತು ಸಭೆ ನಡೆಸಿದೆ. ನೈಜರ್ ದೇಶದ ಪರಿಸ್ಥಿತಿ ಅವಲೋಕಿಸಿದೆ. ಇಷ್ಟೇ ಅಲ್ಲ ವಶದಲ್ಲಿಟ್ಟುಕೊಂಡಿರುವ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಬಜೌಮ್ ಅವರನ್ನು ತಕ್ಷಣವೇ ಒಪ್ಪಿಸುವಂತೆ ಸೂಚಿಸಿದೆ. 

 

'ಅಂತಾರಾಷ್ಟ್ರೀಯ ಸಂಬಂಧದಲ್ಲಿ ವೋಟ್ ಬ್ಯಾಂಕ್ ರಾಜಕಾರಣ', ಅಮೆರಿಕದ ವರದಿಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ!

ಆದರೆ ಯಾವುದೇ ಸೂಚನೆಗೆ ಬಗ್ಗದ ನೈಜರ್ ಸೇನೆ ದಾಳಿ ಆರಂಭಿಸಿದೆ. ನೈಜರ್ ದೇಶದ ಜೊತೆಗಿನ ವಾಣಿಜ್ಯ ಹಾಗೂ ಇತರ ವ್ಯವಹಾರ ಸಂಬಂಧವನ್ನು ಆಫ್ರಿಕನ್ ದೇಶಗಳು ಕಡಿತಗೊಳಿಸಿದೆ. ವಶದಲ್ಲಿಟ್ಟುಕೊಂಡಿರುವ ಚುನಾಯಿತ ಅಧ್ಯಕ್ಷ ಮೊಹಮ್ಮದ್ ಬಜೌಮ್ ಅವರನ್ನು ಆಫ್ರಿಕನ್ ಒಕ್ಕೂಟಕ್ಕೆ ಒಪ್ಪಿಸದಿದ್ದರೆ, ದಾಳಿ ನಡೆಸುವುದಾಗಿ ಆಫ್ರಿಕನ್ ಒಕ್ಕೂಟ ಎಚ್ಚರಿಕೆ ನೀಡಿದೆ. ಇತ್ತ ಆಫ್ರಿಕನ್ ಸೇನಾ ದಾಳಿ ಎದುರಿಸಲು ನೈಜರ್ ದೇಶದ ಸೇನೆ ಕೂಡ ಸಜ್ಜಾಗಿದೆ. ಹೀಗಾಗಿ ನೈಜರ್ ದೇಶದಲ್ಲಿ  ದಂಗೆಯ ಜೊತೆಗೆ ಯುದ್ಧ ನಡೆಯುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!