ವಿಶ್ವಸಂಸ್ಥೆಯಲ್ಲಿ ಹುತಾತ್ಮ ಯೋಧರ ಸ್ಮಾರಕ: ಭಾರತದ ನಿರ್ಣಯಕ್ಕೆ ಜಯ

By Kannadaprabha NewsFirst Published Jun 16, 2023, 6:36 AM IST
Highlights

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗಲೇ ಪ್ರಾಣಾರ್ಪಣೆ ಮಾಡಿದ ಭಾರತದ 177 ಸೇರಿ ವಿಶ್ವದ ವಿವಿಧ ದೇಶಗಳ 4200 ಯೋಧರನ್ನು ಗೌರವಿಸಲು ವಿಶ್ವಸಂಸ್ಥೆಯಲ್ಲಿ ಗೋಡೆ ಸ್ಮಾರಕವೊಂದನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಪಿಟಿಐ ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗಲೇ ಪ್ರಾಣಾರ್ಪಣೆ ಮಾಡಿದ ಭಾರತದ 177 ಸೇರಿ ವಿಶ್ವದ ವಿವಿಧ ದೇಶಗಳ 4200 ಯೋಧರನ್ನು ಗೌರವಿಸಲು ವಿಶ್ವಸಂಸ್ಥೆಯಲ್ಲಿ ಗೋಡೆ ಸ್ಮಾರಕವೊಂದನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಭಾರತ ಮಂಡನೆ ಮಾಡಿದ್ದ ನಿರ್ಣಯ ಸರ್ವಾನುಮತದಿಂದ ಆಯ್ಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜೂ.21ರಿಂದ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದು, ಮೊದಲ ದಿನವೇ ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮುನ್ನ ಹುತಾತ್ಮ ಯೋಧರನ್ನು ಗೌರವಿಸಲು ಭಾರತ ಮಂಡನೆ ಮಾಡಿದ್ದ ನಿರ್ಣಯ 190 ದೇಶಗಳ ಬೆಂಬಲದೊಂದಿಗೆ ಸರ್ವಾನುಮತದಿಂದ ಅಂಗೀಕಾರವಾಗಿರುವುದು ರಾಯಭಾರ ಅಧಿಕಾರಿಗಳ ಹಿರಿಮೆಗೆ ಪಾತ್ರವಾಗಿದೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳು (peacekeeping force) ಸೈಪ್ರಸ್‌ (Cyprus), ಕಾಂಗೋ(Congo), ಲೆಬನಾನ್‌(Lebanon), ಮಧ್ಯಪ್ರಾಚ್ಯ(Middle East), ಪಶ್ಚಿಮ ಸಹಾರಾ ಹಾಗೂ ಕೇಂದ್ರ ಆಫ್ರಿಕಾದಲ್ಲಿ ನಿಯೋಜನೆಯಾಗಿವೆ. ಈ ಶಾಂತಿಪಾಲನಾ ಪಡೆಗೆ ಅತಿ ಹೆಚ್ಚು ಯೋಧರನ್ನು ಕಳುಹಿಸುವ 3ನೇ ದೇಶ ಭಾರತವಾಗಿದ್ದು, ಹಾಲಿ 6000 ಯೋಧರು ಹಾಗೂ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ನಿರ್ಣಯ ಅಂಗೀಕಾರವಾದ 3 ವರ್ಷದೊಳಗೆ ಸ್ಮಾರಕ ನಿರ್ಮಾಣ ಪೂರ್ಣಗೊಳ್ಳಬೇಕಾಗುತ್ತದೆ. ನಿರ್ಣಯವನ್ನು ಬೆಂಬಲಿಸಿದ ದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಧನ್ಯವಾದ ಸಲ್ಲಿಸಿದ್ದಾರೆ.

Latest Videos

ಅಪ್ಪ ನನಗೇನೂ ಬೇಡಾ, ನೀನು ಎದ್ದು ಬಾ: ಹುತಾತ್ಮ ಯೋಧನ ಪುತ್ರಿಯ ಕಣ್ಣೀರು

ಮನ್‌ ಕೀ ಬಾತ್‌ಗೆ 100ರ ಸಂಭ್ರಮ: ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರ; ಪ್ರತಿ ಸಂಚಿಕೆಯೂ ವಿಶೇಷ ಎಂದ ನಮೋ

click me!