ನೈಋತ್ಯ ಪೆಸಿಫಿಕ್‌ನಲ್ಲಿರುವ ಪಪುವಾ ನ್ಯೂಗಿನಿಯ ದ್ವೀಪ ರಾಷ್ಟ್ರದಲ್ಲಿ ಭೀಕರ ಭೂಕಂಪ ಸಂಭವಿಸದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಬಳಿಕ ದ್ವೀಪ ರಾಷ್ಟ್ರದಲ್ಲಿ ಪ್ರವಾಹ ಉಂಟಾಗಿದೆ.
ಪೆಸಿಫಿಕ್ (ಮಾ.25): ನೈಋತ್ಯ ಪೆಸಿಫಿಕ್‌ನಲ್ಲಿರುವ ಪಪುವಾ ನ್ಯೂಗಿನಿಯ ದ್ವೀಪ ರಾಷ್ಟ್ರದಲ್ಲಿ ಭೀಕರ ಭೂಕಂಪ ಸಂಭವಿಸದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹ ಪೀಡಿತ ಉತ್ತರ ಪಪುವಾ ನ್ಯೂಗಿನಿಯಾದಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಘಟನೆಯಲ್ಲಿ ಅಂದಾಜು 1,000 ಮನೆಗಳು ನಾಶವಾಗಿವೆ ಎಂದು ವರದಿ ತಿಳಿಸಿದೆ. ಪ್ರಾಂತ್ಯದ ಹೆಚ್ಚಿನ ಭಾಗಗಳು ಗಂಭೀರ ಹಾನಿಗೊಳಗಾಗಿದೆ.
ಖಲಿಸ್ತಾನಿ ಉಗ್ರ ಅರ್ಶ್‌ದೀಪ್ ಬಂಧಿಸಿ: ಕೆನಡಾದಲ್ಲಿ ಇರುವ ಬಗ್ಗೆ ಮಾಹಿತಿ ರವಾನಿಸಿದ ಭಾರತ
ಭಾನುವಾರ ಮುಂಜಾನೆ ಭೂಕಂಪ ಸಂಭವಿಸಿದ್ದು, ದೇಶದ ಸೆಪಿಕ್ ನದಿಯ ದಡದಲ್ಲಿ ನೆಲೆಸಿರುವ ಅನೇಕ ಹಳ್ಳಿಗಳಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಉಂಟಾಗಿದೆ. 4,33,000 ಕ್ಕೂ ಹೆಚ್ಚು ಜನರು ವಾಸಿಸುವ ಪೂರ್ವ ಸೆಪಿಕ್ ಪ್ರಾಂತ್ಯದ ಹೆಚ್ಚಿನ ಭಾಗಗಳು ಹಾನಿಗೊಳಗಾಗಿದೆ.
ಭೂಕಂಪದ ಕೇಂದ್ರಬಿಂದುವು ಅಂಬುಂಟಿ ಪಟ್ಟಣದ ಈಶಾನ್ಯಕ್ಕೆ 23 ಕಿಲೋಮೀಟರ್ ದೂರದಲ್ಲಿ ದಾಖಲಾಗಿದೆ. ಇದು ನೆರೆಯ ಇಂಡೋನೇಷ್ಯಾ ಮತ್ತು ಸೊಲೊಮನ್ ದ್ವೀಪಗಳ ಸಮೀಪದಲ್ಲಿ ಗೋಚರಿಸಿದ್ದು, ಇಲ್ಲಿ ಭೂಕಂಪನ ಮಾಮೂಲಿಯಾಗಿದೆ. ಯಾವುದೇ ಸುನಾಮಿ ಭೀತಿ ಇಲ್ಲ ಎಂದು ಫೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಸ್ಪಷ್ಟಪಡಿಸಿದೆ.
ಉಜ್ಜಯಿನಿ ದೇವಾಲಯದ ಗರ್ಭಗುಡಿಯಲ್ಲಿ ಬೆಂಕಿ ಅನಾಹುತ, 13 ಅರ್ಚಕರಿಗೆ ಗಂಭೀರ ಗಾಯ!
ಸ್ಥಳೀಯ ಅಧಿಕಾರಿಗಳು 5 ಸಾವಿನ ಬಗ್ಗೆ ದೃಢಪಟಿಸಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಆಗ್ನೇಯ ಏಷ್ಯಾದಿಂದ ಆರಂಭವಾಗಿ ಫೆಸಿಫಿಕ್ವರೆಗೆ ಹರಡಿರುವ ಭೂಕಂಪದ ರಿಂಗ್ ಆಫ್ ಫೈರ್ ಪರಿದಿಯಲ್ಲಿರುವ ಪಪುವಾ ನ್ಯೂಗಿನಿಯಾದಲ್ಲಿ ಭೂಕಂಪಗಳು ಸಾಮಾನ್ಯವಾಗಿದೆ.